‘ನಾವೆಲ್ಲರೂ ಇವರಿಂದ ಕಲಿಯುವುದಿದೆ’ ಎಂದು ಸ್ಪೂರ್ತಿ ತುಂಬುವ ವಿಡಿಯೋ ಹಂಚಿಕೊಂಡ ಸಚಿನ್ ತೆಂಡೂಲ್ಕರ್

Sachin Tendulkar: ಸಚಿನ್ ಅವರು ಹರ್ಷದ್ ಅವರನ್ನು ಪರಿಚಯಿಸುವ ಮೂಲಕ ಅವರ ಸಾಧನೆಯ ಬಗ್ಗೆ ವಿವರಿಸಿದ್ದಾರೆ. ಹರ್ಷದ್ ಅವರು ತಮ್ಮ ಸ್ನೇಹಿತರೊಡನೆ ಕೇರಂ ಆಡುತ್ತಿರುವ ದೃಶ್ಯವನ್ನು ಹಂಚಿಕೊಂಡ ಸಚಿನ್ ಒಂದೊಳ್ಳೆಯ ಸಂದೇಶವನ್ನು ಸಾರಿದ್ದಾರೆ

ನಾವೆಲ್ಲರೂ ಇವರಿಂದ ಕಲಿಯುವುದಿದೆ ಎಂದು ಸ್ಪೂರ್ತಿ ತುಂಬುವ ವಿಡಿಯೋ ಹಂಚಿಕೊಂಡ ಸಚಿನ್ ತೆಂಡೂಲ್ಕರ್
ಸ್ಪೂರ್ತಿ ತುಂಬುವ ವಿಡಿಯೋ ಹಂಚಿಕೊಂಡ ಸಚಿನ್ ತೆಂಡೂಲ್ಕರ್
Edited By:

Updated on: Jul 27, 2021 | 1:07 PM

ಕ್ರಿಕೇಟರ್ ಸಚಿನ್ ತೆಂಡೂಲ್ಕರ್( Sachin Tendulkar) ಮಂಗಳವಾರ ಸ್ಪೂರ್ತಿ ತುಂಬುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ವಿಡಿಯೋ ನೋಡಿದ ಅಭಿಮಾನಿಗಳು ವಿಡಿಯೋವನ್ನು ಮೆಚ್ಚಿಕೊಂಡಿದ್ದು ಅಭಿಪ್ರಾಯಗಳನ್ನು ತಿಳಿಸುತ್ತಿದ್ದಾರೆ. ಕೈಗಳಿಲ್ಲದ ಯುವಕ ಕಾಲಿನಲ್ಲಿಯೇ ಕೇರಂ (Carrom) ಆಟ ಆಡುತ್ತಿರುವ ವಿಡಿಯೋವನ್ನು ಸಚಿನ್ ಅವರು ಹಂಚಿಕೊಂಡಿದ್ದು, ವಿಡಿಯೋ ಎಲ್ಲರಿಗೂ ಸ್ಪೂರ್ತಿ ತುಂಬುವಂತಿದೆ.

ಇಲ್ಲಿರುವ ಹರ್ಷದ್ ಸಾಧ್ಯವಾಗದ ಕೆಲವನ್ನು ಸಾಧಿಸಿ ತೋರಿಸಿದ್ದಾರೆ. ಸಚಿನ್ ಅವರು ಹರ್ಷದ್ ಅವರನ್ನು ಪರಿಚಯಿಸುವ ಮೂಲಕ ಅವರ ಸಾಧನೆಯ ಬಗ್ಗೆ ವಿವರಿಸಿದ್ದಾರೆ. ಹರ್ಷದ್ ಅವರು ತಮ್ಮ ಸ್ನೇಹಿತರೊಡನೆ ಕೇರಂ ಆಡುತ್ತಿರುವ ದೃಶ್ಯವನ್ನು ಹಂಚಿಕೊಂಡ ಸಚಿನ್ ಒಂದೊಳ್ಳೆಯ ಸಂದೇಶವನ್ನು ಸಾರಿದ್ದಾರೆ. ಅಸಾಧ್ಯ ಎಂಬ ಮಾತು ಅವರ ನಿರ್ಧಾರದಲ್ಲಿದೆ ಎಂದು ಹೇಳುವ ಮೂಲಕ ವಿಡಿಯೋ ಹಂಚಿಕೊಳ್ಳಲಾಗಿದೆ.

ಇವರ ಮನಸ್ಥಿತಿ ಎಲ್ಲರಿಗೆ ಸ್ಪೂರ್ತಿ ತುಂಬವಂತಿದೆ. ಯಾವುದೂ ಕೂಡಾ ಅಸಾಧ್ಯವಾದುದಲ್ಲ. ಇವರಿಂದ ನಾವು ಕಲಿಯುವುದು ತುಂಬಾ ಇದೆ ಎಂದು ಸಚಿನ್ ಹೇಳಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ವಿಡಿಯೋವನ್ನು ಸಚಿನ್ ಹಂಚಿಕೊಂಡ ಬಳಿಕ 86,000 ವೀಕ್ಷಣೆಗಳನ್ನು ಗಳಿಸಿಕೊಂಡಿದೆ. 12,000 ಕ್ಕೂ ಹೆಚ್ಚು ಲೈಕ್ಸ್​ಗಳು ಲಭ್ಯವಾಗಿವೆ. ನೆಟ್ಟಿಗರು ತಮ್ಮ ಅಭಿಪ್ರಾಯಗಳನ್ನು, ಅನಿಸಿಕೆಗಳನ್ನು ಕಾಮೆಂಟ್ ವಿಭಾಗದಲ್ಲಿ ಹಂಚಿಕೊಳ್ಳುತ್ತಿದ್ದಾರೆ.

ಸೂಪರ್ ವಿಡಿಯೋ! ಯಾವುದೋ ಒಂದು ಸಾಧನೆಯತ್ತ ಸಾಗಲು ಮನಸ್ಥಿತಿ ಮುಖ್ಯ. ಧೈರ್ಯ ಮತ್ತು ಬುದ್ಧಿವಂತಿಕೆಯ ಜತೆಗೆ ಶ್ರಮವಹಿಸಿದರೆ ಅಸಾಧ್ಯವಾದುದನ್ನೂ ಸಾಧಿಸಬಹುದು ಎಂದು ನೆಟ್ಟಿಗರೋರ್ವರು ಹೇಳಿದ್ದಾರೆ. ಜೀವನದಲ್ಲಿ ಸ್ಪೂರ್ತಿ ತುಂಬುವ ವಿಡಿಯೋವಿದು ಎಂದು ಮತ್ತೊಬ್ಬರು ಹೇಳಿದ್ದಾರೆ.

ಇದನ್ನೂ ಓದಿ:

2011ರಲ್ಲಿ ವಿಶ್ವಕಪ್​ ಗೆದ್ದಿದ್ದು ಟೀಮ್ ಇಂಡಿಯಾ ಮಾತ್ರ ಅಲ್ಲ, ಇಡೀ ಭಾರತವೇ ಅದನ್ನು ಗೆದ್ದಿತು: ಸಚಿನ್​ ತೆಂಡೂಲ್ಕರ್

ಕೈಗಳಿಲ್ಲದ ಯುವಕ ಕಾಲಿನಲ್ಲಿಯೇ ಕೇರಂ ಆಟ ಆಡ್ತಾರೆ! ನೆಟ್ಟಿಗರ ಹೃದಯ ಗೆದ್ದ ವಿಡಿಯೋ ವೈರಲ್