ವೇಗವಾಗಿ ಚಲಿಸುವ ರೈಲಿನ ಫುಟ್ ಬೋರ್ಡಿಂಗ್ ಮೇಲೆ ವಿದ್ಯಾರ್ಥಿಗಳ ಹುಚ್ಚಾಟ, ಇಲ್ಲಿದೆ ವಿಡಿಯೋ

| Updated By: ಅಕ್ಷಯ್​ ಪಲ್ಲಮಜಲು​​

Updated on: Apr 09, 2025 | 2:57 PM

ಈ ವಿದ್ಯಾರ್ಥಿಗಳು ಮಾಡುವ ಕೆಲವೊಂದು ಹುಚ್ಚುತನ ಅನೇಕ ಅಪಾಯವನ್ನು ತಂದಿರುವ ಕೆಲವೊಂದು ಉದಾಹರಣೆಗಳು ನಮ್ಮ ಕಣ್ಮುಂದೆ ಇದೆ. ವೈರಲ್​​ ಆಗಬೇಕು ಎಂಬ ಉದ್ದೇಶದಿಂದ ಹುಚ್ಚು ಸಾಹಸಗಳನ್ನು ಮಾಡುತ್ತಾರೆ. ಇದಕ್ಕಾಗಿ ಪ್ರಾಣ ಕಳೆದುಕೊಳ್ಳಲು ಕೂಡ ತಯಾರಿರುತ್ತಾರೆ. ಇಂತಹದೇ ಒಂದು ಘಟನೆ ಚೆನ್ನೈನಲ್ಲಿ ನಡೆದಿದೆ. ವೇಗವಾಗಿ ಚಲಿಸುವ ರೈಲಿನ ಫುಟ್ ಬೋರ್ಡಿಂಗ್ ಮೇಲೆ ವಿದ್ಯಾರ್ಥಿಗಳು ನಿಂತಿರುವ ಅಪಾಯಕಾರಿ ವಿಡಿಯೋ ಮಾಡಿದ್ದಾರೆ. ಈ ಬಗ್ಗೆ ವಿಡಿಯೋ ಇಲ್ಲಿದೆ ನೋಡಿ.

ವೇಗವಾಗಿ ಚಲಿಸುವ ರೈಲಿನ ಫುಟ್ ಬೋರ್ಡಿಂಗ್ ಮೇಲೆ ವಿದ್ಯಾರ್ಥಿಗಳ ಹುಚ್ಚಾಟ, ಇಲ್ಲಿದೆ ವಿಡಿಯೋ
ವೈರಲ್​​ ವಿಡಿಯೋ
Follow us on

ಸೋಶಿಯಲ್​​ ಮೀಡಿಯಾದಲ್ಲಿ ವೈರಲ್​​ ಆಗುವ ಕೆಲವೊಂದು ವಿಡಿಯೋಗಳು ನಮಗೆ ಖುಷಿ ನೀಡುತ್ತದೆ. ಆದರೆ ಇನ್ನು ಕೆಲವು ಮೈ ನಡುಗುವಂತೆ ಮಾಡುತ್ತದೆ. ಇನ್ನುಷ್ಟು ವಿಡಿಯೋಗಳು ಇದು ಹುಚ್ಚುತನ ಎಂದು ಅನ್ನಿಸುತ್ತದೆ. ಇಂತಹ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​​ (Viral) ಆಗಬೇಕು ಎಂದು ಅನೇಕರು ಹುಚ್ಚುತನದ ಸಾಹಸಕ್ಕೆ ಕೈ ಹಾಕುತ್ತಾರೆ. ಅದಕ್ಕಾಗಿ ತಮ್ಮ ಪ್ರಾಣವನ್ನು ಕಳೆದುಕೊಳ್ಳಲು ಕೂಡ ತಯಾರಾಗಿರುತ್ತಾರೆ. ಅನೇಕರು ಪ್ರಾಣ ಕಳೆದುಕೊಂಡದ್ದು ಇದೆ. ಇದೀಗ ಇಂತಹದೇ ಘಟನೆಯೊಂದು ಚೆನ್ನೈನಲ್ಲಿ ನಡೆದಿದೆ. ಚೆನ್ನೈನಲ್ಲಿ ವೇಗವಾಗಿ ಚಲಿಸುವ ರೈಲಿನ ಫುಟ್ ಬೋರ್ಡಿಂಗ್ ಮೇಲೆ ವಿದ್ಯಾರ್ಥಿಗಳು ನಿಂತಿರುವ ಅಪಾಯಕಾರಿ ವಿಡಿಯೋ ವೈರಲ್​​ ಆಗಿದೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​​ ಆಗಿದೆ.

ಈ ವಿಡಿಯೋದಲ್ಲಿ ಕಾಲೇಜು ಹುಡುಗರು ರೈಲು ಹತ್ತುವುದು ಕಾಣಬಹುದು ಅದರಲ್ಲಿ ಇಬ್ಬರು ರೈಲಿನ ಫುಟ್ ಬೋರ್ಡಿಂಗ್ ಮೇಲೆ ಏರಿದ್ದಾರೆ. ರೈಲಿನ ಮೇಲೆ ಹೈವೋಲ್ಟೇಜ್ ಇರುವ ಕರೆಂಟ್​​​​ ತಂತಿಗಳು ಇದೆ. ಅದನ್ನು ಲೆಕ್ಕಿಸದೇ ಹುಡುಗರು ರೈಲಿನ ಫುಟ್ ಬೋರ್ಡಿಂಗ್ ಮೇಲೆ ಹತ್ತಿದ್ದಾರೆ. ಈ ವಿಡಿಯೋದಲ್ಲಿ ಇವರು ವಿದ್ಯಾರ್ಥಿಗಳು ಎಂದು ಗುರುತಿಸಲು ಅವರ ಹಾಕಿಕೊಂಡಿರುವ ಕಾಲೇಜ್​​ ಐಡಿಯೇ ಸಾಕ್ಷಿಯಾಗಿದೆ. ಈ ಹುಚ್ಚತನಕ್ಕೆ ಅನೇಕರು ಅಕ್ರೋಶ ವ್ಯಕ್ತಪಡಿಸಿದ್ದಾರೆ. ವಿದ್ಯಾರ್ಥಿಗಳು ವೈರಲ್​​ ಆಗಬೇಕು ಎಂಬ ಕಾರಣಕ್ಕೆ ಮೊಬೈಲ್​​ ನಲ್ಲಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿದೆ.

ವೈರಲ್​​ ವಿಡಿಯೋ ಇಲ್ಲಿದೆ ನೋಡಿ

ಈ ವಿಡಿಯೋದಲ್ಲಿ ಇನ್ನು ಕೆಲವು ಹುಡುಗರು, ಅವರು ಗುರುತು ಸಿಗಬಾರದು ಎಂದು ಮುಖಕ್ಕೆ ಮುಖವಾಡ ಹಾಕಿಕೊಂಡಿದ್ದಾರೆ. ಇನ್ನು ಈ ಬಗ್ಗೆ ಅಧಿಕಾರಿಗಳು ತನಿಖೆ ಮಾಡಿದ್ದು, ಈ ರೀತಿಯ ಹುಚ್ಚತನ ಮಾಡಿದವರನ್ನು ಪತ್ತೆ ಮಾಡಿದ್ದಾರೆ. ಈ ವೀಡಿಯೊ ‘ಹೆಡ್ ಆಫ್ ದಿ ರೂಟ್’ ನ ಭಾಗವಾಗಿದೆ ಎಂದು ವರದಿಯಾಗಿದೆ, ಇದು ಅಪಾಯಕಾರಿಯಾಗಿದ್ದು, ವಿಶೇಷವಾಗಿ ಚಲಿಸುವ ರೈಲುಗಳಲ್ಲಿ ಈ ರೀತಿ ಮಾಡಿರುವುದು ಹಾಗೂ ಶಸ್ತ್ರಾಸ್ತ್ರಗಳನ್ನು ಪ್ರದರ್ಶಿಸಿರುವುದು ಕಾನೂನು ಬಾಹಿರವಾಗಿದೆ ಎಂದು ಹೇಳಲಾಗಿದೆ.

ಇದನ್ನೂ ಓದಿ
ಭಾರತದ ಮೊದಲ ಕಾಫಿ ತೋಟ ತಾಣದ ಕಥೆಯನ್ನು ಹಂಚಿಕೊಂಡ ಆನಂದ್‌ ಮಹೀಂದ್ರಾ
ಕಾಲೇಜು ಪ್ರೊಫೆಸರ್‌ ಎನರ್ಜಿಗೆ ಫಿದಾ ಆದ ವಿದ್ಯಾರ್ಥಿಗಳು
ಬೆಂಗಳೂರಿನಲ್ಲಿ ಆಟೋ ಬುಕ್ ಮಾಡುವ ಟಿಪ್ಸ್ ನೀಡಬೇಕು
ಒಂದೇ ಮಂಟಪದಲ್ಲಿ, ಒಂದೇ ಸಮಯದಲ್ಲಿ ಇಬ್ಬರು ಮಹಿಳೆಯರನ್ನು ಮದುವೆಯಾದ ವ್ಯಕ್ತಿ

ಇದನ್ನೂ ಓದಿ: ಎತ್ತಾಕೊಂಡು ಹೋಗ್ತಾ ಇರೋದೇ; ಅಂಗಡಿಯಿಂದ ಹಿಟ್ಟಿನ ಪ್ಯಾಕೆಟ್‌ ಎಗರಿಸಿ ಓಡೋದ ಗಜರಾಜ

ಇನ್ನು ಇಂತಹ ಘಟನೆ ಇದೆ ಮೊದಲ್ಲ, ಈ ಹಿಂದೆಯೂ ಇಂತಹ ಘಟನೆಗಳು ನಡೆದಿದೆ. ವಿದ್ಯಾರ್ಥಿಗಳು ಅಜಾಗರೂಕ ಮತ್ತು ಕಾನೂನುಬಾಹಿರ ಸಾಹಸಗಳನ್ನು ಮಾಡುವ ಮೂಲಕ ತಮ್ಮನ್ನು ಮತ್ತು ಇತರರನ್ನು ಪದೇ ಪದೇ ಅಪಾಯಕ್ಕೆ ಸಿಲುಕಿಸಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ತೆಗೆದುಕೊಳ್ಳಬೇಕು ಹಾಗೂ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಜನ ಅಕ್ರೋಶ ವ್ಯಕ್ತಪಡಿಸಿದ್ದಾರೆ.

ವೈರಲ್​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ