Tomato : ಟೊಮ್ಯಾಟೋ ಕದ್ದವರು, ಟೊಮ್ಯಾಟೋ ನುಂಗಿದವರು, ಟೊಮ್ಯಾಟೋ ಕಾಯುವವರು, ಟೊಮ್ಯಾಟೋ ಧರಿಸಿದವರನ್ನೆಲ್ಲ ನೋಡುತ್ತಿದ್ದೀರಿ. ಟೊಮ್ಯಾಟೋ ಮೀಮ್ಗಳು, ಟೊಮ್ಯಾಟೋ ಹಾಡುಗಳು, ಟೊಮ್ಯಾಟೋ ಜೋಕ್ಗಳು, ಟೊಮ್ಯಾಟೋ ಜಗಳಗಳು… ಲೆಕ್ಕವೇ ಇಲ್ಲ. ಟೊಮ್ಯಾಟೋ ಇಷ್ಟೊಂದು ಡಿಮ್ಯಾಂಡ್ನಲ್ಲಿರಬೇಕಾದರೆ ಯಾಕೆ ಟೊಮ್ಯಾಟೋ ಬಿಝಿನೆಸ್ ಮಾಡಬಾರದು ಎಂಬ ಆಲೋಚನೆ ಬೆಂಗಳೂರಿನ (Bengaluru) ಈ ಹುಡುಗಿಯರಿಬ್ಬರಿಗೆ ಅನ್ನಿಸಿದೆ. ಇವರ ಈ ವಿಡಿಯೋ ನೋಡಿದ ಮೇಲೆ ಬೆಂಗಳೂರಿನ ಬಿಝಿನೆಸ್ ಸ್ಕೂಲ್ಗಳಲ್ಲಿ ಟೊಮ್ಯಾಟೋ ಕೋರ್ಸ್ ಶುರುವಾದರೂ ಆದೀತೇ!
ಓರಿಯನ್ ಮಾಲ್ನ (Orion Mall) ಅಂಗಳದಲ್ಲಿ ಈ ವಿಡಿಯೋ ಚಿತ್ರೀಕರಿಸಲಾಗಿದೆ. ಸಂದರ್ಶಕಿಯ ಪಾತ್ರವಹಿಸಿದ ಒಬ್ಬಾಕೆ ಈ ಇಬ್ಬರೂ ಹುಡುಗಿಯರನ್ನು ಮಾತನಾಡಿಸುತ್ತಾಳೆ. ತಾವು ಧರಿಸಿದ ಒಂದೊಂದು ಬಟ್ಟೆ, ಚಪ್ಪಲಿಗಳು ಮತ್ತು ಹಿಡಿದುಕೊಂಡಿರುವ ಬ್ಯಾಗ್ಗಳ ಬ್ರ್ಯಾಂಡ್, ಅವುಗಳ ಬೆಲೆಯನ್ನು ಹೇಳುತ್ತಾ ಒಟ್ಟಾರೆ ಬೆಲೆಯನ್ನು ಲಕ್ಷಗಳಲ್ಲಿ ಹೇಳುತ್ತಾರೆ. ಅವಾಕ್ಕಾದ ಸಂದರ್ಶಕಿ, ಇಷ್ಟೊಂದು ತುಟ್ಟಿಯಾದ ಬಟ್ಟೆಗಳನ್ನು ಧರಿಸಿರುವ ನೀವು ಏನು ಕೆಲಸ ಮಾಡಿಕೊಂಡಿದ್ದೀರಿ? ಎಂದು ಕೇಳುತ್ತಾಳೆ. ಆ ಹುಡುಗಿಯರು ಟೊಮ್ಯಾಟೋ ಬಿಝಿನೆಸ್! ಎನ್ನುತ್ತಾರೆ.
ಇದನ್ನೂ ಓದಿ : Viral Video: ಪಾನೀಪೂರಿ ಪ್ರಿಯರೇ, ಒಂದೇ ಸಲ ಈ ವಿಡಿಯೋ ನೋಡಿ ಸಾಕು
ಟೊಮ್ಯಾಟೋ ಷೋರೂಮ್ಗಳು, ಟೊಮ್ಯಾಟೋ ವಿಶ್ವವಿದ್ಯಾಲಯಗಳು, ಟೊಮ್ಯಾಟೋ ಸಂಶೋಧನಾ ಕೇಂದ್ರಗಳು, ಟೊಮ್ಯಾಟೋ ಮಾಲ್ಗಳು, ಟೊಮ್ಯಾಟೋ ದೇವಸ್ಥಾನಗಳು, ಟೊಮ್ಯಾಟೋ ಮ್ಯೂಸಿಯಮ್ಗಳು.. ಮುಂದಿನ ದಿನಗಳಲ್ಲಿ ಹೀಗೆ ಏನೇ ನೆಲ್ಲಾ ತಲೆಎತ್ತಿ, ಟೊಮ್ಯಾಟೋ ಬೆಲೆ ಅಷ್ಟೇ ಅಲ್ಲ, ಟೊಮ್ಯಾಟೋನೇ ಚಂದ್ರನ ಮೇಲೆ ಹೋಗಿ ಕುಳಿತುಕೊಳ್ಳಲೂಬಹುದು! ಅದಕ್ಕಾಗಿ ನಮ್ಮ ವಿಜ್ಞಾನಿಗಳು ಹೊಸ ಹೊಸ ಸಂಶೋಧನೆಯಲ್ಲಿ ತೊಡಗಿಕೊಂಡು ಯಾವ ಪುರಾಣದಲ್ಲಿ ಇದರ ಉಲ್ಲೇಖವಿದೆ ಎಂದು ಸಾರಿ ಹೇಳಬಹುದು.
ಇದನ್ನೂ ಓದಿ : Viral: 14 ಜನರಲ್ಲಿ ಯಾರನ್ನು ಮದುವೆಯಾಗಲಿ?; ನೆಟ್ಟಿಗರ ಸಹಾಯ ಕೋರಿದ ಯುವತಿ
ಒಟ್ಟಿನಲ್ಲಿ ಏರಿದ ಟೊಮ್ಯಾಟೋ ಇಳಿದು ತಟ್ಟೆಗೆ ಬರುವ ತನಕವೂ ಡಿಜಿಟಲ್ ಕ್ರಿಯೇಟರ್ಸ್ಗೆ ಕೂತಲ್ಲಿ ನಿಂತಲ್ಲಿ ಮಲಗಿದಲ್ಲಿ ಕನಸಿನಲ್ಲಿ ಟೊಮ್ಯಾಟೋ ಟೊಮ್ಯಾಟೋ ಟೊಮ್ಯಾಟೋ. ಅಂದಹಾಗೆ ನೀವು ಎಷ್ಟು ದಿನಗಳಾದವು ಅಡುಗೆಗೆ ಟೊಮ್ಯಾಟೋ ಹಾಕದೆ?
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 4:10 pm, Wed, 19 July 23