Viral Video; ಪ್ರಾಣವನ್ನೇ ಪಣಕ್ಕಿಟ್ಟು ನಾಯಿಯನ್ನು ರಕ್ಷಿಸಿದ ತೆಲಂಗಾಣ ಪೊಲೀಸ್​​ ಅಧಿಕಾರಿ

| Updated By: Digi Tech Desk

Updated on: Jan 28, 2022 | 12:23 PM

ಹೋಮ್​ ಗಾರ್ಡ್ ಪೊಲೀಸ್​​ ಅಧಿಕಾರಿಯೊಬ್ಬರು  ನೀರಿನ ಸುಳಿಗೆ ಸಿಲುಕಿದ್ದ ನಾಯಿಯನ್ನು ತನ್ನ ಪ್ರಾಣ ಒತ್ತೆಯಿಟ್ಟು ರಕ್ಷಸಿದ ಘಟನೆ ನಡೆದಿದೆ. ವಿಡಿಯೋವನ್ನು ಐಪಿಎಸ್​ ಅಧಿಕಾರಿ ದಿಪಾಂಶು ಕಬ್ರಾ ಎನ್ನುವವರು ಹಂಚಿಕೊಂಡಿದ್ದಾರೆ.

Viral Video; ಪ್ರಾಣವನ್ನೇ ಪಣಕ್ಕಿಟ್ಟು ನಾಯಿಯನ್ನು ರಕ್ಷಿಸಿದ ತೆಲಂಗಾಣ ಪೊಲೀಸ್​​ ಅಧಿಕಾರಿ
ನಾಯಿಯನ್ನು ರಕ್ಷಿಸಿದ ಅಧಿಕಾರಿ
Follow us on

ಸಾಮಾಜಿಕ ಜಾಲತಾಣದಲ್ಲಿ ಆಗಾಗ ಕಾಣಿಸಿಕೊಳ್ಳುವ ವೈರಲ್​ ವಿಡಿಯೋಗಳು ನೆಟ್ಟಿಗರ ಮನ ಮುಟ್ಟುವಂತೆ ಇರುತ್ತವೆ. ಹೃದಯ ಸ್ಪರ್ಶಿ ಘಟನೆಗಳು, ಮಾನವೀಯ ಘಟನೆಗಳು ನೋಡುಗರನ್ನು ಧನಾತ್ಮಕವಾಗಿ ಯೋಚಿಸುವಂತೆ  ಮಾಡುತ್ತದೆ. ಅಂತಹದ್ದೆ ಒಂದು ಘಟನೆ ಈಗ ತೆಲಂಗಾಣ (Telangana) ದಲ್ಲಿ ನಡೆದಿದೆ. ಹೋಮ್​ ಗಾರ್ಡ್ (Home Guard)​​ ಪೊಲೀಸ್​​ ಅಧಿಕಾರಿಯೊಬ್ಬರು  ನೀರಿನ ಸುಳಿಗೆ ಸಿಲುಕಿದ್ದ ನಾಯಿಯನ್ನು ತನ್ನ ಪ್ರಾಣ ಒತ್ತೆಯಿಟ್ಟು ರಕ್ಷಸಿದ ಘಟನೆ ನಡೆದಿದೆ. ವಿಡಿಯೋವನ್ನು ಐಪಿಎಸ್​ ಅಧಿಕಾರಿ (IPS Officer) ದಿಪಾಂಶು ಕಬ್ರಾ ಎನ್ನುವವರು ಹಂಚಿಕೊಂಡಿದ್ದಾರೆ.

ವಿಡಿಯೋದಲ್ಲಿ ಜೋರಾಗಿ ನೀರು ಹರಿಯುತ್ತಿದ್ದ ಪಕ್ಕದಲ್ಲಿ ನಾಯಿಯೊಂದು ಹೆದರಿಕೊಂಡು ಕುಳಿತಿರವುದನ್ನು ಕಾಣಬಹುದು. ನಂತರ ಹೆದರಿದ ನಾಯಿಯನ್ನು ನೋಡಿ ಜೆಸಿಬಿಯ ಮೂಲಕ ಅಲ್ಲಿಗೆ ತೆರಳಿ ಪೊಲೀಸ್​ ಅಧಿಕಾರಿಯೊಬ್ಬರು ನಾಯಿಯನ್ನು ರಕ್ಷಿಸಿದ್ದಾರೆ. ನಾಯಿಯನ್ನು ರಕ್ಷಿಸಿದ ಪೊಲೀಸ್​ ಅಧಿಕಾರಿಯನ್ನು ಮುಝಿಬ್​ ರಶೀದ್​ ಎಂದು ಗುರುತಿಸಲಾಗಿದೆ. ಇವರು ತೆಲಂಗಾಣ ರಾಜ್ಯ ಪೊಲೀಸ್ ಅಧಿಕಾರಿಯಾಗಿದ್ದಾರೆ. ವಿಡಿಯೋ ನೋಡಿ ನೆಟ್ಟಿಗರು ಮಾನವೀಯ ಗುಣ ಇನ್ನೂ ಇದೆ ಎಂದು ಕಾಮೆಂಟ್​ ಮಾಡಿದ್ದಾರೆ.

ವಿಡಿಯೋವನ್ನು ಹಂಚಿಕೊಂಡ ಐಪಿಎಸ್​ ಅಧಿಕಾರಿ, ನೀರಿನ ಸುಳಿಯನ್ನು ನೋಡಿ ಹೆದರಿ ಕುಳಿತ ನಾಯಿಯನ್ನು ರಕ್ಷಿಸಿದ ನಮ್ಮ ಅಧಿಕಾರಿ ಸ್ವತಃ ಜೆಸಿಬಿಯನ್ನು ಕರೆಸಿ ಪ್ರಾಣಿಯನ್ನು ರಕ್ಷಿಸಿದ್ದಾರೆ. ಅವರ ಪ್ರಾಣವನ್ನು ಲೆಕ್ಕಿಸದೆ ನಾಯಿಯನ್ನು ರಕ್ಷಿಸಿದ ಅವರ ದೈರ್ಯಕ್ಕೆ ನನ್ನ ಸಲಾಂ ಎಂದು ಕ್ಯಾಪ್ಷನ್​ ನೀಡಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಅದ ವೀಡಿಯೋ ನೆಟ್ಟಿಗರ ಮನ ಗೆದ್ದಿದೆ. ವಿಡಿಯೋ ಹಂಚಿಕೊಂಡಾಗಿನಿಂದ ಈವರೆಗೆ 7 ಸಾವಿರಕ್ಕೂ ಹೆಚ್ಚು ವೀಕ್ಷಣೆ ಪಡೆದಿದ್ದು ಪೊಲೀಸ್ ಅಧಿಕಾರಿಯ ಕಾರ್ಯಕ್ಕೆ ಶ್ಲಾಘನೆ ವ್ಯಕ್ತವಾಗಿದೆ.

ಇದನ್ನೂ ಓದಿ;

Viral Video; ಹಿಮಪಾತದ ನಡುವೆ ಜೆಸಿಬಿ ಏರಿ ಮದುವೆ ಮಂಟಪಕ್ಕೆ ಬಂದ ವರ

Viral: ಆಲೂಗಡ್ಡೆ ಪದಾರ್ಥ ಎಸೆದು ಕಿತ್ತಾಡಿಕೊಂಡ ಮಹಿಳಾ ಖೈದಿಗಳು; ಅವರಿಗೆ ನ್ಯಾಯಾಲಯ ವಿಧಿಸಿದ ದಂಡವೆಷ್ಟು ಗೊತ್ತಾ?

Published On - 9:45 am, Fri, 28 January 22