Video: ಅವಳು ತಾಯಿ, ಮಕ್ಕಳ ಕಾಳಜಿ ಮಾಡಲೇಬೇಕು, ನೀರಿನಲ್ಲಿ ಹುಲಿ ಮರಿಗಳ ಜಾಲಿ, ಅಮ್ಮನಿಗೆ ಆತಂಕ

ಸಾಮಾಜಿಕ ಜಾಲತಾಣದಲ್ಲಿ ಆಗ್ಗಾಗೆ ತಾಯಿ ಮತ್ತು ಮಕ್ಕಳ ಬಾಂಧವ್ಯ ಸಾರುವ ವಿಡಿಯೋಗಳು ವೈರಲ್​​ ಆಗಿರುವುದನ್ನು ನೋಡಿರಬಹುದು. ಅದು ಪ್ರಾಣಿ ಅಥವಾ ಮನುಷ್ಯ ಇಬ್ಬರಲ್ಲೂ ತಾಯಿ ಪ್ರೀತಿ ಒಂದೇ ಆಗಿರುತ್ತದೆ. ಇಲ್ಲೊಂದು ವಿಡಿಯೋ ಭಾರೀ ವೈರಲ್​ ಆಗಿದೆ. ಹುಲಿಯೊಂದು ತನ್ನ ಮರಿಗಳು ನೀರಿನಲ್ಲಿ ಆಟವಾಡುತ್ತಿರುವಾಗ ಹೇಗೆ ತನ್ನ ಮಕ್ಕಳ ಬಗ್ಗೆ ಹುಲಿಯೂ ಕಾಳಜಿ ಮಾಡಿದೆ ನೋಡಿ.

Video: ಅವಳು ತಾಯಿ, ಮಕ್ಕಳ ಕಾಳಜಿ ಮಾಡಲೇಬೇಕು, ನೀರಿನಲ್ಲಿ ಹುಲಿ ಮರಿಗಳ ಜಾಲಿ, ಅಮ್ಮನಿಗೆ ಆತಂಕ
ವೈರಲ್​​​ ವಿಡಿಯೋ

Updated on: Aug 18, 2025 | 9:21 PM

ಅಮ್ಮ ಎಂದರೇನೆ ಹಾಗೇ, ಎಲ್ಲರಿಗೋಸ್ಕರ ಶ್ರಮಿಸುವ ಜೀವ. ಅದು ಮನುಷ್ಯನಾಗಿರಲಿ, ಪ್ರಾಣಿಯಾಗಿರಲಿ, ಮಮತೆ, ಪ್ರೀತಿ ಕಾಳಜಿ ಒಂದೇ. ಅಮ್ಮನಿಗಿಂತ ದೊಡ್ಡ ಯೋಧ ಯಾರು ಇಲ್ಲ. ತನ್ನ ಮಕ್ಕಳ ಸಂತೋಷವಾಗಿರಲಿ, ದುಃಖವಾಗಿರಲಿ ಅವಳು ಮಾತ್ರ ಮಕ್ಕಳ ರಕ್ಷಣೆ ಹಾಗೂ ಕಾಳಜಿಯ ಬಗ್ಗೆ ಚಿಂತೆ ಮಾಡಿಯೇ ಮಾಡುತ್ತಾಳೆ. ಅಮ್ಮ ಮಕ್ಕಳ ಬಗ್ಗೆ ಎಷ್ಟೊಂದು ಕಾಳಜಿ ಮಾಡುತ್ತಾಳೆ ಎಂಬುದಕ್ಕೆ ಇಲ್ಲೊಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​​ ಆಗಿದೆ. ತನ್ನ ಮರಿಗಳು ನೀರಿನ ಹೊಂಡದಲ್ಲಿ ಖುಷಿಯಲ್ಲಿ ಆಟವಾಡುತ್ತಿರುವಾಗ ತಾಯಿ ಹುಲಿ (tigress) ಎಲ್ಲಿಯೂ ಗಮನ ನೀಡದೇ, ಮಕ್ಕಳ ಕಡೆಯೇ ನೋಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​​ ಆಗಿದೆ. ನಿವೃತ್ತ ಭಾರತೀಯ ಅರಣ್ಯ ಸೇವಾ ಅಧಿಕಾರಿ ಸುಸಂತಾ ನಂದಾ (Susanta Nanda) ಅವರು ತಮ್ಮ ಎಕ್ಸ್​​​ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಪುಟ್ಟ ಮರಿಗಳು ಸುತ್ತಲೂ ಓಡಾಡುತ್ತಾ ಫುಲ್​​​​ ಎಂಜಾಯ್‌ ಮಾಡುತ್ತಿದ್ದಾರೆ. ತಾಯಿ ಹುಲಿ ಮಾತ್ರ ಒಂದು ಕಡೆ ಕೂತು ಮಕ್ಕಳನ್ನು ಗಮನಿಸುವುದನ್ನು ಈ ವಿಡಿಯೋದಲ್ಲಿ ನೋಡಬಹುದು.

ತಾಯಿಯ ಕಣ್ಣು ಎಂದಿಗೂ ವಿಶ್ರಾಂತಿ ಪಡೆಯುವುದಿಲ್ಲ, ನೀರಿನಲ್ಲಿ ಆಟವಾಡುತ್ತಿರುವ ತನ್ನ ಮಕ್ಕಳ ಬಗ್ಗೆ ನೋಡುತ್ತಾ, ಯಾವುದೇ ಪ್ರಾಣಿಗಳು ತನ್ನ ಮರಿಗಳ ಮೇಲೆ ದಾಳಿ ಮಾಡಬಾರದು ಎಂದು ರಕ್ಷಣೆಯನ್ನು ಮಾಡುತ್ತಿದೆ ಎಂದು ಈ ವಿಡಿಯೋಗೆ ಶೀರ್ಷಿಕೆಯನ್ನು ಬರೆದಿದ್ದಾರೆ. ಪ್ರಾಣಿಗಳು ಈ ಸಮಯದಲ್ಲಿ ನೀರಿನಲ್ಲಿ ಆಟವಾಡುವುದು ಕಡಿಮೆ, ಅದು ಬೇಸಿಗೆಯಲ್ಲಿ ಅಥವಾ ಉಷ್ಣಾಂಶ ಹೆಚ್ಚಾದಾಗ ಮಾತ್ರ ಈ ರೀತಿ ಮಾಡುತ್ತದೆ. ಆದರೆ ಹುಲಿಗಳು ನೀರಿನಲ್ಲಿ ಕಾಲ ಕಳೆಯಲು ಇಷ್ಟಪಡುತ್ತದೆ. ವಿಶೇಷವಾಗಿ ಭಾರತದ ಉಷ್ಣವಲಯದ ಹವಾಮಾನದಲ್ಲಿ ಅವು ಶಾಖದಿಂದ ತಪ್ಪಿಸಿಕೊಳ್ಳಲು ನದಿಗಳು, ಸರೋವರಗಳು ಮತ್ತು ಕೊಳಗಳಲ್ಲಿ ಆಗಾಗ್ಗೆ ಸಮಯ ಕಳೆಯುತ್ತವೆ ಎಂದು ಹೇಳಿದ್ದಾರೆ.

ಇದನ್ನೂ ಓದಿ
ಅಮ್ಮನ ಮಡಿಲು ಸೇರಿದ ದಾರಿ ತಪ್ಪಿದ ಮರಿಯಾನೆ
ತಾಯಾನೆಯನ್ನೇ ಹಿಂಬಾಲಿಸುತ್ತಾ ರಸ್ತೆ ದಾಟಿದ ಮರಿಯಾನೆ
ನದಿಯಲ್ಲಿ ಫುಲ್​​​ ಎಂಜಾಯ್​​​ ಮೂಡನಲ್ಲಿ ಗಜಲಕ್ಷ್ಮೀ
ತಳ್ಳಾಟ, ತುಂಟಾಟದಲ್ಲಿ ಬ್ಯುಸಿ ಈ ಮರಿಯಾನೆಗಳು, ಈ ಕ್ಯೂಟ್ ದೃಶ್ಯ ನೋಡಿ

ಹುಲಿ ಮತ್ತು ಅದರ ಮರಿಗಳ ವಿಡಿಯೋ

ಸುಸಂತಾ ನಂದಾ ಅವರು ಹಂಚಿಕೊಂಡರುವ ವಿಡಿಯೋ ತುಂಬಾ ಮುದ್ದಾಗಿದ್ದು, ಹೃದಯಸ್ಪರ್ಶಿವಾಗಿದೆ. ಈ ಹಿಂದೆ ತಾಯಿ ಆನೆ ತನ್ನ ಮರಿಯಾನೆಯನ್ನು ತುಂಬಾ ಎಚ್ಚರದಿಂದ ಹೊಳೆಯಲ್ಲಿ ಹೋಗುವಂತೆ ಮಾರ್ಗದರ್ಶನ ಮಾಡುವ ವಿಡಿಯೋವನ್ನು ಹಂಚಿಕೊಂಡಿದ್ದರು. ಆನೆ ತನ್ನ ಮರಿಗೆ ನೀರಿನಲ್ಲಿ ಆಟವಾಡುತ್ತಿರುವಾಗ ಒಂದು ಕಡೆ ನಿಂತು, ಅದರ ರಕ್ಷಣೆಯನ್ನು ಮಾಡುವುದನ್ನು ಆ ವಿಡಿಯೋದಲ್ಲಿ ನೋಡಬಹುದು. ಹೆಜ್ಜೆ ಹೆಜ್ಜೆ ಇಡುತ್ತಾ, ಸೊಂಡಿಲಿನಿಂದ ಸೊಂಡಿಲಿಗೆ, ಮುದ್ದಾದ ಮಗು ಅಮ್ಮನ ಕಾವಲಿನಲ್ಲಿ ನೀರಿನಲ್ಲಿ ಮ್ಯಾಜಿಕ್ ಮಾಡುತ್ತದೆ.

ಆನೆಯ ವೈರಲ್​​ ವಿಡಿಯೋ

ಇದನ್ನೂ ಓದಿ: Video: ತಾಯಿಯ ಧ್ವನಿ ಕೇಳುತ್ತಿದ್ದಂತೆ ಓಡೋಡಿ ಬಂದು ಅಮ್ಮನ ಮಡಿಲು ಸೇರಿದ ದಾರಿ ತಪ್ಪಿದ ಮರಿಯಾನೆ

ಪ್ರತಿ ಹನಿ ನೀರು ಭರವಸೆಯ ಹನಿ. ಈ ಕ್ಷಣ ಎಂದಿಗೂ ಮಾಯವಾಗದಂತೆ ನೋಡಿಕೊಳ್ಳೋಣ ಎಂದು ಈ ವಿಡಿಯೋದಲ್ಲಿ ಬರೆದುಕೊಂಡಿದ್ದರು. ಎರಡೂ ವೀಡಿಯೊದಲ್ಲಿ ಪ್ರಾಣಿಗಳು ತಮ್ಮ ಮರಿಗಳೊಂದಿಗೆ ಹಂಚಿಕೊಳ್ಳುವ ಪ್ರೀತಿ ಮತ್ತು ಕಾಳಜಿಯ ಎಷ್ಟು ಆಳವಾಗಿದೆ ಎಂಬುದನ್ನು ತೋರಿಸುತ್ತದೆ.

ವೈರಲ್​​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:39 pm, Mon, 18 August 25