
ಓದು ಮುಗಿಯುತ್ತಿದ್ದಂತೆ ಹೆಚ್ಚಿನವರು ವಿದೇಶದತ್ತ (foreign) ಮುಖ ಮಾಡುತ್ತಾರೆ. ವರ್ಷಗಳು ಉರುಳಿದ್ದಂತೆ ಮತ್ತೆ ತಾಯ್ನಾಡಿಗೆ ಮರಳಬೇಕೆನ್ನುವ ಆಸೆ ಆಗೋದು ಸಹಜ. ಇಲ್ಲೊಬ್ಬರು ಟೆಕ್ಕಿ ಮೂರು ವರ್ಷಗಳ ಹಿಂದೆ ಅಮೆರಿಕದ ಉದ್ಯೋಗ ತೊರೆದು ಭಾರತ ಮರಳಿದ್ದಾರೆ. ಭಾರತಕ್ಕೆ ಬಂದ ನಂತರದ ತನಗಾದ ಅನುಭವದ ಹಂಚಿಕೊಂಡಿದ್ದಾರೆ. ಸದ್ಯಕ್ಕೆ ಈ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲೋ ವೈರಲ್ ಆಗಿದೆ.
ಉಜ್ವಲ್ ಚಡ್ಡಾ (Ujjwal Chada) ಎಂಬುವವರು ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ಮೂರು ವರ್ಷಗಳ ಹಿಂದೆ ಮೈಕ್ರೋಸಾಫ್ಟ್‌ನಲ್ಲಿಉತ್ತಮ ಪ್ಯಾಕೇಜ್‌ನೊಂದಿಗೆ ಕೆಲಸ ಮಾಡುತ್ತಿದ್ದ ನಾನು ಅಮೆರಿಕವನ್ನು ಬಿಟ್ಟು ಭಾರತಕ್ಕೆ ಮರಳಿದೆ. ವಿದೇಶಕ್ಕಿಂತ ಭಾರತದಲ್ಲಿ ಕಡಿಮೆ ಸಂಪಾದಿಸುತ್ತೇನೆ. ನನ್ನ ಸಂಬಳ ನಿಮಗೆ ತೋರಿಸಲು ಸಾಧ್ಯವಾಗದಷ್ಟು ನಾನು ಗಳಿಸಿದ್ದು ಇಲ್ಲಿದೆ ಎಂದು ಬರೆದುಕೊಂಡಿದ್ದಾರೆ.
3 years ago I left the US, my Job at Microsoft and moved back to India.
I make less than I would have if I’d stayed.
Here’s everything I gained that my salary can’t show you 🧵👇
— Ujjwal Chadha (@ujjwalscript) September 2, 2026
ಅಮೆರಿಕದಲ್ಲಿ ನೆಲೆಸಿದ್ದಾಗ ವೀಸಾ, ಗ್ರೀನ್ ಕಾರ್ಡ್ ಹಾಗೂ ಕೆಲಸದ ಅಭದ್ರತೆಯ ಬಗ್ಗೆ ಚಿಂತೆ ಕಾಡಿತ್ತು. ಆದರೆ ನನ್ನ ನಿರ್ಧಾರವು ಕೆಲಸ ಮಾಡಲು ಸ್ವಾತಂತ್ರ್ಯ ನೀಡಿದೆ. ಅಮೆರಿಕದಲ್ಲಿ ನೆಲೆಸಿದ್ದಾಗ ವರ್ಷಕ್ಕೆ ಒಮ್ಮೆ ಬಂದು ಒಂದು ವಾರ ಹೆತ್ತವರ ಜತೆಗೆ ಕಳೆಯಬೇಕಾಗಿತ್ತು. ದುಡ್ಡು ಯಾವಾಗ ಬೇಕಾದ್ರು ಮಾಡ್ಬಹುದು. ಆದರೆ ಕಳೆದು ಹೋದ ಸಮಯ ಮತ್ತೆ ಬರಲ್ಲ ಎಂದು ಹೇಳಿದ್ದಾರೆ. ಈ ತಕ್ಷಣವೇ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗುತ್ತಿದೆ. ಆದರೆ ಇಲ್ಲಿ ನಾನು ಅಂದುಕೊಂಡಂತೆ ಬದುಕುತ್ತಿದ್ದೇನೆ. ಎಲ್ಲವನ್ನು ಪೂರ್ಣಗೊಳಿಸುತ್ತಿದ್ದೇನೆ. ಸಂಬಳ ಕಡಿಮೆಯಿದ್ರೂ ಮನಸ್ಸಿಗೆ ನೆಮ್ಮದಿ ಬಹಳ ಮುಖ್ಯ ಎಂದು ವಿವರಿಸಿದ್ದಾರೆ.
ಇದನ್ನೂ ಓದಿ: ಆರೋಗ್ಯ ಸರಿಯಿಲ್ಲ, ವರ್ಕ್ ಫ್ರಮ್ ಹೋಮ್ ಮಾಡ್ತೇನೆ; ಉದ್ಯೋಗಿಯ ಮಾತಿಗೆ ಮ್ಯಾನೇಜರ್ ಏನಂದ್ರು ನೋಡಿ
ಈ ಪೋಸ್ಟ್ ಒಂದು ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ನಿಮ್ಮ ಮಾತು ನಿಜ, ಎಲ್ಲೇ ಇರಲಿ ನೆಮ್ಮದಿ ಮುಖ್ಯ ಎಂದಿದ್ದಾರೆ. ಮತ್ತೊಬ್ಬರು, ಕಡಿಮೆ ದುಡಿದ್ರೂ ಹುಟ್ಟೂರಿನಲ್ಲಿ ಇರುವ ಖುಷಿ ಬೇರೆಲ್ಲೂ ಸಿಗಲ್ಲ ಎಂದು ಹೇಳಿದ್ದಾರೆ. ಇನ್ನೊಬ್ಬರು, ನಿಮ್ಮ ನಿರ್ಧಾರ ನಿಮ್ಗೆ ಖುಷಿ ನೀಡಿದರೆ ಸಾಕು ಎಂದು ಕಾಮೆಂಟ್ ನಲ್ಲಿ ತಿಳಿಸಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ