ಇದು ನನ್ನ ಪತ್ನಿಗೆ ಪ್ರೀತಿಯ ಉಡುಗೊರೆ; ತನಗೆ ತಾನೇ ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡಿದ ವೈದ್ಯ

ಈ ಪ್ರಪಂಚದಲ್ಲಿ ನಡೆಯುವ ಕೆಲವೊಂದು ಘಟನೆಗಳನ್ನು ನೋಡಿದಾಗ ತುಂಬಾನೇ ವಿಚಿತ್ರವೆಂದು ಭಾಸವಾಗುತ್ತದೆ. ಸದ್ಯ ಅಂತಹದ್ದೊಂದು ಘಟನೆ ನಡೆದಿದ್ದು, ವೈದ್ಯರೊಬ್ಬರು ತಮಗೆ ತಾವೇ ಸಂತಾನಹರಣ ಶಸ್ತ್ರಚಿಕಿತ್ಸೆಯನ್ನು ಮಾಡಿದ್ದಾರೆ. ಹೌದು ಹೆಂಡತಿಯ ಖುಷಿಗಾಗಿ ವೈದ್ಯ ಸ್ವತಃ ತಮಗೆ ತಾವೇ ಶಸ್ತ್ರಚಿಕಿತ್ಸೆಯನ್ನು ಮಾಡಿದ್ದಾರೆ. ಈ ವಿಡಿಯೋವನ್ನು ಅವರು ಸೋಷಿಯಲ್‌ ಮೀಡಿಯಾದಲ್ಲಿ ಶೇರ್‌ ಮಾಡಿಕೊಂಡಿದ್ದು, ಈ ದೃಶ್ಯ ಕಂಡು ನೆಟ್ಟಿಗರು ಬೆರಗಾಗಿದ್ದಾರೆ.

ಇದು ನನ್ನ ಪತ್ನಿಗೆ ಪ್ರೀತಿಯ ಉಡುಗೊರೆ; ತನಗೆ ತಾನೇ ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡಿದ ವೈದ್ಯ
ಸಾಂದರ್ಭಿಕ ಚಿತ್ರ
Updated By: ಅಕ್ಷಯ್​ ಪಲ್ಲಮಜಲು​​

Updated on: Jan 24, 2025 | 3:46 PM

ಗಂಡಂದಿರು ತಮ್ಮ ಹೆಂಡ್ತಿಯ ಖುಷಿಗಾಗಿ ಏನು ಬೇಕಾದರೂ ಮಾಡ್ತಾರೆ ಅಲ್ವಾ. ಕೆಲವರು ಕಾಸ್ಟ್ಲಿ ಗಿಫ್ಟ್‌ಗಳನ್ನು ನೀಡುವ ಮೂಲಕ ಪತ್ನಿಯನ್ನು ಖುಷಿ ಪಡಿಸಿದರೆ ಇನ್ನೂ ಕೆಲವರು ಹೆಂಡತಿಯನ್ನು ತುಂಬಾ ಮುದ್ದು ಮಾಡುವ ಮೂಲಕ ಖುಷಿ ಪಡಿಸುತ್ತಾರೆ. ಆದ್ರೆ ಇಲ್ಲೊಬ್ರು ವೈದ್ಯ ತಮ್ಮ ಹೆಂಡ್ತಿಯನ್ನು ಖುಷಿಡಿಸಲು ಸ್ವತಃ ತಮಗೆ ತಾವೇ ಸಂತಾನಹರಣ ಶಸ್ತ್ರಚಿಕಿತ್ಸೆಯನ್ನು ಮಾಡಿಕೊಂಡಿದ್ದಾರೆ. ಹೌದು ಇದು ನನ್ನ ಹೆಂಡ್ತಿಗೆ ಪ್ರೀತಿಯ ಉಡುಗೊರೆ ಎನ್ನುತ್ತಾ ತಮಗೆ ತಾವೇ ಶಸ್ತ್ರಚಿಕಿತ್ಸೆ ಮಾಡಿದ್ದಾರೆ. ಈ ವಿಡಿಯೋವನ್ನು ಅವರು ಸೋಷಿಯಲ್‌ ಮೀಡಿಯಾದಲ್ಲಿ ಶೇರ್‌ ಮಾಡಿಕೊಂಡಿದ್ದು, ಈ ದೃಶ್ಯ ಕಂಡು ನೆಟ್ಟಿಗರು ಬೆರಗಾಗಿದ್ದಾರೆ.

ಚೆನ್ ವೀ-ನಾಂಗ್ ಎಂಬ ತೈವಾನ್‌ನ ಪ್ಲಾಸ್ಟಿಕ್ ಸರ್ಜನ್ ತಮಗೆ ತಾವೇ ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡಿಕೊಂಡಿದ್ದಾರೆ. ಅವರಿಗೆ ಈಗಾಗಲೇ ಮೂರು ಮಕ್ಕಳಿದ್ದು, ಮತ್ತು ಪತ್ನಿಗೆ ಇನ್ನೂ ಹೆಚ್ಚಿನ ಮಕ್ಕಳನ್ನು ಹೊಂದುವುದು ಇಷ್ಟವಿರಲಿಲ್ಲ. ಆದ ಕಾರಣ ಹೆಂಡತಿಯನ್ನು ಖುಷಿಪಡಿಸಲು ಹಾಗೂ ಆಕೆಗೆ ಪ್ರೀತಿಯ ಉಡುಗೊರೆಯಾಗಿ ವೈದ್ಯ ಚೆನ್‌ ವೀ-ನಾಂಗ್‌ ತಮಗೆ ತಾವೇ ಶಸ್ತ್ರಚಿಕಿತ್ಸೆಯನ್ನು ಮಾಡಿಕೊಂಡಿದ್ದಾರೆ. ಈ ಆಪರೇಷನ್‌ಗೆ ಸಂಬಂಧಪಟ್ಟ ಸಂಪೂರ್ಣ ದೃಶ್ಯವನ್ನು ಅವರು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದೆ. ಜೊತೆಗೆ ಅವರು ಈ ವಿಡಿಯೋವನ್ನು ಶೈಕ್ಷಣಿಕ ಉದ್ದೇಶಕ್ಕಾಗಿ ಹಾಗೂ ಜನರಿಗೆ ಜಾಗೃತಿ ಮೂಡಿಸುವ ಸಲುವಾಗಿ ಮಾಡಿದ್ದು ಎಂದು ಹೇಳಿಕೊಂಡಿದ್ದಾರೆ.

ಈ ಕುರಿತ ವಿಡಿಯೋವನ್ನು docchen3 ಹೆಸರಿನ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ವೈರಲ್‌ ಆಗುತ್ತಿರುವ ವಿಡಿಯೋದಲ್ಲಿ ವೈದ್ಯ ಚೆನ್ ವೀ-ನಾಂಗ್ ತಮ್ಮ ವೈದ್ಯಕೀಯ ಸಿಬ್ಬಂದಿಗಳ ಸಹಾಯದೊಂದಿಗೆ ತಮಗೆ ತಾವೇ ಸಂತಾನಹರಣ ಶಸ್ತ್ರ ಚಿಕಿತ್ಸೆ ಮಾಡುತ್ತಿರುವ ದೃಶ್ಯವನ್ನು ಕಾಣಬಹುದು.

ಇದನ್ನೂ ಓದಿ; ಮಗುವನ್ನು ಕಂಕುಳಲ್ಲಿಎತ್ಕೊಂಡು ಫೋನಲ್ಲಿ ಮಾತಾಡ್ತಾ ಬರ್ತಿದ್ದ ವೇಳೆ ತೆರೆದ ಚರಂಡಿಯೊಳಗೆ ಬಿದ್ದ ಮಹಿಳೆ

ಜನವರಿ 9 ರಂದು ಹಂಚಿಕೊಳ್ಳಲಾದ ಈ ವಿಡಿಯೋ 2.2 ಮಿಲಿಯನ್‌ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಹೀಗೆ ತಮಗೆ ತಾವೇ ಶಸ್ತ್ರಚಿಕಿತ್ಸೆ ಮಾಡಿಕೊಳ್ಳಲು ಸಾಧ್ಯವೇ?ʼ ಎಂದು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಇನ್ನೊಬ್ಬ ಬಳಕೆದಾರರು ʼತಮಗೆ ತಾವೇ ಆಪರೇಷನ್‌ ಮಾಡುವ ಮೂಲಕ ಡಾಕ್ಟರ್‌ ಹಣ ಉಳಿಸಿದ್ದಾರೆʼ ಎಂಬ ತಮಾಷೆಯ ಕಾಮೆಂಟ್‌ ಬರೆದುಕೊಂಡಿದ್ದಾರೆ. ಇನ್ನೂ ಅನೇಕರು ದೃಶ್ಯವನ್ನು ಕಂಡು ಫುಲ್‌ ಶಾಕ್‌ ಆಗಿದ್ದಾರೆ.

ವೈರಲ್​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ