Viral Video : ಮೇಲ್ಮಧ್ಯಮ ವರ್ಗದ ಭಾರತೀಯ ಮದುವೆಗಳ ರೀತಿ ರಿವಾಜುಗಳು ಸಿನೆಮಾ ಮತ್ತು ಟೆಲಿವಿಷನ್ ಸಂಸ್ಕೃತಿಯಿಂದ ಪ್ರಭಾವಿತಗೊಂಡಿದ್ದನ್ನು ದಶಕಗಳಿಂದ ನೋಡುತ್ತಲೇ ಇದ್ದೀರಿ. ವಧುವೆಂದರೆ ನಾಚಿಕೊಂಡು ನವಿರಾದ ಭಾವಹೊತ್ತು ಮುಸುಕು ಹೊದ್ದುಕೊಂಡು ಕುಳಿತುಕೊಳ್ಳವ ಜಮಾನಾ ಇದಲ್ಲ. ಬಾಲಿವುಡ್ ಹೀರೋಯಿನ್ನಂತೆ ಮಂಟಪಕ್ಕೆ ಜಬರ್ದಸ್ತಾಗಿಯೇ ಆಕೆ ಪ್ರವೇಶ ನೀಡುತ್ತಾಳೆ. ಇದೀಗ ವೈರಲ್ ಆಗಿರುವ ಈ ವಿಡಿಯೋ ನೋಡಿ, ಕಾಲಾ ಚಷ್ಮಾ ಹಾಡಿಗೆ ವಧು ಹೆಜ್ಜೆ ಹಾಕಿದ್ದಾಳೆ.
ವಧುವಿನೊಂದಿಗೆ ಸ್ನೇಹಿತರು ಮತ್ತು ಕುಟುಂಬದವರೂ ಹೆಜ್ಜೆ ಹಾಕಿದ್ದಾರೆ. ವೈಶಾಲಿ ಯಾದವ್ ಎನ್ನುವವರು ಮೊದಲಿಗೆ ಈ ವಿಡಿಯೋ ಹಂಚಿಕೊಂಡಿದ್ದರು. ನಂತರ ನ್ಯೂ ಬ್ರೈಡೆಡ್ ಡೈರೀಸ್ ಪುಟದಲ್ಲಿ ಇದು ಮರುಹಂಚಿಕೆಯಾಗಿದೆ. ‘ಇದಕ್ಕಾಗಿ ನೀವು ಕಾಯಬೇಕು’ ಎಂಬ ಶೀರ್ಷಿಕೆ ಈ ವಿಡಿಯೋಗೆ ಇದೆ. ನೆಟ್ಟಿಗರು ಈ ಕ್ಯಾಪ್ಷನ್ಗಾಗಿ ಕಾಲೆಳೆದಿದ್ದಾರೆ. ಕೊನೇತನಕ ನೋಡಿದೆ ಇನ್ನು ಕಾಯುವುದೇನೂ ಇಲ್ಲ. ಕಾಯುವಂಥದ್ದೇನೂ ಇಲ್ಲ ಇದರಲ್ಲಿ ಎಂದಿದ್ದಾರೆ.
1.7 ಮಿಲಿಯನ್ ಜನರು ಈ ವಿಡಿಯೋ ನೋಡಿದ್ದಾರೆ. 1.5 ಲಕ್ಷಕ್ಕಿಂತಲೂ ಹೆಚ್ಚು ಜನರು ಇಷ್ಟಪಟ್ಟಿದ್ಧಾರೆ.
ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 5:43 pm, Thu, 24 November 22