Trending : ಆನ್ಲೈನ್ನಲ್ಲಿ ಆಗಾಗ ದಾಖಲಾಗುವ ಇಂಥ ಸತ್ಯಘಟನೆಗಳು, ಮಾನವೀಯತೆ ಇನ್ನೂ ಜೀವಂತವಾಗಿದೆ ಎಂಬುದನ್ನು ಸಾರಿ ಹೇಳುತ್ತಿರುತ್ತವೆ. ಸಿಕಂದರಾಬಾದ್‌ನ ಸ್ವಿಗ್ಗಿ ಡೆಲಿವರಿ ಏಜೆಂಟ್ ಒಬ್ಬರು ಕರ್ತವ್ಯದ ಮಧ್ಯೆ ಚೆನ್ನೈನಲ್ಲಿರುವ ವೃದ್ಧದಂಪತಿಗೆ ಸಹಾಯ ಮಾಡಿದ ಘಟನೆಯು ನೆಟ್ಟಿಗರನ್ನು ಆಪ್ತವಾಗಿ ಹಿಡಿದಿಟ್ಟಿದೆ. ಸಾಯಿಕಿರಣ್ ಕಣ್ಣನ್ ಎಂಬ ಹವ್ಯಾಸಿ ಪತ್ರಕರ್ತರು ಟ್ವೀಟ್ ಥ್ರೆಡ್ ಮೂಲಕ ಈ ನೈಜಘಟನೆಯನ್ನು ಹಂತಹಂತವಾಗಿ ಹರವಿಟ್ಟಿದ್ದಾರೆ. ಈ ಕಥೆಯನ್ನು ಓದಿದ ನೆಟ್ಟಿಗರು ಭಾವುಕರಾಗಿದ್ದಾರೆ.
‘ನನ್ನ ತಾಯಿಯ ದೂರದ ಸಂಬಂಧಿಯು (ವೃದ್ಧದಂಪತಿ) ನಿನ್ನೆ ರಾತ್ರಿ ತಮ್ಮ ಮಗನನ್ನು (ಮಿಸ್ಟರ್ ಎಕ್ಸ್) ಸಂಪರ್ಕಿಸಲು ಪ್ರಯತ್ನಿಸುತ್ತಿದ್ದರು. ಮಿಸ್ಟರ್ ಎಕ್ಸ್ ಒಂಟಿಯಾಗಿ ಸಿಕಂದರಾಬಾದ್ನಲ್ಲಿ ವಾಸಿಸುತ್ತಿರುವುದರಿಂದ ಅವರಿಗೆ ಸಹಜವಾಗಿ ಆತಂಕವಾಯಿತು. ಫೋನ್ನಲ್ಲಿ ತಮ್ಮ ಮಗನನ್ನು ಸಂಪರ್ಕಿಸುವ ಅವರ ಪ್ರಯತ್ನ ಕೆಲ ದಿನಗಳಿಂದ ಸಾಗಿದೆ ಎನ್ನುವ ವಿಷಯ ತಿಳಿಯಿತು. ಆಗ ವೃದ್ಧದಂಪತಿಯು ಮಗನ ಮನೆಯ ವಿಳಾಸವನ್ನು ಹಂಚಿಕೊಂಡರು.’
‘ನನ್ನ ತಾಯಿ ಈ ಸಮಸ್ಯೆಯನ್ನು ಅರ್ಥ ಮಾಡಿಕೊಂಡು ಇದಕ್ಕೊಂದು ಪರಿಹಾರ ಕಂಡುಹಿಡಿಯಬೇಕು ಎಂದುಕೊಂಡರು. ಮಿಸ್ಟರ್ ಎಕ್ಸ್ಗೆ ಕೆಲ ದಿನಸಿಗಳನ್ನು ತಲುಪಿಸಲು ಆಲೋಚಿಸಿದರು. ಸ್ವಿಗ್ಗಿ ಇನ್ಸ್ಟಾಮಾರ್ಟ್ ಮೂಲಕ ಈ ಉಪಾಯ ಫಲಿಸಬಹುದೆಂದು ಕಾರ್ಯಪ್ರವೃತ್ತರಾದರು. ಆದರೆ ಅಂದುಕೊಂಡ ಹಾಗೆ ಆಗಲೇ ಇಲ್ಲ. ವಿಳಾಸ ಪತ್ತೆ ಹಚ್ಚುವಲ್ಲಿ ಡೆಲಿವರಿ ಏಜೆಂಟ್ ವಿಫಲರಾದರು. ಆಗ ಬೆಂಗಳೂರಿನಲ್ಲಿದ್ದುಕೊಂಡೇ ನನ್ನ ತಾಯಿ, ಚೆನ್ನೈನಲ್ಲಿರುವ ವೃದ್ಧದಂಪತಿಗೆ ಅವರ ಮಗನೊಂದಿಗೆ ಸಂಪರ್ಕ ಕಲ್ಪಿಸಲು ಮತ್ತೊಂದು ಉಪಾಯ ಹೂಡಿದರು.’
Last night, a distant relative of my mother (an old couple) notified her of not being able to reach their son (Let us call him Mr. X) who lives alone in Secunderabad. Mr. X was not answering his phone for the past few days. The old couple shared his house address.
— Saikiran Kannan | 赛基兰坎南 (@saikirankannan) September 12, 2022
‘ಮಿಸ್ಟರ್ ಎಕ್ಸ್ನ ಕೆಲ ಸ್ನೇಹಿತರನ್ನು ಪತ್ತೆ ಹಚ್ಚಿ ಆತನ ಸರಿಯಾದ ವಿಳಾಸವನ್ನು ಪಡೆದುಕೊಂಡರು. ಮತ್ತೊಮ್ಮೆ ಡೆಲಿವರಿ ಏಜೆಂಟ್ನನ್ನು ಸಂಪರ್ಕಿಸಿ ಅವನ ವಿಳಾಸಕ್ಕೆ ಭೇಟಿ ನೀಡುವಂತೆ ವಿನಂತಿಸಿಕೊಂಡರು. ಡೆಲಿವರಿ ಏಜೆಂಟ್ ಶ್ರೀನಾಥ್ ಶ್ರೀಕಾಂತ್, ತನ್ನ ಡೆಲಿವರಿ ಕೆಲಸವನ್ನು ಮುಗಿಸಿ ಆ ವಿಳಾಸಕ್ಕೆ ಹೋಗುವುದಾಗಿ ಭರವಸೆ ನೀಡಿದರು. ಕೊನೆಗೆ ದಿನಸಿ ಸಾಮಾನುಗಳನ್ನು ಮಿಸ್ಟರ್ ಎಕ್ಸ್ ಮನೆಗೆ ಯಶಸ್ವಿಯಾಗಿ ತಲುಪಿಸಿದರು. ಆದರೆ ಅಲ್ಲೊಂದು ಆಘಾತ ಕಾದಿತ್ತು. ಮಿಸ್ಟರ್ ಎಕ್ಸ್ಗೆ ಅಪಘಾತ ಸಂಭವಿಸಿದೆ ಎನ್ನುವ ವಿಷಯ ಶ್ರೀನಾಥ ಮೂಲಕ ತಿಳಿಯಿತು. ಮಿಸ್ಟರ್ ಎಕ್ಸ್, ತನ್ನ ಈ ಪರಿಸ್ಥಿತಿಯಿಂದಾಗಿ ಪೋಷಕರು ಒತ್ತಡ ಅನುಭವಿಸಬಾರದು ಎಂಬ ಕಾರಣಕ್ಕೆ ಅವರ ಕರೆಯನ್ನು ನಿರ್ಲಕ್ಷಿಸತೊಡಗಿದ್ದೆ ಎಂಬ ವಿಷಯವನ್ನು ತಿಳಿಸಿದರು. ನಂತರ ತನ್ನ ಪೋಷಕರೊಂದಿಗೆ ಮಾತನಾಡಿದರು. ಸ್ವಿಗ್ಗಿ ಡೆಲಿವರಿ ಏಜೆಂಟ್ರ ಈ ಸಹಾಯಕ್ಕೆ ವೃದ್ಧದಂಪತಿ ವಂದನೆ ಸಲ್ಲಿಸಿತು.’
ಈ ಘಟನೆಯನ್ನು 5,000ಕ್ಕೂ ಹೆಚ್ಚು ನೆಟ್ಟಿಗರು ಇಷ್ಟಪಟ್ಟಿದ್ದಾರೆ. ನೂರಾರು ಪ್ರತಿಕ್ರಿಯೆಗಳು ಈ ಪೋಸ್ಟ್ಗೆ ವ್ಯಕ್ತವಾಗಿವೆ.
ಮತ್ತಷ್ಟು ಟ್ರೆಂಡಿಂಗ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 5:06 pm, Wed, 14 September 22