
ತೆಲಂಗಾಣ ಜೂನ್ 01: ಸಾಮಾನ್ಯವಾಗಿ ಗುಬ್ಬಚ್ಚಿಗಳು ಈ ಮರಗಳು ಇಲ್ಲವಾದರೆ ಮನೆಗಳ ಜಂತಿ, ಸಂದುಗಳು, ಛಾವಣಿಗಳನ್ನು ಆಶ್ರಯಿಸಿ ಗೂಡು ಕಟ್ಟುತ್ತವೆ. ಆದರೆ ಇದೀಗ ಸ್ಕೂಟರ್‌ನಲ್ಲಿ ಗೂಡು ಕಟ್ಟಿ ಮೊಟ್ಟೆಯಿಟ್ಟು ಮರಿ ಮಾಡಿದೆ. ಈ ಕುತೂಕಲಕಾರಿ ಘಟನೆಯೂ ತೆಲಂಗಾಣದ ಖಮ್ಮಂ ಜಿಲ್ಲೆಯ ವೈರಾದಲ್ಲಿ (Vaira, Khammam district of Telangana) ನಡೆದಿದೆ. ಹೌದು, ಗುಬ್ಬಚ್ಚಿಯೊಂದು ಗುಬ್ಬಚ್ಚಿ ತನ್ನ ಮರಿಗಳನ್ನು ರಕ್ಷಿಸಲು ಆಯ್ಕೆ ಮಾಡಿಕೊಂಡ ಈ ನೂತನ ಮಾರ್ಗದ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯಾಗಿದೆ.
ಗುಬ್ಬಚ್ಚಿಯೊಂದು ಸಂತಾನ ಅಭಿವೃದ್ಧಿಗೆ ವೈರ ಪುರಸಭೆ ವ್ಯಾಪ್ತಿಯ ಲೀಲಾಸುಂದರಯ್ಯನಗರದ ಮನೆಯ ಕಾಂಪೌಂಡ್‌ನಲ್ಲಿ ನಿಲ್ಲಿಸಿದ್ದ ಸ್ಕೂಟರ್‌ನನ್ನು ಸುರಕ್ಷಿತ ತಾಣವನ್ನಾಗಿ ಮಾಡಿಕೊಂಡಿದೆ. ಬಾಡಿಗೆ ಮನೆಯಲ್ಲಿ ವಾಸವಿದ್ದ ಕುಟುಂಬವೊಂದು ಬೇಸಿಗೆ ರಜೆಯಲ್ಲಿ ತಮ್ಮ ಊರಿಗೆ ತೆರಳಿದ್ದು. ಈ ದ್ವಿಚಕ್ರ ವಾಹನವು ಒಂದು ತಿಂಗಳಿಗೂ ಹೆಚ್ಚು ಕಾಲ ಮನೆಯ ಹೊರಭಾಗದಲ್ಲಿ ನಿಲ್ಲಿಸಲಾಗಿತ್ತು.
ಇದನ್ನೂ ಓದಿ: ಬಾಯಾರಿಕೆಯಿಂದ ಬಸ್ ಅಡ್ಡಗಟ್ಟಿ ನೀರು ಕುಡಿದ ಕೋತಿಗಳು; ವಿಡಿಯೋ ವೈರಲ್
ಹೀಗಾಗಿ ಸ್ಕೂಟಿಯ ಕೀ ಪಕ್ಕದಲ್ಲಿ ಒಂದು ಸಣ್ಣ ಖಾಲಿ ಜಾಗದಲ್ಲಿ ಗುಬ್ಬಚ್ಚಿ ಗೂಡು ಕಟ್ಟಿ, ಮೊಟ್ಟೆ ಇಟ್ಟು ಮರಿ ಮಾಡಿದೆ. ಈ ಗುಬ್ಬಚ್ಚಿಗಳು ಹೆಚ್ಚಾಗಿ ಸ್ಕೂಟಿಗೆ ಬರುವುದನ್ನು ಸ್ಥಳೀಯರು ಗಮನಿಸಿದ್ದು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಸ್ಕೂಟಿಯಲ್ಲಿ ಗುಬ್ಬಚ್ಚಿ ಗೂಡು ಮೊಟ್ಟೆಗಳಿರುವುದು ಕಂಡು ಬಂದಿದೆ. ಈ ಘಟನೆಯೂ ಸ್ಥಳೀಯರನ್ನು ಅಚ್ಚರಿಗೊಳಿಸಿದೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ