Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಗುವನ್ನು ಕಂಕುಳಲ್ಲಿಎತ್ಕೊಂಡು ಫೋನಲ್ಲಿ ಮಾತಾಡ್ತಾ ಬರ್ತಿದ್ದ ವೇಳೆ ತೆರೆದ ಚರಂಡಿಯೊಳಗೆ ಬಿದ್ದ ಮಹಿಳೆ

ಫೋನಲ್ಲಿ ಮುಳುಗಿ ಮೈಮರೆತು ಪಜೀತಿಗೆ ಸಿಲುಕಿದವರ ಕಥೆಗಳ ಬಗ್ಗೆ ಹಿಂದೆಯೂ ನೋಡಿರುತ್ತೀರಿ ಅಲ್ವಾ. ಇದೀಗ ಅಂತಹದ್ದೇ ಘಟನೆಯೊಂದರ ವಿಡಿಯೋ ವೈರಲ್‌ ಆಗಿದ್ದು, ಮಹಿಳೆಯೊಬ್ಬರು ಮಗುವನ್ನು ಕಂಕುಳಲ್ಲಿ ಎತ್ಕೊಂಡು ಫೋನಲ್ಲಿ ಮಾತಾಡ್ತಾ ಬರ್ತಿದ್ದ ವೇಳೆ ಆಯತಪ್ಪಿ ತೆರೆದ ಚರಂಡಿಯೊಳಗೆ ಮಗುವಿನ ಸಮೇತ ಬಿದ್ದಿದ್ದಾರೆ. ಈ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್‌ ಆಗುತ್ತಿದ್ದು, ಆಘಾತಕಾರಿ ದೃಶ್ಯವನ್ನು ಕಂಡು ನೆಟ್ಟಿಗರು ಬೆಚ್ಚಿಬಿದ್ದಿದ್ದಾರೆ.

ಮಗುವನ್ನು ಕಂಕುಳಲ್ಲಿಎತ್ಕೊಂಡು ಫೋನಲ್ಲಿ ಮಾತಾಡ್ತಾ ಬರ್ತಿದ್ದ ವೇಳೆ ತೆರೆದ ಚರಂಡಿಯೊಳಗೆ ಬಿದ್ದ ಮಹಿಳೆ
ವೈರಲ್​ ವಿಡಿಯೋ
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on: Jan 24, 2025 | 3:17 PM

ವಾಹನದಲ್ಲಿ ಪ್ರಯಾಣಿಸುವಾಗ ಮಾತ್ರವಲ್ಲದೆ ರಸ್ತೆಬದಿ ನಡೆದುಕೊಂಡು ಹೋಗುವಾಗಲು ಬಹಳ ಜಾಗ್ರತೆಯಿಂದ ನಡೆದುಕೊಂಡು ಹೋಗುವುದು ತುಂಬಾನೇ ಮುಖ್ಯ. ಹೌದು ಕೆಲವೊಂದು ಕಡೆ ಅಲ್ಲಲ್ಲಿ ರಸ್ತೆ ನಿರ್ಮಾಣ ಕಾರ್ಯ ನಡೆಯುತ್ತಿರುತ್ತವೆ, ತೆರೆದ ಚರಂಡಿ ಗುಂಡಿಗಳಿರುತ್ತವೆ. ಇವೆಲ್ಲ ಇರುವಾಗ ಬಹಳ ಜೋಪಾನವಾಗಿ ನಡೆದುಕೊಂಡು ಹೋಗಬೇಕಾಗುತ್ತದೆ. ಆದ್ರೆ ಇಲ್ಲೊಬ್ರು ಮಹಿಳೆ ಫೋನಲ್ಲಿ ಮಾತನಾಡುವ ಭರದಲ್ಲಿ ಮೈಮರೆತು ಸೀದಾ ಹೋಗಿ ಚರಂಡಿ ಗುಂಡಿಗೆ ಬಿದ್ದಿದ್ದಾರೆ. ಹೌದು ಆ ಮಹಿಳೆ ಮಗುವನ್ನು ಕಂಕುಳಲ್ಲಿ ಎತ್ಕೊಂಡು ಫೋನಲ್ಲಿ ಮಾತಾಡ್ತಾ ಬರ್ತಿದ್ದ ವೇಳೆ ಆಯತಪ್ಪಿ ತೆರೆದ ಚರಂಡಿಯೊಳಗೆ ಮಗುವಿನ ಸಮೇತ ಬಿದ್ದಿದ್ದಾರೆ. ಈ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್‌ ಆಗುತ್ತಿದ್ದು, ಆಘಾತಕಾರಿ ದೃಶ್ಯವನ್ನು ಕಂಡು ನೆಟ್ಟಿಗರು ಬೆಚ್ಚಿಬಿದ್ದಿದ್ದಾರೆ.

ಈ ಘಟನೆ 2021 ರಲ್ಲಿ ಫರಿದಾಬಾದ್‌ನಲ್ಲಿ ನಡೆದಿದ್ದು, ಈ ಕುರಿತ ವಿಡಿಯೋವೊಂದು ಇದೀಗ ಮತ್ತೊಮ್ಮೆ ವೈರಲ್‌ ಆಗುತ್ತಿದೆ. ರಸ್ತೆ ಬದಿಯಿದ್ದ ತೆರೆದ ಚರಂಡಿ ಗುಂಡಿಯನ್ನು ಗಮನಿಸಿದೆ ಮಹಿಳೆಯೊಬ್ಬರು ಮಗುವಿನ ಸಮೇತ ಆ ಗುಂಡಿಗೆ ಬಿದ್ದಿದ್ದಾರೆ. ಆ ಮಹಿಳೆ ಮಗುವನ್ನು ಕಂಕುಳಲ್ಲಿ ಎತ್ಕೊಂಡು ಫೋನಲ್ಲಿ ಮಾತಾಡ್ತಾ ಬರ್ತಿದ್ದ ವೇಳೆ ಆಯತಪ್ಪಿ ತೆರೆದ ಚರಂಡಿಯೊಳಗೆ ಮಗುವಿನ ಸಮೇತ ಬಿದ್ದಿದ್ದಾರೆ. ಆ ತಕ್ಷಣವೇ ಸ್ಥಳೀಯರು ಮಗು ಮತ್ತು ಮಹಿಳೆಯನ್ನು ರಕ್ಷಣೆ ಮಾಡಿದ್ದಾರೆ.

ಎಕ್ಸ್​​ ವೈರಲ್ ವಿಡಿಯೋ ಇಲ್ಲಿದೆ ನೋಡಿ:

rafikalloor1shams ಹೆಸರಿನ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಈ ಕುರಿತ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ವೈರಲ್‌ ಆಗುತ್ತಿರುವ ವಿಡಿಯೋದಲ್ಲಿ ಮಹಿಳೆಯೊಬ್ಬರು ಫೋನಲ್ಲಿ ಮಾತನಾಡುತ್ತಾ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿರುವ ದೃಶ್ಯವನ್ನು ಕಾಣಬಹುದು. ಹೀಗೆ ನಡೆದುಕೊಂಡು ಹೋಗುತ್ತಿರುವ ವೇಳೆ ಆಯತಪ್ಪಿ ಮಹಿಳೆ ಮಗುವಿನ ಸಮೇತ ಚರಂಡಿ ಗುಂಡಿಗೆ ಬಿದ್ದಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಟ್ಯಾಕ್ಸಿ ಹಗರಣ; ಪ್ರಯಾಣಕ್ಕೆ 450 ರೂ. ಎಂದು ಹೇಳಿ ಮಹಿಳೆಯಿಂದ 3,000 ರೂ. ವಸೂಲಿ ಮಾಡಿದ ಡ್ರೈವರ್

ಎರಡು ದಿನಗಳ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ 4.2 ಮಿಲಿಯನ್‌ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಅಯ್ಯಯ್ಯೋ ಬೀಳುವ ಭರದಲ್ಲಿ ಮಗುವಿನ ತಲೆಗೆ ಬಲವಾದ ಪೆಟ್ಟು ಬಿದ್ದಂತೆ ಕಾಣುತ್ತಿದೆʼ ಎಂಬ ಕಾಮೆಂಟ್‌ ಬರೆದುಕೊಂಡಿದ್ದಾರೆ. ಇನ್ನೊಬ್ಬ ಬಳಕೆದಾರರು ʼಫೋನ್‌ ಬದಲು ಸರಿಯಾಗಿ ರೋಡ್‌ ನೋಡ್ಕೊಂಡು ನಡೆದುಕೊಂಡು ಹೋಗ್ಬೇಕುʼ ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರರು ʼಆ ಹೆಂಗಸಿನ ತಪ್ಪೇನಿಲ್ಲ, ಚರಂಡಿ ಗುಂಡಿಯನ್ನು ಸರಿಯಾಗಿ ಮುಚ್ಚಬೇಕಿತ್ತುʼ ಎಂದು ಹೇಳಿದ್ದಾರೆ.

ವೈರಲ್​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ