Viral Video: ಮದುವೆ ದಿನವೇ ಕೋಪಗೊಂಡು ಏಣಿ ಸಹಾಯದಿಂದ ಮನೆಯ ಮೇಲ್ಛಾವಣಿ ಹತ್ತಿ ಕುಳಿತ ವಧು; ವಿಡಿಯೋ ಮಜವಾಗಿದೆ ನೀವೂ ನೋಡಿ

ಸಾಮಾಜಿಕ ಜಾಲತಾಣದಲ್ಲಿ ಅದೆಷ್ಟೋ ವಿಡಿಯೋಗಳು ವೈರಲ್ ಆಗುತ್ತವೆ. ಅವುಗಳಲ್ಲಿ ಕೆಲವು ಹೊಟ್ಟೆ ಹುಣ್ಣಾಗಿಸುವಷ್ಟು ನಗು ತರಿಸುತ್ತವೆ. ಸಣ್ಣ ಪುಟ್ಟ ಕಾರಣಕ್ಕೆಲ್ಲಾ ಅತಿಯಾಗಿ ಕೋಪಗೊಂಡ ಕೆಲವು ಸನ್ನಿವೇಶಗಳು ಮಜವೆನಿಸುತ್ತದೆ. ಇದೀಗ ವೈರಲ್ ಆದ ವಿಡಿಯೋ ಕೂಡಾ ಅಂಥದ್ದೇ!

Viral Video: ಮದುವೆ ದಿನವೇ ಕೋಪಗೊಂಡು ಏಣಿ ಸಹಾಯದಿಂದ ಮನೆಯ ಮೇಲ್ಛಾವಣಿ ಹತ್ತಿ ಕುಳಿತ ವಧು; ವಿಡಿಯೋ ಮಜವಾಗಿದೆ ನೀವೂ ನೋಡಿ
ಕೋಪಗೊಂಡ ವಧು ಮನೆಯ ಮೇಲ್ಛಾವಣಿ ಹತ್ತಿ ಕುಳಿತ ದೃಶ್ಯ
Edited By:

Updated on: Oct 01, 2021 | 12:25 PM

ಮದುವೆಯ ಬಳಿಕ ಮನೆಯ ಸೊಸೆಯನ್ನು ಆರತಿ ಬೆಳಗೆ ಒಳಗೆ ಕರೆಸಿಕೊಳ್ಳುವುದು ಪದ್ಧತಿ. ಮನೆಯ ನೆರೆ ಹೊರೆಯವರೆಲ್ಲಾ ಬಂದು ಖುಷಿಯಿಂದ ಸೊಸೆಗೆ ಆರತಿ ಬೆಳಗಿ ಮನೆ ಪ್ರವೇಶ ಮಾಡಿಸುತ್ತಾರೆ. ಅದ್ಯಾಕೋ ಗೊತ್ತಿಲ್ಲ, ಮದುವೆಯ ದಿನವೇ ವಧು ಭಯಂಕರ ಸಿಟ್ಟಿನಲ್ಲಿದ್ದಾಳೆ. ಕೋಪಗೊಂಡ ವಧು ಮನೆಯ ಎದುರಿದ್ದ ಏಣಿ ಸಹಾಯದಿಂದ ಮೇಲ್ಛಾವಣಿ ಹತ್ತಿ ಕುಳಿತುಕೊಂಡಿದ್ದಾಳೆ. ವಿಡಿಯೋ ವೈರಲ್ ಆಗಿದ್ದು, ನೆಟ್ಟಿಗರು ತಮಾಷೆ ಮಾಡಿ ನಕ್ಕಿದ್ದಾರೆ, ವಿಡಿಯೋ ನೋಡಿ ಮಜವಾಗಿದೆ.

ಸಾಮಾಜಿಕ ಜಾಲತಾಣದಲ್ಲಿ ಅದೆಷ್ಟೋ ವಿಡಿಯೋಗಳು ವೈರಲ್ ಆಗುತ್ತವೆ. ಅವುಗಳಲ್ಲಿ ಕೆಲವು ಹೊಟ್ಟೆ ಹುಣ್ಣಾಗಿಸುವಷ್ಟು ನಗು ತರಿಸುತ್ತವೆ. ಸಣ್ಣ ಪುಟ್ಟ ಕಾರಣಕ್ಕೆಲ್ಲಾ ಅತಿಯಾಗಿ ಕೋಪಗೊಂಡ ಕೆಲವು ಸನ್ನಿವೇಶಗಳು ಮಜವೆನಿಸುತ್ತದೆ. ಇದೀಗ ವೈರಲ್ ಆದ ವಿಡಿಯೋ ಕೂಡಾ ಅಂಥದ್ದೇ! ಕೋಪಗೊಂಡ ವಧುವಿಗೆ ಏನು ಮಾಡಬೇಕೆಂಬುದೇ ಗೊತ್ತಾಗುತ್ತಿಲ್ಲ. ಸಿಟ್ಟಿನ ಭರದಲ್ಲಿ ಪಕ್ಕದಲ್ಲಿದ್ದ ಏಣಿ ಸಹಾಯದಿಂದ ಮನೆಯ ಮೇಲ್ಛಾವಣಿ ಹತ್ತಿ ಕುಳಿತಿದ್ದಾಳೆ.

ಸೊಸೆಯನ್ನು ಮನೆಯ ಒಳಗೆ ಕರೆದುಕೊಳ್ಳಲು ಅತ್ತೆ ಸಿದ್ಧಳಾಗಿ ನಿಂತಿದ್ದಾಳೆ. ಆ ಸಂದರ್ಭದಲ್ಲಿ ವಧು ನೋಡಿದ್ರೆ ಮನೆಯ ಮೇಲೇರಿ ಕುಳಿತಿದ್ದಾಳೆ. ಓಡಿ ಬಂದ ವರ ಅವಳ ಮನವೊಲಿಸಲು ಪ್ರಯತ್ನಿಸಿದರೂ ಸಹ ಯಾವುದೇ ಪ್ರಯೋಜವಾಗುತ್ತಿಲ್ಲ. ಏಣಿಯ ಸಹಾಯದಿಂದ ಕೆಳಗಿಳಿಯಲು ಹೇಳುತ್ತಿದ್ದರೂ ಕಾಲಿನಿಂದ ಏಣಿಯನ್ನು ದೂರ ತಳ್ಳುತ್ತಿದ್ದಾಳೆ. ದೃಶ್ಯ ಇದೀಗ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ.

ಇದನ್ನೂ ಓದಿ:

Viral Video: ಶಾಪಿಂಗ್​ಗೆಂದು 10 ನಿಮಿಷ ಜೀಪ್ ನಿಲ್ಲಿಸಿ ಹೋದ ವ್ಯಕ್ತಿ; ಮರಳಿದಾಗ ಎದುರುಗೊಂಡಿದ್ದು ಜೇನುನೊಣಗಳು!

Viral Video: ಮದುವೆಯಲ್ಲಿ ಕುಣಿಯುತ್ತಾ ಕೆಳಗೆ ಬಿದ್ದ ವಧು, ವರ; ಸಾಮಾಜಿಕ ಜಾಲಾತಾಣದಲ್ಲಿ ವಿಡಿಯೋ ವೈರಲ್