ನಾಯಿಯನ್ನು ಮುದ್ದಾಡಲು ಹೋದ ವಾಚ್‌ಮ್ಯಾನ್‌ ಮೇಲೆ ಏಕಾಏಕಿ ದಾಳಿ ನಡೆಸಿದ ಮತ್ತೊಂದು ಶ್ವಾನ

ರಸ್ತೆಯಲ್ಲಿ ನಡೆದುಕೊಂಡು ಹೋಗುವವರ ಮೇಲೆ, ಆಟವಾಡುತ್ತಿದ್ದ ಮಕ್ಕಳ ಮೇಲೆ ಬೀದಿ ನಾಯಿಗಳು ಮಾರಣಾಂತಿಕವಾಗಿ ದಾಳಿ ನಡೆಸಿದಂತಹ ಹಲವಾರು ಘಟನೆಗಳು ನಡೆದಿವೆ. ಇಲ್ಲೊಂದು ಅಂತಹದ್ದೇ ಘಟನೆ ನಡೆದಿದ್ದು, ವಾಚ್‌ಮ್ಯಾನ್‌ ಹೊರಗೆ ಬಾಲ ಅಲ್ಲಾಡಿಸುತ್ತಾ ಕುಳಿತಿದ್ದ ಶ್ವಾನವನ್ನು ಮುದ್ದಾಡುತ್ತಿದ್ದ ವೇಳೆ ಅಲ್ಲಿಗೆ ಬಂದಂತಹ ಇನ್ನೊಂದು ಬೀದಿ ನಾಯಿ ಏಕಾಏಕಿ ಆ ವ್ಯಕ್ತಿಯ ಮೇಲೆ ದಾಳಿ ನಡೆಸಿದೆ. ಶ್ವಾನ ದಾಳಿಯ ಈ ಭಯಾನಕ ದೃಶ್ಯ ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ.

ನಾಯಿಯನ್ನು ಮುದ್ದಾಡಲು ಹೋದ ವಾಚ್‌ಮ್ಯಾನ್‌ ಮೇಲೆ ಏಕಾಏಕಿ ದಾಳಿ ನಡೆಸಿದ ಮತ್ತೊಂದು ಶ್ವಾನ
ವೈರಲ್​​ ವಿಡಿಯೋ
Updated By: ಅಕ್ಷಯ್​ ಪಲ್ಲಮಜಲು​​

Updated on: Mar 31, 2025 | 5:09 PM

ಈಗಂತೂ ಬೀದಿ ನಾಯಿಗಳ (Stray dog) ಹಾವಳಿ ತೀರಾ ಹೆಚ್ಚಾಗಿದೆ. ಅಲ್ಲಲ್ಲಿ ಹತ್ತಾರು ಬೀದಿ ನಾಯಿಗಳು ಕಂಡು ಬರುತ್ತಿದ್ದು, ಆಟವಾಡುವ ಮಕ್ಕಳ ಮೇಲೆ, ಬೀದಿಯಲ್ಲಿ ತಮ್ಮ ಪಾಡಿಗೆ ನಡೆದುಕೊಂಡು ಹೋಗುವವರ ಮೇಲೆ ಈ ಬೀದಿ ನಾಯಿಗಳು (stray dog) ಅಟ್ಯಾಕ್‌ (attack) ಮಾಡುವಂತ ಸುದ್ದಿಗಳು ಕೇಳಿ ಬರುತ್ತಲೇ ಇವೆ. ಅಷ್ಟೇ ಯಾಕೆ ಬೀದಿ ನಾಯಿಗಳ ದಾಳಿಗೆ ಅದೆಷ್ಟೋ ಜೀವಗಳು ಬಲಿಯಾದ ಘಟನೆಗಳೂ ನಡಿದೆವೆ. ಇಲ್ಲೊಂದು ಆಘಾತಕಾರಿ ಘಟನೆ ನಡೆದಿದ್ದು, ಬೀದಿ‌ ನಾಯಿಯನ್ನು ಮುದ್ದಾಡಲು (petting) ಹೋಗಿ ವಾಚ್‌ಮ್ಯಾನ್‌ (watchman) ಒಬ್ರು ಫಜೀತಿಗೆ ಸಿಲುಕಿದ್ದಾರೆ. ಹೌದು ಆ ವ್ಯಕ್ತಿ ನಾಯಿಯನ್ನು ಮುದ್ದಾಡುತ್ತಾ ಕುಳಿತಿದ್ದ ವೇಳೆ ಅಲ್ಲಿಗೆ ಬಂದಂತಹ ಇನ್ನೊಂದು ಶ್ವಾನ ಅವರ ಮೇಲೆ ಏಕಾಏಕಿ ದಾಳಿ ನಡೆಸಿದೆ, ಹರಸಾಹಸ ಪಟ್ಟು ಶ್ವಾನದ ಅಟ್ಯಾಕ್‌ನಿಂದ ವಾಚ್‌ಮ್ಯಾನ್‌ ಪಾರಾಗಿದ್ದು, ಈ ಘಟನೆಗೆ ಸಂಬಂಧಿಸಿದ ವಿಡಿಯೋವೊಂದು ಇದೀಗ ವೈರಲ್‌ ಆಗುತ್ತಿದೆ.

ಕಟ್ಟಡದ ಹೊರ ಭಾಗದಲ್ಲಿ ಒಂದಷ್ಟು ಶ್ವಾನಗಳು ಕುಳಿತಿದ್ದ ಸಂದರ್ಭದಲ್ಲಿ ಅಲ್ಲಿಗೆ ಬಂದಂತಹ ವಾಚ್‌ಮ್ಯಾನ್‌ ಒಂದು ನಾಯಿಯನ್ನು ಮುದ್ದಾಡಿದ್ದಾರೆ. ಆ ಸಂದರ್ಭದಲ್ಲಿ ಅವರ ಪಕ್ಕಕ್ಕೆ ಬಂದ ಮತ್ತೊಂದು ಶ್ವಾನ ಕೋಪಕ್ಕೋ, ದ್ವೇಷಕ್ಕೋ ಅಥವಾ ನನ್ನನ್ನು ಮುದ್ದಾಡಲಿಲ್ಲವೆಂಬ ಅಸೂಯೆಯ ಕಾರಣಕ್ಕೋ ವಾಚ್‌ಮ್ಯಾನ್‌ ಮೇಲೆ ಏಕಾಏಕಿ ದಾಳಿ ನಡೆಸಿ ಕೈಯನ್ನು ಕಚ್ಚಿ ಹಿಡಿದು ಎಳೆದಾಡಿದೆ.

ಇದನ್ನೂ ಓದಿ
ಹಿರಿ ಜೀವಗಳಿಗೆ  ಮರುಮದುವೆ ಮಾಡಿಸಿದ ಮೊಮ್ಮಕ್ಕಳು
ರಾತ್ರಿಯ ರೊಮ್ಯಾ‌ನ್ಸ್ ವಿಡಿಯೋ ಶೇರ್‌ ಮಾಡಿದ ನವಜೋಡಿ
ಕೋಪದಲ್ಲಿ ಗಂಡನ ನಾಲಿಗೆ ಕಚ್ಚಿ ತುಂಡರಿಸಿದ ಹೆಂಡತಿ
ಯಾವ ಲಾಭದಾಯಕ ಉದ್ದಿಮೆಗೂ ಕಮ್ಮಿಯಿಲ್ಲ ಈ ಚೇಳು ಸಾಕಾಣಿಕೆ

ವೈರಲ್​​ ವಿಡಿಯೋ ಇಲ್ಲಿದೆ ನೋಡಿ:

ಈ ಕುರಿತ ವಿಡಿಯೋವನ್ನು gharkekalesh ಹೆಸರಿನ ಎಕ್ಸ್‌ ಖಾತೆಯಲ್ಲಿ ಶೇರ್‌ ಮಾಡಲಾಗಿದೆ. ವೈರಲ್‌ ಆಗುತ್ತಿರುವ ವಿಡಿಯೋದಲ್ಲಿ ಶ್ವಾನವೊಂದು ವಾಚ್‌ಮ್ಯಾನ್‌ ಮೇಲೆ ಏಕಾಏಕಿ ದಾಳಿ ನಡೆಸುವಂತಹ ಆಘಾತಕಾರಿ ದೃಶ್ಯವನ್ನು ಕಾಣಬಹುದು. ನಾಯಿಯನ್ನು ಮುದ್ದಾಡುತ್ತಾ ನಿಂತಿದ್ದ ವೇಳೆಯೇ ಬಂದಂತಹ ಮತ್ತೊಂದು ಶ್ವಾನ ವಾಚ್‌ಮ್ಯಾನ್‌ ಕೈಯನ್ನು ಕಚ್ಚಿ ಎಳೆದಾಡಿದೆ. ಹಾಗೋ ಹೀಗೋ ಹೋರಾಡಿ ಆ ವ್ಯಕ್ತಿ ಅಪಾಯದಿಂದ ಪಾರಾಗಿದ್ದಾರೆ.

ಇದನ್ನೂ ಓದಿ: ಭಾರತದ ಮೊದಲ ಕಾಫಿ ತೋಟ ತಾಣದ ಕಥೆಯನ್ನು ಹಂಚಿಕೊಂಡ ಆನಂದ್‌ ಮಹೀಂದ್ರಾ

ಮಾರ್ಚ್‌ 31 ರಂದು ಹಂಚಿಕೊಳ್ಳಲಾದ ಈ ವಿಡಿಯೋ 22 ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಇದು ನೋಡಲು ತುಂಬಾ ಭಯಾನಕವಾಗಿದೆʼ ಎಂಬ ಕಾಮೆಂಟ್‌ ಬರೆದುಕೊಂಡಿದ್ದಾರೆ. ಇನ್ನೊಬ್ಬ ಬಳಕೆದಾರರು ʼಭಾರತದಲ್ಲಿ ಬೀದಿ ನಾಯಿಗಳದ್ದೇ ದೊಡ್ಡ ಆತಂಕ ಶುರುವಾಗಿದೆʼ ಎಂಬ ಕಾಮೆಂಟ್‌ ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼಬೀದಿ ನಾಯಿಗಳೊಂದಿಗೆ ಹೆಚ್ಚು ಸ್ನೇಹ ಪಪೂರ್ವಕವಾಗಿ ವರ್ತಿಸಬೇಡಿʼ ಎಂದು ಹೇಳಿದ್ದಾರೆ.

ವೈರಲ್​​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ