AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಬ್ಬಬ್ಬಾ! ಮರಳುಗಾಳಿ ಬೀಸುವ ಆರ್ಭಟ ನೋಡಿದ್ದೀರಾ?

ಸ್ಥಳೀಯರೋರ್ವರು ಬೃಹತ್ ಮರಳುಗಾಳಿ ಬೀಸುವುದನ್ನು ಚಿತ್ರೀಕರಿಸಿದ್ದು, ಆ ವಿಡಿಯೋವನ್ನು ಇಲ್ಲಿ ನೋಡಬಹುದಾಗಿದೆ. ಮರಳುಗಾಳಿಯಿಂದ ರಕ್ಷಿಸಿಕೊಳ್ಳಲು ನಗರವಾಸಿಗಳು ಕನ್ನಡಕ, ಮಾಸ್ಕ್ ಮುಂತಾದವುಗಳನ್ನು ಬಳಸಿದ್ದರು.

ಅಬ್ಬಬ್ಬಾ! ಮರಳುಗಾಳಿ ಬೀಸುವ ಆರ್ಭಟ ನೋಡಿದ್ದೀರಾ?
ಮರಳುಗಾಳಿಯ ದೃಶ್ಯ
Follow us
TV9 Web
| Updated By: guruganesh bhat

Updated on: Jul 27, 2021 | 5:39 PM

ಚೀನಾದ ಡನ್​ಹ್ಯಾಂಗ್ ನಗರದಲ್ಲಿ ಬೀಸಿರುವ ಮರಳುಗಾಳಿಗೆ ಅಲ್ಲಿಯ ಜನರು ತತ್ತರಿಸಿಹೋಗಿದ್ದಾರೆ. ಗೋಬಿ ಮರುಭೂಮಿಯ ಅಂಚಿನಲ್ಲಿರುವ ಡನ್​ಹ್ಯಾಂಗ್ ನಗರದಲ್ಲಿ ಸೋಮವಾರ ಭಾರೀ ಪ್ರಮಾಣದ ಮರಳುಗಾಳಿ ಬೀಸಿದೆ. ಮರಳುಗಾಳಿಯ ಆರ್ಭಟಕ್ಕೆ ಹೆದ್ದಾರಿ ಕಾಣದೇ ವಾಹನ ಸವಾರರು ತೊಂದರೆ ಅನುಭವಿಸುತ್ತಿದ್ದಾರೆ. ಮರಳುಗಾಳಿಯ ಆರ್ಭಟ ಹೇಗಿತ್ತೆಂದರೆ ಸುಮಾರು 100 ಮೀಟರ್ ಎತ್ತರದವರೆಗೂ ಅದು ವ್ಯಾಪಿಸಿತ್ತು ಎಂದು ಡನ್​ಹ್ಯಾಂಗ್​ನ ನಿವಾಸಿಗಳು ತಿಳಿಸಿದ್ದಾರೆ. ಮರಳುಗಾಳಿ (Sandstorm) ಎಷ್ಟು ದಟ್ಟವಾಗಿತ್ತೆಂದರೆ 5 ಮೀಟರ್ ಆಚೆಗಿನ ಏನೂ ಕಾಣುತ್ತಿರಲಿಲ್ಲ ಎಂದು ಪ್ರತ್ಯಕ್ಷದರ್ಶಿಗಳು ವಿವರಿಸಿದ್ದಾರೆ.

ಸೋಮವಾರ ಮಧ್ಯಾಹ್ನ 3 ಗಂಟೆಯ ಹೊತ್ತಿಗೆ ಮರಳುಗಾಳಿ ಬೀಸಲು ಆರಂಭಿಸಿದೆ. ಅಪಾಯದ ಸುಳಿವು ಬಡಿದ ತಕ್ಷಣ ಎಚ್ಚೆತ್ತ ಸ್ಥಳೀಯ ಪೊಲೀಸರು ಹತ್ತಿರದ ಅಂಗಡಿಗಳನ್ನು ಬಂದ್ ಮಾಡಿಸಿದ್ದಾರೆ. ವಾಹನ ಸವಾರರಿಗೆ ಸ್ವಲ್ಪ ಕಾಲ ಪ್ರಯಾಣವನ್ನು ಮುಂದೂಡುವಂತೆ ವಿನಂತಿ ಮಾಡಿದ್ದಾರೆ.

ಸ್ಥಳೀಯರೋರ್ವರು ಬೃಹತ್ ಮರಳುಗಾಳಿ ಬೀಸುವುದನ್ನು ಚಿತ್ರೀಕರಿಸಿದ್ದು, ಆ ವಿಡಿಯೋವನ್ನು ಇಲ್ಲಿ ನೋಡಬಹುದಾಗಿದೆ. ಮರಳುಗಾಳಿಯಿಂದ ರಕ್ಷಿಸಿಕೊಳ್ಳಲು ನಗರವಾಸಿಗಳು ಕನ್ನಡಕ, ಮಾಸ್ಕ್ ಮುಂತಾದವುಗಳನ್ನು ಬಳಸಿದ್ದರು.

ಕೆಲವು ದಿನಗಳ ಹಿಂದಷ್ಟೇ ಅಮೆರಿಕದ ಉತಾಹ್ ನಗರದಲ್ಲಿ ಭಾರಿ ಮರಳುಗಾಳಿಯೊಂದು ಬೀಸಿತ್ತು. ಅದರ ಪರಿಣಾಮವಾಗಿ 8 ಜನರು ಮೃತಪಟ್ಟಿದ್ದರು ಎಂಬುನ್ನು ಇಲ್ಲಿ ಉಲ್ಲೇಖಿಸಬಹುದು. ಈ ವಿಡಿಯೋವನ್ನು ವೀಕ್ಷಿಸಿದರೆ ಮರಳುಗಾಳಿಯು ಎಷ್ಟೆಲ್ಲ ಅನಾಹುತಗಳನ್ನು ಸೃಷ್ಟಿಸಬಹುದು ಎಂಬುದನ್ನು ನೆನೆಸಿಕೊಂಡರೇ ಭಯವಾಗದಿರದು.

ಇದನ್ನೂ ಓದಿ: 

Viral News: ಕೈಕಾಲುಗಳನ್ನು ವಿಸ್ತರಿಸುವ ಮೂಲಕ ಮಾನವರನ್ನು 5.6 ಇಂಚು ಎತ್ತರವಾಗಿಸಬಹುದು! ವಿಲಕ್ಷಣ ಹೇಳಿಕೆ ನೀಡಿ ವೈರಲ್​ ಆದ ವೈದ್ಯ

Viral Video: ಸೀರೆಯುಟ್ಟು ರೈಲಿನ ಕಿಟಕಿಯಲ್ಲೇ ಒಳನುಗ್ಗಿದ ಮಹಿಳೆ!; ಎಮರ್ಜೆನ್ಸಿ ಎಂಟ್ರಿಯ ವಿಡಿಯೋ ವೈರಲ್

(China sandstorm viral video you must see this)

ರಸ್ತೆ ಮೇಲೆ ಅಂಟಿಸಿದ್ದ ಪಾಕ್ ಬಾವುಟ ತೆಗೆಯಲು ಯತ್ನಿಸಿದ ವಿದ್ಯಾರ್ಥಿನಿ
ರಸ್ತೆ ಮೇಲೆ ಅಂಟಿಸಿದ್ದ ಪಾಕ್ ಬಾವುಟ ತೆಗೆಯಲು ಯತ್ನಿಸಿದ ವಿದ್ಯಾರ್ಥಿನಿ
ಹಿಂದೂ ಕಾರ್ಯಕರ್ತ ಸುಹಾಸ್​ ಕೊಲೆ ಬಗ್ಗೆ ಎಡಿಜಿಪಿ ಹಿತೇಂದ್ರ ಮಹತ್ವದ ಹೇಳಿಕೆ
ಹಿಂದೂ ಕಾರ್ಯಕರ್ತ ಸುಹಾಸ್​ ಕೊಲೆ ಬಗ್ಗೆ ಎಡಿಜಿಪಿ ಹಿತೇಂದ್ರ ಮಹತ್ವದ ಹೇಳಿಕೆ
60 ವರ್ಷದ ವ್ಯಕ್ತಿಯಿಂದ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ
60 ವರ್ಷದ ವ್ಯಕ್ತಿಯಿಂದ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ
ಇಂದಿನಿಂದ ಚಾರ್​ ಧಾಮ್ ಯಾತ್ರೆ ಆರಂಭ, ಬಾಗಿಲು ತೆರೆದ ಕೇದಾರನಾಥ ದೇವಾಲಯ
ಇಂದಿನಿಂದ ಚಾರ್​ ಧಾಮ್ ಯಾತ್ರೆ ಆರಂಭ, ಬಾಗಿಲು ತೆರೆದ ಕೇದಾರನಾಥ ದೇವಾಲಯ
Daily Devotional: ಅಂಗೈ ಬಣ್ಣ ಬೇರೆ ಬೇರೆಯಾಗಿದ್ದರೆ ಏನೇನು ಅರ್ಥ?
Daily Devotional: ಅಂಗೈ ಬಣ್ಣ ಬೇರೆ ಬೇರೆಯಾಗಿದ್ದರೆ ಏನೇನು ಅರ್ಥ?
Daily horoscope: ಈ ರಾಶಿಯವರಿಗೆ ಇಂದು ಸಂತೋಷದ ದಿನವಾಗಿರುತ್ತದೆ
Daily horoscope: ಈ ರಾಶಿಯವರಿಗೆ ಇಂದು ಸಂತೋಷದ ದಿನವಾಗಿರುತ್ತದೆ
ಮಂಗಳೂರಿನಲ್ಲಿ ಹಿಂದೂ ಕಾರ್ಯಕರ್ತ ಸುಹಾಸ್ ಹತ್ಯೆ: ಸ್ಫೋಟಕ ಅಂಶ ಬಹಿರಂಗ
ಮಂಗಳೂರಿನಲ್ಲಿ ಹಿಂದೂ ಕಾರ್ಯಕರ್ತ ಸುಹಾಸ್ ಹತ್ಯೆ: ಸ್ಫೋಟಕ ಅಂಶ ಬಹಿರಂಗ
ಬಜರಂಗದಳದ ಸುಹಾಸ್ ಶೆಟ್ಟಿ ಕೊಲೆ: ಹಂತಕರ ಸ್ಕೆಚ್​ ಬಿಚ್ಚಿಟ್ಟ ಕಮಿಷನರ್
ಬಜರಂಗದಳದ ಸುಹಾಸ್ ಶೆಟ್ಟಿ ಕೊಲೆ: ಹಂತಕರ ಸ್ಕೆಚ್​ ಬಿಚ್ಚಿಟ್ಟ ಕಮಿಷನರ್
ಪವಿತ್ರಾ ಗೌಡ ಬಗ್ಗೆ ಮಾತಾಡಲು ನಿರಾಕರಿಸಿದ ಸೌಂದರ್ಯ ಜಗದೀಶ್ ಪತ್ನಿ ಶಶಿರೇಖಾ
ಪವಿತ್ರಾ ಗೌಡ ಬಗ್ಗೆ ಮಾತಾಡಲು ನಿರಾಕರಿಸಿದ ಸೌಂದರ್ಯ ಜಗದೀಶ್ ಪತ್ನಿ ಶಶಿರೇಖಾ
ಭಾರತದ ಗಡಿ ಬಳಿ ಪಾಕ್ ಸೇನಾ ಮುಖ್ಯಸ್ಥರೆದುರು ಪ್ರಾಕ್ಟೀಸ್
ಭಾರತದ ಗಡಿ ಬಳಿ ಪಾಕ್ ಸೇನಾ ಮುಖ್ಯಸ್ಥರೆದುರು ಪ್ರಾಕ್ಟೀಸ್