Viral: ತಂದೆ 25 ವರ್ಷಗಳಿಂದ ವಾಚ್ ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದ ಹೋಟೆಲ್‌ಗೆ ಊಟಕ್ಕೆ ಕರೆದುಕೊಂಡು ಹೋದ ಮಗ
ಪ್ರತಿಯೊಬ್ಬ ತಂದೆತಾಯಿಗೂ ತಮ್ಮ ಮಕ್ಕಳು ಚೆನ್ನಾಗಿ ಓದಿ ಒಂದೊಳ್ಳೆ ಉದ್ಯೋಗ ಗಿಟ್ಟಿಸಿಕೊಂಡು ವಯಸ್ಸಾದ ಕಾಲದಲ್ಲಿ ತಮ್ಮನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎನ್ನುವುದಿರುತ್ತದೆ. ಇದೀಗ ವೈರಲ್ ಆಗಿರುವ ಪೋಸ್ಟ್ ನಲ್ಲಿ ದೆಹಲಿಯ ವ್ಯಕ್ತಿಯೊಬ್ಬರು, ತನ್ನ ತಂದೆ ವಾಚ್‌ಮನ್ ಆಗಿ ಕೆಲಸ ಮಾಡಿದ್ದ ಪಂಚತಾರಾ ಹೋಟೆಲ್‌ಗೆ ಊಟಕ್ಕೆ ಕರೆದೊಯ್ದಿದ್ದು ತಂದೆಯ ಮೊಗದಲ್ಲಿ ನಗು ತರಿಸಿದ್ದಾರೆ. ಈ ಪೋಸ್ಟ್ ಹಂಚಿಕೊಳ್ಳುತ್ತಿದ್ದಂತೆ ಸೋಶಿಯಲ್ ಮೀಡಿಯಾ ಬಳಕೆದಾರರು ಮೆಚ್ಚುಗೆಯ ಪ್ರತಿಕ್ರಿಯೆ ನೀಡಿದ್ದಾರೆ.
ಯಾರೇ ಇರಲಿ, ತನ್ನ ತಂದೆ ತಾಯಿ ಋಣವನ್ನು ತೀರಿಸಲು ಸಾಧ್ಯವೇ ಇಲ್ಲ. ವಯಸ್ಸಾದ ಕಾಲದಲ್ಲಿ ತಂದೆ ತಾಯಿಯನ್ನು ಎಷ್ಟು ಚೆನ್ನಾಗಿ ನೋಡಿಕೊಂಡರೂ ಕಡಿಮೆಯೇ. ಇದೀಗ ದೆಹಲಿ ಮೂಲದ ವ್ಯಕ್ತಿಯೊಬ್ಬರೂ ಮಾಡಿದ ಪೋಸ್ಟ್ ವೊಂದು ವೈರಲ್ ಆಗುತ್ತಿದ್ದು, ಈ ವ್ಯಕ್ತಿಯ ತಂದೆಯು 1995 ರಿಂದ 2000 ರವರೆಗೆ ಐಷಾರಾಮಿ ಹೋಟೆಲ್‌ನಲ್ಲಿ ವಾಚ್ ಮ್ಯಾನ್ ಆಗಿ ಕೆಲಸ ಮಾಡಿದ್ದರು. ಆದರೆ ಇದೀಗ ತಂದೆ ವಾಚ್‌ಮನ್ ಆಗಿ ಕೆಲಸ ಮಾಡಿದ್ದ ಪಂಚತಾರಾ ಹೋಟೆಲ್‌ಗೆ ಊಟಕ್ಕೆ ಕರೆದೊಯ್ದಿದ್ದು ಹೃದಯಸ್ಪರ್ಶಿ ಕಥೆಯನ್ನು ಹಂಚಿಕೊಂಡಿದ್ದಾರೆ.
ದೆಹಲಿಯ ಆರ್ಯನ್ ಮಿಶ್ರಾ ಎಂಬುವವರು ತಮ್ಮ ಹೆತ್ತವರೊಂದಿಗೆ ಊಟಕ್ಕೆ ಹೋಗಿದ್ದ ಫೋಟೋವನ್ನು ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ನನ್ನ ತಂದೆ 1995-2000 ರವರೆಗೆ ನವದೆಹಲಿಯ ಐಟಿಸಿಯಲ್ಲಿ ವಾಚ್ ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದರು. ಇಂದು ಅವರನ್ನು ಅದೇ ಸ್ಥಳಕ್ಕೆ ಊಟಕ್ಕೆ ಕರೆದೊಯ್ಯುವ ಅವಕಾಶ ಸಿಕ್ಕಿದೆ ಎಂದು ಬರೆದುಕೊಂಡಿದ್ದಾರೆ. ಸುಮಾರು 25 ವರ್ಷಗಳ ನಂತರ ಆರ್ಯನ್ ಮಿಶ್ರಾ ತನ್ನ ಪೋಷಕರನ್ನು ಆ ಪಂಚತಾರಾ ಹೋಟೆಲ್‌ಗೆ ಊಟಕ್ಕೆ ಕರೆದೊಯ್ದಿದ್ದು, ಈ ಪೋಸ್ಟ್ ನೆಟ್ಟಿಗರ ಮನಸ್ಸು ಗೆದ್ದಿದೆ.
ಇದನ್ನೂ ಓದಿ: ಇದು ವಿದ್ಯಾದೇಗುಲವೋ ಅಥವಾ ವ್ಯಾಪಾರ ಕೇಂದ್ರವೋ, ಬೆಂಗಳೂರಿನಲ್ಲಿ 3ನೇ ತರಗತಿಗೆ 2.1 ಲಕ್ಷ ಶುಲ್ಕವಂತೆ
ವೈರಲ್ ಪೋಸ್ಟ್ ಇಲ್ಲಿದೆ ನೋಡಿ:
My father was a watchman at ITC in New Delhi from 1995-2000; today I had the opportunity to take him to the same place for dinner 🙂 pic.twitter.com/nsTYzdfLBr
— Aryan Mishra | आर्यन मिश्रा (@desiastronomer) January 23, 2025
ಈ ಪೋಸ್ಟ್ ಅರವತ್ತು ಸಾವಿರಕ್ಕೂ ಅಧಿಕ ವೀಕ್ಷಣೆ ಕಂಡಿದ್ದು, ಬಳಕೆದಾರರೊಬ್ಬರು, ‘ನೀವು ಯಾರೆಂದು ನನಗೆ ತಿಳಿದಿಲ್ಲ, ಆದರೆ ಈ ಸುಂದರವಾದ ಕಥೆಗಳನ್ನು ಓದುವಾಗ, ನೋಡಿದಾಗ ಮನಸ್ಸಿಗೆ ಸಂತೋಷವಾಗುತ್ತದೆ ಎಂದಿದ್ದಾರೆ. ಮತ್ತೊಬ್ಬರು, ‘ಇಂತಹ ಮಕ್ಕಳನ್ನು ಪಡೆದ ನೀವೇ ಪುಣ್ಯವಂತರು’ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು, ‘ ಈ ಹೃದಯಸ್ಪರ್ಶಿ ಪೋಸ್ಟ್ ಮನಸ್ಸಿಗೆ ಹತ್ತಿರವಾಗಿದೆ. ತಂದೆ ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳಿ’ ಎಂದಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ