Viral: ಕ್ಯಾಬ್ ಡ್ರೈವರ್​ ಆದ ಮೇಲೆ ಹೆಚ್ಚು ಗಳಿಸುತ್ತಿದ್ದೇನೆ ಎಂದ ಎಂಜಿನಿಯರ್​

|

Updated on: Aug 09, 2023 | 3:54 PM

Earning : ರಸ್ತೆಬದಿಯಲ್ಲಿರುವ ಚಹಾದ ಅಂಗಡಿಯವ, ಪಾನೀಪುರಿ ಅಂಗಡಿಯವ ತಿಂಗಳಿಗೆ ಲಕ್ಷಗಟ್ಟಲೆ ಗಳಿಸುತ್ತಾರೆ ಎನ್ನುತ್ತಿದ್ದಾರೆ ನೆಟ್ಟಿಗರು. ಹಾಗಿದ್ದರೆ ಇಂದು ಓದಿಗೂ ಗಳಿಕೆಗೂ ಸಂಬಂಧವೇ ಇಲ್ಲವೆಂದಾಯಿತಲ್ಲವೆ? ಕೌಶಲ, ಶ್ರಮ ಮತ್ತು ಬುದ್ಧಿವಂತಿಕೆ ಇದ್ದರೆ ಯಾರೂ ಎಷ್ಟು ಹಣವನ್ನಾದರೂ ಗಳಿಸಬಹುದೆ, ಏನಂತೀರಿ ನೀವು?

Viral: ಕ್ಯಾಬ್ ಡ್ರೈವರ್​ ಆದ ಮೇಲೆ ಹೆಚ್ಚು ಗಳಿಸುತ್ತಿದ್ದೇನೆ ಎಂದ ಎಂಜಿನಿಯರ್​
ಸಾಂದರ್ಭಿಕ ಚಿತ್ರ
Follow us on

Cab Driver : ನೀವು ಏನೇ ಓದಿ ಯಾವುದೇ ಕೆಲಸ ಸೇರಿದರೂ ನಿಮ್ಮ ಬುದ್ಧಿಮತ್ತೆ ಮತ್ತು ಚಾಣಾಕ್ಷತೆಯಿಂದ ನೀವು ಅಂದುಕೊಂಡಿದ್ದನ್ನು ಸಾಧಿಸಬಹುದು, ಗಳಿಸಬಹುದು. ಹಣ (Money) ಎನ್ನುವುದು ಎಲ್ಲರಿಗೂ ಬದುಕಿನ ಅಗತ್ಯ. ಹಾಗಾಗಿ ಹಣಗಳಿಕೆಯ ಸುತ್ತ ಎಲ್ಲರ ಚಿತ್ತ ಸಾಮಾನ್ಯ. ಇದೀಗ ವೈರಲ್ ಆಗಿರುವ ಈ ಪೋಸ್ಟ್​ ಗಮನಿಸಿ. ಮಹಿಳೆಯೊಬ್ಬರು ಕ್ಯಾಬ್​ ಡ್ರೈವರ್​ನೊಂದಿಗೆ ಮಾತಿಗಿಳಿದಾಗ ಹೊಮ್ಮಿದ ವಿಷಯ ಕೇಳಿ ಅಚ್ಚರಿಪಟ್ಟಿದ್ದಾರೆ. ಈ ವಿಷಯವನ್ನು ಅವರು X (ಟ್ವಿಟರ್​) ನಲ್ಲಿ ಹಂಚಿಕೊಂಡಿದ್ದು ವೈರಲ್ ಆಗುತ್ತಿದೆ.

 

‘ನಾನು ನಿನ್ನೆ ಕ್ಯಾಬ್‌ನಲ್ಲಿ ಪ್ರಯಾಣಿಸುತ್ತಿದ್ದಾಗ ಡ್ರೈವರ್​ನೊಂದಿಗೆ ಮಾತಿಗಿಳಿದೆ. ತಾನು ಅಮೆರಿಕದ ಮೂಲದ ಕ್ವಾಲ್‌ಕಾಮ್‌ನ (Qualcomm) ಕಾರ್ಪೊರೇಟ್ ಉದ್ಯೋಗಕ್ಕಿಂತ ಕ್ಯಾಬ್ ಡ್ರೈವಿಂಗ್‌ನಿಂದಲೇ ಹೆಚ್ಚಿನ ಆದಾಯವನ್ನು ಗಳಿಸುತ್ತಿದ್ದೇನೆ ಎಂದು ಹೇಳಿದ’ ಎಂದು ಶ್ವೇತಾ ಕುಕ್ರೇಜಾ ಟ್ವೀಟ್ ಮಾಡಿದ್ದಾರೆ. ನೆಟ್ಟಿಗರನೇಕರು ಆಸಕ್ತಿಕರವಾಗಿ ಈ ಚರ್ಚೆಯಲ್ಲಿ ಪಾಲ್ಗೊಂಡಿದ್ದಾರೆ.

ಇದನ್ನೂ ಓದಿ : Viral: ‘ಭಯ ಒಳ್ಳೆಯದು’ ; ಸುನೀಲ್​ ಶೆಟ್ಟಿ ಲಿಂಕ್ಡ್​ಇನ್​ ಪೋಸ್ಟ್​ ವೈರಲ್​

ಈ ಪೋಸ್ಟ್​ ಅನ್ನು ಆ. 6ರಂದು ಹಂಚಿಕೊಳ್ಳಲಾಗಿದೆ. ಈತನಕ ಸುಮಾರು 7.8 ಲಕ್ಷ ಜನರು ಇದನ್ನು ನೋಡಿದ್ದಾರೆ. ಸುಮಾರು 7,000 ಜನರು ಲೈಕ್ ಮಾಡಿದ್ದಾರೆ. ಅನೇಕರು ಇದಕ್ಕೆ ಒಪ್ಪಿಗೆ ಸೂಚಿಸಿದರೆ ಈ ಪೋಸ್ಟ್​ನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಬೀದಿಬದಿಯ ಚಾಯ್​ವಾಲಾನಿಗೆ ಮಾತನಾಡಿಸಿ, ಅವನು ಕ್ಯಾಬ್​ ಡ್ರೈವರ್​ಗಿಂತ ಹೆಚ್ಚು ಸಂಪಾದಿಸುತ್ತಿರಬಹುದು ಎಂದಿದ್ದಾರೆ ಟ್ವಿಟರ್ ಖಾತೆದಾರರೊಬ್ಬರು.

ಇದನ್ನೂ ಓದಿ : Viral Video: ಬಿಸ್ಮಿಲ್ಲಾಖಾನ್​​ರನ್ನು ನೆನಪಿಸಿದ ಸರ್ದಾರ್ಜೀಯ ಮಿಮಿಕ್ರಿ; ಶಭಾಷ್​ ಎಂದ ನೆಟ್ಟಿಗರು

ಯಾಕೋ ನನಗಿದು ಅಸಾಧ್ಯವೆಂದು ಅನ್ನಿಸುತ್ತಿದೆ ಎಂದಿದ್ದಾರೆ ಇನ್ನೊಬ್ಬರು. ಅವನು ಒಂದು ಸಂಖ್ಯೆಯನ್ನು ಹೆಚ್ಚಿಗೆ ಹೇಳಿದ್ದಾನೆಯೇ? ಪಾರ್ಟ್​ಟೈಮ್​ ಡ್ರೈವರ್ ಮತ್ತು ಫುಲ್​ಟೈಮ್ ಎಂಜಿನಿಯರ್ ಆಗಿದ್ದಲ್ಲಿ ಇದು ಲಾಭದಾಯಕ ಎಂದಿದ್ದಾರೆ ಮತ್ತೊಬ್ಬರು. ನೀವು ತಪ್ಪಾಗಿ ಕೇಳಿಸಿಕೊಂಡಿರಬಹುದು. ಅವನು ಎಂಜಿನಿಯರ್​ ಕೆಲಸದೊಂದಿಗೆ ಕ್ಯಾಬ್​ ಡ್ರೈವಿಂಗ್​ ಕೂಡ ಮಾಡುತ್ತಿರಬಹುದು ಎಂದಿದ್ಧಾರೆ ಇನ್ನೂ ಒಬ್ಬರು.

ಇದನ್ನೂಓದಿ : Viral Video: ನ್ಯೂಯಾರ್ಕ್​; ಮೆಟ್ರೋದಲ್ಲಿ ಕುಟುಂಬವೊಂದರ ಮೇಲೆ ದಾಳಿ ಮಾಡಿದ ಹದಿಹರೆಯದ ಹುಡುಗಿಯರು

ಖಂಡಿತ ಇದು ನಿಜ, ಈ ಪೋಸ್ಟ್​ ಅನ್ನು ನಾನು ಒಪ್ಪುತ್ತೇನೆ ಎಂದಿದ್ದಾರೆ ಮತ್ತೊಬ್ಬರು. ನಮ್ಮ ಏರಿಯಾದಲ್ಲಿರುವ ಪಾನೀಪುರಿ ಅಂಗಡಿಯವ ಓದಿದ್ದು ಕೇವಲ 6ನೇ ತರಗತಿ. ಆದರೆ ತಿಂಗಳಿಗೆ 3ರಿಂದ 4 ಲಕ್ಷ ಹಣವನ್ನು ಆತ ಗಳಿಸುತ್ತಾನೆ. ಸದ್ಯದಲ್ಲಿಯೇ ಇನ್ನೊಂದು ಏರಿಯಾದಲ್ಲಿ ಅಂಗಡಿ ತೆರೆಯುವವನಿದ್ದಾನೆ ಎಂದಿದ್ದಾರೆ ಮಗದೊಬ್ಬರು.

ಓದಿಗೂ ಗಳಿಕೆಗೂ ಸಂಬಂಧವೇ ಇಲ್ಲ ತಾನೆ? ಶ್ರಮ ಮತ್ತು ಬುದ್ಧಿವಂತಿಕೆ ಇದ್ದಲ್ಲಿ ಎಷ್ಟು ಬೇಕಾದರೂ ಹಣ ಗಳಿಸಬಹುದು. ನೀವೇನು ಹೇಳುತ್ತೀರಿ ಈ ವಿಷಯವಾಗಿ?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 3:54 pm, Wed, 9 August 23