Football : ಫುಟ್ಬಾಲ್ ಆಟವೆಂದರೆ? ಚೆಂಡನ್ನು ಕಾಲಿನಿಂದ ಒದೆಯುತ್ತ ಗುಂಪಿನಲ್ಲಿ ಆಟವಾಡುವುದು ಎಂಬ ಉತ್ತರ ನಿಮ್ಮಿಂದ ಹೊಮ್ಮುತ್ತದೆ. ಆದರೆ ಫುಟ್ಬಾಲ್ ನಿಮ್ಮ ಉಸಿರೇ ಆದರೆ? ಹೀಗೆ ಈ ರಾಜಸ್ಥಾನದ ಯುವಕ್ರೀಡಾಳುವಿನಂತೆ ಕೌಶಲ ಸಾಧಿಸುತ್ತೀರಿ. ಅಮಿತ್ ಸುತಾರ್ (Amith Suthar) ಎಂಬ ವೃತ್ತಿಪರ ಫುಟ್ಬಾಲ್ ಆಟಗಾರನಿಗೆ ಇಂಥದ್ದೇ ಜಾಗವಾಗಬೇಕಂತೇನಿಲ್ಲ. ಜನವಿದ್ದರೆ ಮುಗಿಯಿತು, ಅದು ರೈಲ್ವೇ ಸ್ಟೇಷನ್, ಬಸ್ಸ್ಟ್ಯಾಂಡ್, ಮೈದಾನ, ಉದ್ಯಾನ, ಅರಮನೆಯ ಬೀದಿ, ಅರಮನೆಯ ಒಳಾಂಗಣ ಹೀಗೆ ಎಲ್ಲಿ ಬೇಕೆಂದರಲ್ಲಿ ಫುಟ್ಬಾಲ್ಗಳ ಚಮತ್ಕಾರಿಕ ಪ್ರದರ್ಶನಕ್ಕೆ ತೊಡಗಿಕೊಳ್ಳುತ್ತಾನೆ. ಈ ಕೆಳಗಿನ ವಿಡಿಯೋ ನೋಡಿ.
ಪ್ರಸ್ತುತ ವಿಡಿಯೋ ಅನ್ನು ಸುಮಾರು 3.5 ಲಕ್ಷಕ್ಕೂ ಹೆಚ್ಚು ಜನರು ಇಷ್ಟಪಟ್ಟಿದ್ದಾರೆ. ಆರು ಮಿಲಿಯನ್ ಜನರು ಈ ವಿಡಿಯೋ ನೋಡಿದ್ದಾರೆ. ನೂರಾರು ಜನರು ಈತನ ಕೌಶಲದ ಬಗ್ಗೆ ಶ್ಲಾಘಿಸಿದ್ದಾರೆ. ಎಕ್ಸ್ಟ್ರಾ ಲೈಕ್ ಬಟನ್ ಎಲ್ಲಿದೆ ಎಂದು ಅನೇಕರು ಹುಡುಕಾಡುತ್ತಿದ್ಧಾರೆ. ಅಬ್ಬಾ ಎಂಥ ಪ್ರತಿಭೆ ನಿಮ್ಮದು ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ ಕೆಲವರು. ನಾ ಜನ್ಮದಲ್ಲಿ ಇಂಥ ಸಾಧನೆ ಮಾಡಲು ಸಾಧ್ಯವೇ ಇಲ್ಲ ಎಂದಿದ್ದಾರೆ ಒಂದಿಷ್ಟು ಮಂದಿ. ಒಂದು ಚೆಂಡನ್ನೇ ನನಗೆ ತಿರುಗಿಸಲು ಬಾರದು ಇನ್ನು ಏಕಕಾಲಕ್ಕೆ ಇಷ್ಟೊಂದು?! ಎಂದಿದ್ದಾರೆ ಒಬ್ಬರು.
ಇದನ್ನೂ ಓದಿ : Viral: ಶಂಕರ್ ಮಹಾದೇವನ್ ಬ್ರೆಥ್ಲೆಸ್ ಸಾಂಗ್; ಎಜಾಝ್ ಮತ್ತು ಪ್ರಿನ್ಸಿ ವರ್ಷನ್
ಇಂಥ ಪ್ರತಿಭಾವಂತ ಮಕ್ಕಳನ್ನು ಪ್ರತೀ ಪೋಷಕರೂ ಪಡೆಯಬೇಕು ಎಂದಿದ್ದಾರೆ ಮತ್ತೊಬ್ಬರು. ಈ ನಿಮ್ಮ ಹವ್ಯಾಸ ನಿಮ್ಮನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಲಿ, ಮಕ್ಕಳಿಗೂ ಇಂಥದನ್ನೆಲ್ಲ ಕಳಿಸಿಕೊಡಿ ಎಂದಿದ್ದಾರೆ ಹಲವಾರು ಜನ. ಇಂಥ ಪ್ರತಿಭೆಗೆ ಪ್ರೋತ್ಸಾಹ ಮತ್ತು ಒಳ್ಳೆಯ ಅವಕಾಶಗಳು ಖಂಡಿತ ಸಿಗುವಂತಾಗಲಿ ಎಂದು ಹಾರೈಸಿದ್ದಾರೆ ನೆಟ್ಟಿಗರು.
ಇದನ್ನೂ ಓದಿ : Viral Video: ಲಿಸಾ; ಕುತೂಹಲ ಕೆರಳಿಸಿರುವ ಒಡಿಶಾದ ಮೊದಲ ಎಐ ನ್ಯೂಸ್ ಆ್ಯಂಕರ್
ಕೌಶಲ ಎನ್ನುವುದು ವ್ಯಕ್ತಿತ್ವಕ್ಕೆ ಮೆರಗು ಕೊಡುತ್ತದೆ. ಹಾಗಾಗಿ ಒಂದು ವೃತ್ತಿಯೊಂದಿಗೆ ಪ್ರವೃತ್ತಿಯಂತೆ ನಿಮಗೆ ಇಷ್ಟವಾದ ಕೌಶಲವನ್ನು ರೂಢಿಸಿಕೊಳ್ಳುವುದು ಅತ್ಯವಶ್ಯ. ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ