ತಮ್ಮದೇ ವಿಭಿನ್ನ ನಟನೆಯ ಮೂಲಕ ಅಪಾರ ಅಭಿಮಾನಿಗಳನ್ನು ಗಳಿಸಿರುವ ತಮಿಳು ನಟ ಚಿಯಾನ್ ವಿಕ್ರಮ್ (Chiyan Vikram) ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಎಂ ಎಸ್ ಧೋನಿ (MS Dhoni) ಅವರನ್ನು ಭೇಟಿಯಾಗಿದ್ದಾರೆ. ಧೋನಿಯೊಂದಿಗಿನ ಫೋಟೋವನ್ನು ಅವರು ಸಾಮಾಜಿಕ ಜಾಲತಾಣದಲ್ಲಿ ವಿಕ್ರಮ್ ಹಂಚಿಕೊಂಡಿದ್ದಾರೆ. ಸದ್ಯ ಫೋಟೋಗಳು ಸಖತ್ ವೈರಲ್ (Viral Photo) ಆಗಿದೆ. ಟ್ವಿಟರ್ನಲ್ಲಿ ಹೊಂಚಿಕೊಂಡ ಫೋಟೋಗಳು ವೈರಲ್ ಆಗಿದೆ.
This is Awesome ???❤️?#Chiyaan & #Dhoni #Mahaan #MahaanOnPrime #MahaanTeaser #Vikram #ChiyaanVikram pic.twitter.com/KVxdmWJaWD
— Jeevakaran T (@TJeevakaran) January 31, 2022
ಐಪಿಎಲ್ ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿರುವ ಧೋನಿ ಅವರಿಗೆ ಚೆನ್ನೈನಲ್ಲಿ ಅಪಾರ ಅಭಿಮಾನಿಗಳಿದ್ದಾರೆ. ಚೆನ್ನೈ ಅಭಿಮಾನಿಗಳು ಅವರನ್ನು ಥಾಲಾ ಎಂದೇ ಕರೆಯುತ್ತಾರೆ. ಇತ್ತೀಚೆಗೆ ಧೋನಿ ಸ್ಟಾರ್ ಹೊಟೇಲ್ವೊಂದಕ್ಕೆ ತೆರಳಿದ್ದ ವೇಳೆ ಆಕಸ್ಮಾತ್ ಆಗಿ ನಟ ಚಿಯಾನ್ ವಿಕ್ರಮ್ ಅವರನ್ನು ಭೇಟಿಯಾಗಿದ್ದಾರೆ. ಈ ವೇಳೆ ಫೋಟೊವನ್ನು ತೆಗೆಸಿಕೊಂಡಿದ್ದಾರೆ. ಸದ್ಯ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಅಭಿಮಾನಿಗಳು ಫೋಟೋ ನೋಡಿ ಸಂತಸಗೊಂಡಿದ್ದಾರೆ. ಜೀವಕರಣ ಎನ್ನುವ ಟ್ವಿಟರ್ ಬಳಕೆದಾರರು ಈ ಫೋಟೋವನ್ನು ಹಂಚಿಕೊಂಡಿದ್ದು, ಸಖತ್ ವೈರಲ್ ಆಗಿದೆ.
ಈ ಹಿಂದೆ ಎಂಎಸ್ ಧೋನಿ ಅವರು ವಿಜಯ್ ಅವರನ್ನು ಭೇಟಿಯಾಗಿದ್ದರು. ಈ ವೇಳೆಯೂ ಹಂಚಿಕೊಂಡ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಸದ್ಯ ವಿಕ್ರಮ್ ಅವರ ಕೈಯಲ್ಲಿ ಸಾಲು ಸಾಲು ಚಿತ್ರಗಳಿವೆ. ಮಹಾನ್, ಕೋಬ್ರಾ ಸೇರಿದಂತೆ ಹಲವು ಸಿನಿಮಾಗಳ ಶೂಟಿಂಗ್ನಲ್ಲಿ ವಿಕ್ರಮ್ ಸಖತ್ ಬ್ಯಸಿಯಾಗಿದ್ದಾರೆ.
ಇದನ್ನೂ ಓದಿ:
ನಿಧಿ ನೆನಪಲ್ಲೇ ಸಾಗಿದ ‘ಲವ್ ಮಾಕ್ಟೇಲ್ 2’ ಟ್ರೇಲರ್; ನೀವಂದುಕೊಂಡಷ್ಟು ಸುಲಭವಿಲ್ಲ ಈ ಕೇಸ್