ಹಳೆ ನಾಣ್ಯಗಳನ್ನು ನೀಡಿ 99 ಲಕ್ಷ ರೂ. ಬಹುಮಾನ ನಿಮ್ಮದಾಗಿಸಿಕೊಳ್ಳಿ, 1.8 ಲಕ್ಷ ರೂ. ಕಳೆದುಕೊಂಡ ವ್ಯಕ್ತಿ

| Updated By: ಅಕ್ಷಯ್​ ಪಲ್ಲಮಜಲು​​

Updated on: Jan 22, 2025 | 4:51 PM

ಸೈಬರ್‌ ವಂಚನೆ, ಆನ್‌ಲೈನ್ ಸ್ಕ್ಯಾಮ್‌ಗಳಿಗೆ ಬಲಿಯಾಗಿ ಲಕ್ಷಾಂತರ ರೂಪಾಯಿ ಹಣವನ್ನು ಕಳೆದುಕೊಂಡವರ ಸುದ್ದಿಗಳು ಆಗಾಗ್ಗೆ ಕೇಳಿ ಬರುತ್ತಲೇ ಇವೆ. ಇತ್ತೀಚಿಗೆ ಇಂತಹ ಪ್ರಕರಣಗಳು ತೀರಾ ಹೆಚ್ಚಾಗುತ್ತಿದೆ. ಇದೀಗ ಇಲ್ಲೊಂದು ಇಂತಹದ್ದೇ ಪ್ರಕರಣ ಬೆಳಕಿಗೆ ಬಂದಿದ್ದು, ಹಳೆ ನಾಣ್ಯಗಳನ್ನು ನೀಡಿ 99 ಲಕ್ಷ ರೂ. ಹಣವನ್ನು ನಿಮ್ಮದಾಗಿಸಿಕೊಳ್ಳಿ ಎಂದು ವಂಚಕರು ಇನ್‌ಸ್ಟಾಗ್ರಾಮ್‌ನಲ್ಲಿ ನೀಡಿದ್ದ ನಕಲಿ ಜಾಹೀರಾತನ್ನು ನಂಬಿ ವ್ಯಕ್ತಿಯೊಬ್ಬರು ಬರೋಬ್ಬರಿ 1.8 ಲಕ್ಷ ರೂ. ಕಳೆದುಕೊಂಡಿದ್ದಾರೆ. ಈ ಕುರಿತ ಸುದ್ದಿಯೊಂದು ಇದೀಗ ಸಖತ್‌ ವೈರಲ್‌ ಆಗುತ್ತಿದೆ.

ಹಳೆ ನಾಣ್ಯಗಳನ್ನು ನೀಡಿ 99 ಲಕ್ಷ ರೂ. ಬಹುಮಾನ ನಿಮ್ಮದಾಗಿಸಿಕೊಳ್ಳಿ, 1.8 ಲಕ್ಷ ರೂ. ಕಳೆದುಕೊಂಡ ವ್ಯಕ್ತಿ
ವೈರಲ್ ಸ್ಟೋರಿ
Follow us on

ಇತ್ತೀಚಿಗೆ ಸೈಬರ್ ವಂಚನೆ ಪ್ರಕರಣಗಳು ತೀರಾ ಹೆಚ್ಚಾಗಿದೆ. ಸ್ಕ್ಯಾಮರ್ಸ್‌ಗಳ ಬಲೆಗೆ ಬಿದ್ದು ಅದೆಷ್ಟೋ ಅಮಾಯಕ ಜನರು ತಮ್ಮ ಬ್ಯಾಂಕ್‌ ಖಾತೆಯಿಂದ ಲಕ್ಷಾಂತರ ರೂಪಾಯಿಗಳನ್ನು ಕಳೆದುಕೊಂಡಿದ್ದಾರೆ. ಈ ಬಗ್ಗೆ ಎಚ್ಚರಿಕೆಯಿಂದ ಇರಬೇಕು ಎಂದು ಜಾಗೃತಿ ಮೂಡಿಸಿದರೂ ಕೆಲವೊಬ್ಬರು ಬಹಳ ಸುಲಭವಾಗಿ ಇಂತಹ ವಂಚನೆಗಳಿಗೆ ಬಲಿಯಾಗುತ್ತಿದ್ದಾರೆ. ಇದಕ್ಕೆ ಉದಾಹರಣೆಯಂತಿರುವ ಘಟನೆಯೊಂದು ಇದೀಗ ನಡೆದಿದ್ದು, ಹಳೆ ನಾಣ್ಯಗಳನ್ನು ನೀಡಿ 99 ಲಕ್ಷ ರೂ. ಹಣವನ್ನು ನಿಮ್ಮದಾಗಿಸಿಕೊಳ್ಳಿ ಎಂದು ವಂಚಕರು ಇನ್‌ಸ್ಟಾಗ್ರಾಮ್‌ನಲ್ಲಿ ನೀಡಿದ್ದ ನಕಲಿ ಜಾಹೀರಾತನ್ನು ನಂಬಿ ವ್ಯಕ್ತಿಯೊಬ್ಬರು ಬರೋಬ್ಬರಿ 1.8 ಲಕ್ಷ ರೂ. ಕಳೆದುಕೊಂಡಿದ್ದಾರೆ. ಈ ಕುರಿತ ಸುದ್ದಿಯೊಂದು ಇದೀಗ ಸಖತ್‌ ವೈರಲ್‌ ಆಗುತ್ತಿದೆ.

ಈ ಘಟನೆ ಹೈದರಾಬಾದ್‌ನ ಕಾಮರೆಡ್ಡಿ ಜಿಲ್ಲೆಯ ಬಿರ್ಕೂರಿನಲ್ಲಿ ನಡೆದಿದ್ದು, ಇಲ್ಲಿನ ನರ್ರಾ ಗಂಗಾರಾಮ್‌ ಎಂಬ ವ್ಯಕ್ತಿ ಹಳೆ ನಾಣ್ಯಗಳನ್ನು ನೀಡಿ, 99 ಲಕ್ಷ ಬಹುಮಾನವನ್ನು ಪಡೆಯಿರಿ ಎಂಬ ನಕಲಿ ಜಾಹೀರಾತನ್ನು ನಂಬಿ ಬರೋಬ್ಬರಿ 1.8 ಲಕ್ಷ ರೂ. ಹಣವನ್ನು ಕಳೆದುಕೊಂಡಿದ್ದಾರೆ.

ಗಂಗಾರಾಮ್ ಸಂಕ್ರಾಂತಿ ಹಬ್ಬದ ನಿಮಿತ್ತ ಸೊಂಟೂರಿಗೆ ತೆರಳಿದ್ದ ಸಂದರ್ಭದಲ್ಲಿ ಅಂದ್ರೆ ಜನವರಿ 13 ರಂದು ಇನ್ ಸ್ಟಾಗ್ರಾಂನಲ್ಲಿ ಹಳೆ ನಾಣ್ಯಗಳನ್ನು ನೀಡಿ 99 ಲಕ್ಷ ರೂ. ಬಹುಮಾನವನ್ನು ನಿಮ್ಮದಾಗಿಸಿಕೊಳ್ಳಿ ಎಂದು ಪ್ರಕಟಿಸಿದ್ದ ಜಾಹೀರಾತನ್ನು ನೋಡುತ್ತಾರೆ. ಆ ತಕ್ಷಣ ಗಂಗಾರಾಮ್‌ ಜಾಹೀರಾತಿನಲ್ಲಿ ನೀಡಿದ್ದ ಫೋನ್‌ ನಂಬರ್‌ಗೆ ಕರೆ ಮಾಡಿ ಮಾತನಾಡುತ್ತಾರೆ. ಕರೆ ಸ್ವೀಕರಿಸಿದ ವಂಚಕರು ಹಳೆಯ ಕಾಲದ ಒಂದು ಪೈಸೆ, 5, 10, 20, 50 ಪೈಸೆಯ ನಾಣ್ಯಗಳು ಮತ್ತು ವಿಶೇಷ ಸಂಖ್ಯೆಯ 100, 200 ರೂಪಾಯಿ ನೋಟುಗಳನ್ನು ನೀಡಿದರೆ 99 ಲಕ್ಷ ಕಳುಹಿಸುತ್ತೇವೆ ಎಂದು ಹೇಳುತ್ತಾರೆ ಮತ್ತು ಜೊತೆಗೆ ಆದರೆ, ಇದಕ್ಕೆ ಒಂದಿಷ್ಟು ಹಣ ಖರ್ಚಾಗುತ್ತದೆ ಎಂದು ಕೂಡಾ ಗಂಗಾರಾಮ್‌ನನ್ನು ನಂಬಿಸುತ್ತಾರೆ.

ಇದನ್ನೂ ಓದಿ: ಅಂದು ನಾಟಕದಲ್ಲಿ ಗಂಡ ಹೆಂಡ್ತಿ ಪಾತ್ರ, 20 ವರ್ಷದ ಬಳಿಕ ರಿಯಲ್ ಆಗಿ ಮದುವೆಯಾದ ಜೋಡಿಯ ಕಥೆಯಿದು

ವಂಚಕರ ಮಾತನ್ನು ನಂಬಿದ ಗಂಗಾರಾಮ್‌ 14 ರಿಂದ 17 ತಾರೀಕಿನವರೆಗೆ ಡಿಜಿಟಲ್‌ ಅಪ್ಲಿಕೇಷನ್‌ ಒಂದರಲ್ಲಿ ಸ್ಕ್ಯಾಮರ್ಸ್‌ಗೆ 1ಲಕ್ಷದ 80 ಸಾವಿರ ರೂ. ಹಣವನ್ನು ಪಾವತಿ ಮಾಡುತ್ತಾನೆ. ನಂತರ ಮತ್ತೊಮ್ಮೆ ಕರೆ ಮಾಡಿದ ಸ್ಕ್ಯಾಮರ್ಸ್‌ 99 ಲಕ್ಷ ರೂ ಹಣವನ್ನು ತೆಗೆದುಕೊಂಡು ಬರಬೇಕಾದರೆ ವಿಮಾನ ನಿಲ್ದಾಣದಲ್ಲಿನ ತನಿಖೆ, ಕಾರು ಮತ್ತು ಭದ್ರತಾ ಸಿಬ್ಬಂದಿ ಅಂತ ಒಂದಷ್ಟು ಖರ್ಚಾಗುತ್ತದೆ ಹಾಗಾಗಿ ಇನ್ನೂ 1 ಲಕ್ಷ ರೂ. ಹಣ ಕಳುಹಿಸಿ ಎಂದು ಕೇಳುತ್ತಾರೆ. ಈ ಸಂದರ್ಭದಲ್ಲಿ ಗಂಗಾರಾಮ್‌ಗೆ ತಾನು ವಂಚನೆಗೆ ಬಲಿಯಾಗಿರುವುದು ಅರಿವಿಗೆ ಬಂದಿದ್ದು, ತಾನು ಮೋಸ ಹೋಗಿದ್ದೇನೆ ಎಂದು ಅರಿತು ತಕ್ಷಣ ಆತ ಬಿರ್ಕೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ.

ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ