Viral: ಎದ್ದೇಳೇ ಪ್ಲೀಸ್… ಗೆಳತಿಯ ಮೃತ ದೇಹದ ಮುಂದೆ ಗೋಗರೆದ ಆನೆ; ಭಾವುಕ ದೃಶ್ಯ ವೈರಲ್‌

ಆನೆಗಳ ತುಂಟಾಟ, ಪ್ರೀತಿ ವಾತ್ಸಲ್ಯಗಳಿಗೆ ಸಂಬಂಧಿಸಿದ ಹಲವಾರು ವಿಡಿಯೋಗಳು ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿರುತ್ತವೆ. ಇಲ್ಲೊಂದು ಹೃದಯ ವಿದ್ರಾವಕ ದೃಶ್ಯ ವೈರಲ್‌ ಆಗಿದ್ದು, ಆನೆಯೊಂದು ತನ್ನ ಪ್ರಾಣ ಸ್ನೇಹಿತೆಯ ಮೃತದೇಹವನ್ನು ಬಿಗಿದಪ್ಪಿ ಗೋಗರೆದಿದೆ. 25 ವರ್ಷಗಳಿಂದ ಜೊತೆಗಿದ್ದ ಪ್ರಾಣ ಸ್ನೇಹಿತೆಯನ್ನು ಕಳೆದುಕೊಂಡ ನೋವಲ್ಲಿ ಆನೆ ಕಣ್ಣೀರು ಹಾಕಿದ್ದು, ಈ ಭಾವುಕ ದೃಶ್ಯ ಎಲ್ಲರ ಕಣ್ಣಂಚನ್ನು ತೇವಗೊಳಿಸಿದೆ.

Viral: ಎದ್ದೇಳೇ ಪ್ಲೀಸ್… ಗೆಳತಿಯ ಮೃತ ದೇಹದ ಮುಂದೆ ಗೋಗರೆದ ಆನೆ; ಭಾವುಕ ದೃಶ್ಯ ವೈರಲ್‌
Elephant Mourns Death Of Her Companion Of 25 Years
Edited By:

Updated on: Mar 16, 2025 | 11:55 AM

ಅತ್ಯಂತ ಬುದ್ಧಿವಂತ ಪ್ರಾಣಿಗಳಾಗಿರುವ ಆನೆಗಳು (Elephants) ಮನುಷ್ಯರಂತೆಯೇ (Humans) ಭಾವನೆಗಳ (Emotions) ಜೊತೆ ಬದುಕುವು ಸಂಘ ಜೀವಿ. ಯಾವಾಗಲೂ ಒಗ್ಗಾಟ್ಟಾಗಿ ಜೀವಿಸುವ ಇವುಗಳು ನಮ್ಮಂತೆಯೇ ಕುಟುಂಬ, ಸ್ನೇಹಕ್ಕೆ ಹೆಚ್ಚಿನ ಬೆಲೆ ಕೊಡುತ್ತವೆ. ಗಜಪಡೆಗಳ ಪ್ರೀತಿ (Love), ಸ್ನೇಹ (friendship), ಮಮತೆಗೆ ಸಂಬಂಧಪಟ್ಟ ಹಲವಾರು ವಿಡಿಯೋಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತವೇ ಇರುತ್ತವೆ. ಇದೀಗ ಇಲ್ಲೊಂದು ಹೃದಯ ವಿದ್ರಾವಕ (Heartbreaking) ದೃಶ್ಯ ವೈರಲ್‌ ಆಗಿದ್ದು, ಆನೆಯೊಂದು ತನ್ನ ಸ್ನೇಹಿತೆಯ ಮೃತದೇಹವನ್ನು ಬಿಗಿದಪ್ಪಿ ನನ್ನ ಬಿಟ್ಟೋಗ್ಬೇಡ ಎಂದು ಗೋಗರೆದಿದಿದೆ. 25 ವರ್ಷಗಳಿಂದ ಜೊತೆಗಿದ್ದ ಪ್ರಾಣ ಸ್ನೇಹಿತೆಯನ್ನು ಕಳೆದುಕೊಂಡ ದುಃಖದಲ್ಲಿ ಆನೆ ಕಣ್ಣೀರು ಹಾಕಿದ್ದು, ಈ ಹೃದಯ ವಿದ್ರಾವಕ ದೃಶ್ಯ ಎಲ್ಲರ ಕಣ್ಣಂಚಲ್ಲೂ ನೀರು ತರಿಸಿದೆ.

ರಷ್ಯಾದಲ್ಲಿ ನಡೆದ ಘಟನೆ ಇದಾಗಿದ್ದು, ಸರ್ಕಸ್ ಆನೆಯೊಂದು ತನ್ನ 25 ವರ್ಷಗಳ ಒಡನಾಡಿಯನ್ನು ಕಳೆದುಕೊಂಡು ತೀವ್ರ ಶೋಕ ವ್ಯಕ್ತಪಡಿಸಿದೆ. ಈ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ಭಾರೀ ವೈರಲ್‌ ಆಗುತ್ತಿದೆ. ಜೆನ್ನಿ ಮತ್ತು ಮ್ಯಾಗ್ಡಾ ಎಂಬ ಈ ಎರಡು ಆನೆಗಳು ಸುಮಾರು 25 ವರ್ಷಗಳ ಕಾಲ ಪರಸ್ಪರ ಜೊತೆಗಿದ್ದವು ಹಾಗೂ ಈ ಎರಡೂ ಆನೆಗಳು ಇತ್ತೀಚೆಗೆ ನಿವೃತ್ತಿ ಜೀವನವನ್ನು ನಡೆಸುತ್ತಿದ್ದವು. ಆದ್ರೆ ಇದೀಗ ಅನಾರೋಗ್ಯಕ್ಕೆ ತುತ್ತಾಗಿದ್ದ ಜೆನ್ನಿ ಇದ್ದಕ್ಕಿದ್ದಂತೆ ಕೆಳಗೆ ಬಿದ್ದು ಸಾವನ್ನಪ್ಪಿದ್ದು, ಗೆಳತಿಯ ಸಾವಿನ ಸುದ್ದಿಯನ್ನು ತಿಳಿದು ಮ್ಯಾಗ್ಡಾಳ ಹೃದಯ ಒಡೆದು ಹೋಗಿದೆ. ಮ್ಯಾಗ್ಡಾ ತನ್ನ ಗೆಳತಿಯ ಮೃತದೇಹದ ಪಕ್ಕ ನಿಂತು ಆಕೆಯನ್ನು ಎಬ್ಬಿಸಲು ಪ್ರಯತ್ನಿಸಿದ್ದು, ಕೊನೆಗೆ ಆಕೆ ಇನ್ಯಾವತ್ತೂ ಕಣ್ಣು ತೆರೆಯಲ್ಲ ಎಂದು ಗೊತ್ತಾಗಿ ಕೊನೆಗೆ ಭಾವೋದ್ವೇಗಕ್ಕೆ ಒಳಗಾಗಿ ಕಣ್ಣೀರು ಹಾಕಿದೆ.

ಇದನ್ನೂ ಓದಿ
ವಯಸ್ಸು 108 ಆದ್ರೂ ಕುಂದದ ಜೀವನೋತ್ಸಾಹ
ಸೂಪ್‌ಗೆ ಮೂತ್ರ ವಿಸರ್ಜನೆ ಮಾಡಿ ಹುಚ್ಚಾಟ ಮೆರೆದ ಯುವಕರು
ತಮ್ಮ ಮಗುವಿನ ಸಲುವಾಗಿ ಸಹ ಪ್ರಯಾಣಿಕರಿಗೆ ಕ್ಯೂಟ್‌ ಪತ್ರದೊಂದಿಗೆ ಗಿಫ್ಟ್‌
ಪ್ಲಾಸ್ಟಿಕ್‌ ಬಾಟಲಿಯಿಂದ ತಯಾರಾದ ಸನ್‌ಲೈಟ್‌ ಪವರ್ಡ್‌ ಬಲ್ಬ್‌ ಇದು

ಇದನ್ನೂ ಓದಿ: ಹನಿಮೂನ್ ನಲ್ಲಿದ್ದಾಗ ಹಡಗು ಮುಳುಗಡೆ, ಒಂದೇ ಒಂದು ಲೈಫ್ ಜಾಕೆಟ್‌ನಿಂದ ಬದುಕುಳಿದ ಬ್ರೆಜಿಲಿಯನ್ ದಂಪತಿಗಳು

ಈ ಕುರಿತ ವಿಡಿಯೋವನ್ನು CollinRugg ಹೆಸರಿನ ಎಕ್ಸ್‌ ಖಾತೆಯಲ್ಲಿ ಶೇರ್‌ ಮಾಡಲಾಗಿದೆ. ವೈರಲ್‌ ಆಗುತ್ತಿರುವ ವಿಡಿಯೋದಲ್ಲಿ ಆನೆಯೊಂದು ತನ್ನ ಗೆಳತಿಯ ಮೃತ ದೇಹದ ಸುತ್ತ ತಿರುಗುತ್ತಾ ಅದನ್ನು ಎಬ್ಬಿಸಲು ಪ್ರಯತ್ನಿಸುತ್ತಿರುವಂತಹ ದೃಶ್ಯವನ್ನು ಕಾಣಬಹುದು. ಎಷ್ಟೇ ಕೂಗಿದರೂ ಗೆಳತಿ ಎಚ್ಚರಗೊಳ್ಳದಿದ್ದಾಗ ಭಾವೋದ್ವೇಗಕ್ಕೆ ಒಳಗಾಗಿ ಆಕೆಯನ್ನು ತಬ್ಬಿಕೊಂಡು ಕಣ್ಣೀರು ಹಾಕಿದೆ.

ಮಾರ್ಚ್‌ 15 ರಂದು ಹಂಚಿಕೊಳ್ಳಲಾದ ಈ ವಿಡಿಯೋ 17 ಮಿಲಿಯನ್‌ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಆನೆಗಳು ಆಳವಾದ ಭಾವನಾತ್ಮಕ ಜೀವಿಗಳು ಹೀಗಿರುವಾಗ ಗೆಳತಿಯ ಅಗಲಿಕೆಯ ನೋವನ್ನು ಹೇಗೆ ಸಹಿಸಿಕೊಳ್ಳುತ್ತೋʼ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಇನ್ನೊಬ್ಬ ಬಳಕೆದಾರರು ʼನಿಜಕ್ಕೂ ಈ ದೃಶ್ಯ ಹೃದಯ ವಿದ್ರಾವಕವಾಗಿದೆʼ ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರರು ʼನಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡಾಗ ಉಂಟಾಗುವ ನೋವು ಅಷ್ಟಿಷ್ಟಲ್ಲʼ ಎಂಬ ಕಾಮೆಂಟ್‌ ಬರೆದುಕೊಂಡಿದ್ದಾರೆ.

ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ