Viral Video: ಎಲೆಕ್ಟ್ರಿಕ್ ಕೆಟಲ್​​ನಲ್ಲಿ ಚಿಕನ್ ಕರಿ ಮಾಡಿ ಸವಿದ ಹಾಸ್ಟೆಲ್ ಗರ್ಲ್ಸ್

| Updated By: ಅಕ್ಷಯ್​ ಪಲ್ಲಮಜಲು​​

Updated on: Feb 10, 2024 | 6:19 PM

ಹಾಸ್ಟೆಲ್ ಗಳಲ್ಲಿರುವ ವಿದ್ಯಾರ್ಥಿಗಳ ಬಹುದೊಡ್ಡ ಸಮಸ್ಯೆಯೆಂದರೆ ಅಲ್ಲಿಯ ಊಟ ಚೆನ್ನಾಗಿಲ್ಲ ಎನ್ನುವುದು. ಇದೇ ಕಾರಣಕ್ಕಾಗಿ ಏನಾದರೊಂದು ಕಸರತ್ತು ಮಾಡಿ, ಹಾಸ್ಟೆಲ್ ಕೋಣೆಗಳಲ್ಲಿ ಆ ವಿದ್ಯಾರ್ಥಿಗಳು ಸ್ನೇಹಿತರ ಜೊತೆ ಸೇರಿ  ಅಡುಗೆ ಮಾಡಿ ತಿನ್ನುತ್ತಿರುತ್ತಾರೆ. ಹಾಸ್ಟೆಲ್ ಜೀವನದ ಇಂತಹ ಹಲವು ಸ್ವಾರಸ್ಯಕರ ಕಥೆಗಳನ್ನು ನೀವು ಕೂಡಾ ಕೇಳಿರುತ್ತೀರಿ ಅಲ್ವಾ. ಇದೀಗ ಅದೇ ರೀತಿಯ ವಿಡಿಯೋವೊಂದು ಹರಿದಾಡುತ್ತಿದ್ದು, ಹಾಸ್ಟೆಲ್ ನಲ್ಲಿರುವ ವಿದ್ಯಾರ್ಥಿನಿಯರ ಗುಂಪೊಂದು  ನೀರು ಬಿಸಿ ಮಾಡುವ ಎಲೆಕ್ಟ್ರಿಕ್  ಕೆಟಲ್ ಅಲ್ಲಿ ಚಿಕನ್ ಕರಿ ಮಾಡಿ ಸವಿದಿದ್ದಾರೆ. 

Viral Video: ಎಲೆಕ್ಟ್ರಿಕ್ ಕೆಟಲ್​​ನಲ್ಲಿ ಚಿಕನ್ ಕರಿ ಮಾಡಿ ಸವಿದ ಹಾಸ್ಟೆಲ್ ಗರ್ಲ್ಸ್
ವೈರಲ್​​ ವಿಡಿಯೋ
Follow us on

ಹಲವು ವಿದ್ಯಾರ್ಥಿಗಳು ಯಾವುದೋ ಊರಿನಿಂದ ನಗರಗಳಿಗೆ ಬಂದು  ಉತ್ತಮ ಜೀವನವನ್ನು ರೂಪಿಸಿಕೊಳ್ಳುವ ಹಂಬಲದಿಂದ ಪ್ರತಿಷ್ಠಿತ ಕಾಲೇಜು ಸೇರಿ ಹಾಸ್ಟೆಲ್ ನಲ್ಲಿಯೇ ಉಳಿದುಕೊಳ್ಳುತ್ತಾರೆ.  ಆದ್ರೆ ಈ ಹಾಸ್ಟೆಲ್ ಜೀವನ ಮನೆಯ ಜೀವನಕ್ಕಿಂತ ತುಂಬಾನೇ ವಿಭಿನ್ನವಾಗಿರುತ್ತದೆ. ಹಾಸ್ಟೆಲ್ ಗಳಲ್ಲಿ ಮನೆಯಲ್ಲಿ  ಸಿಗುವ ರೀತಿಯಲ್ಲಿ ಸ್ವಾದಿಷ್ಟಕರವಾದ ಅಮ್ಮ ಮಾಡಿದ ಅಡುಗೆಗಳು ಸಿಗುವುದಿಲ್ಲ. ಹೀಗೆ ಬಹುತೇಕ  ಎಲ್ಲಾ ಹಾಸ್ಟೆಲ್ ವಿದ್ಯಾರ್ಥಿಗಳ ಬಹುದೊಡ್ಡ ಸಮಸ್ಯೆಯೆಂದರೆ ಅಲ್ಲಿಯ ಊಟ ಚೆನ್ನಾಗಿಲ್ಲ ಎನ್ನುವುದು. ಇದಕ್ಕಾಗಿ ಕೆಲವೊಂದು ಹಾಸ್ಟೆಲ್ ವಿದ್ಯಾರ್ಥಿಗಳು ಸ್ನೇಹಿತರ ಜೊತೆಯಾಗಿ ಏನಾದರೊಂದು ಸರ್ಕಸ್ ಮಾಡಿ, ಹಾಸ್ಟೆಲ್ ಕೋಣೆಗಳಲ್ಲಿ ಮ್ಯಾಗಿ, ಆಮ್ಲೆಟ್ ಇತ್ಯಾದಿ ಅಡುಗೆಗಳನ್ನು ಮಾಡಿ ತಿನ್ನುತ್ತಿರುತ್ತಾರೆ. ಹಾಸ್ಟೆಲ್ ವಿದ್ಯಾರ್ಥಿಗಳ ಇಂತಹ ಹಲವಾರು ಸ್ವಾರಸ್ಯಕರ ಕಥೆಗಳನ್ನು ನೀವು ಕೂಡಾ ಕೇಳಿರುತ್ತೀರಿ ಅಲ್ವಾ. ಅದೇ ರೀತಿ ಇಲ್ಲೊಂದು ಕಡೆ ಹಾಸ್ಟೆಲ್ ಹುಡುಗೀರು ಹಾಸ್ಟೆಲ್ ಜೀವನದ ಬಗ್ಗೆ  ವಿಡಿಯೋವೊಂದನ್ನು ಹರಿಬಿಟ್ಟಿದ್ದು, ಇವರುಗಳು ನೀರು ಬಿಸಿ ಮಾಡುವಂತಹ ಎಲೆಕ್ಟ್ರಿಕ್ ಕೆಟಲ್ ಅಲ್ಲಿ ಚಿಕನ್ ಕರಿ ತಯಾರಿಸಿರುವ ಪರಿಯನ್ನು ಕಂಡು ನೋಡುಗರು ಫುಲ್ ಶಾಕ್ ಆಗಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ  ಹಾಸ್ಟೆಲ್ ಹುಡುಗೀರು  ಸ್ವಾದಿಷ್ಟಕರವಾದ ನಾನ್ ವೆಜ್ ಊಟವನ್ನು ಸವಿಯಬೇಕೆಂದು  ನೀರು ಬಿಸಿ ಮಾಡುವಂತಹ ಎಲೆಕ್ಟ್ರಿಕ್ ಕೆಟಲ್ ಅಲ್ಲಿ ಚಿಕನ್ ಕರಿ ತಯಾರಿಸುವಂತಹ ದೃಶ್ಯವನ್ನು ಕಾಣಬಹುದು. ಈ ವಿಡಿಯೋವನ್ನು ತನುಶ್ರೀ (@tanushree_khwrkpm) ಎಂಬವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದು, “ಹಾಸ್ಟೆಲ್ ಲೈಫ್” ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ.

ವೈರಲ್ ವಿಡಿಯೋ ಇಲ್ಲಿದೆ:

ವೈರಲ್ ವಿಡಿಯೋದಲ್ಲಿ ಹಾಸ್ಟೆಲ್ ಹುಡುಗೀರೆಲ್ಲಾ ಜೊತೆಯಾಗಿ ಸೇರಿ ತರಕಾರಿಗಳನ್ನೆಲ್ಲಾ ಕತ್ತರಿಸಿಟ್ಟುಕೊಂಡು, ನಂತರ ನೀರು ಬಿಸಿ ಮಾಡುವಂತಹ ಎಲೆಕ್ಟ್ರಿಕ್ ಕೆಟಲ್ ಗೆ ಚಿಕನ್, ಕತ್ತರಿಸಿಟ್ಟಂತಹ ಈರುಳ್ಳಿ, ಇತರೆ ತರಕಾರಿ, ಮಸಾಲೆ ಪದಾರ್ಥಗಳು ಮತ್ತು ನೀರನ್ನು ಹಾಕಿ ಚೆನ್ನಾಗಿ ಬೇಯಿಸಿಕೊಂಡು ನಂತರ ಜೊತೆಯಾಗಿ ಕೂತು ಚಿಕನ್ ಕರಿ ಸವಿಯುವಂತಹ ದೃಶ್ಯವನ್ನು ಕಾಣಬಹುದು.

ಇದನ್ನೂ ಓದಿ: ಈ ಕಣ್ಣಲ್ಲಿ ಇನ್ನು ಏನೇನ್ ನೋಡ್ಬೇಕೋ; ಆಲೂ, ಪನೀರ್ ಪರೋಟ ಆಯ್ತು, ಈಗ ಚಾಕೊಲೇಟ್ ಪರೋಟ

ಜನವರಿ 05 ರಂದು ಹಂಚಿಕೊಳ್ಳಲಾದ ಈ ವಿಡಿಯೋ  11.2 ಮಿಲಿಯನ್ ವೀಕ್ಷಣೆಗಳನ್ನು  ಮತ್ತು ಮೂರು ಲಕ್ಷಕ್ಕೂ ಅಧಿಕ ಲೈಕ್ಸ್ಗಳನ್ನು ಪಡೆದುಕೊಂಡಿದೆ.  ಹಾಗೂ ತರಹೇವಾರಿ ಕಮೆಂಟ್ಸ್ಗಳೂ ಹರಿದು ಬಂದಿವೆ. ಒಬ್ಬ ಬಳಕೆದಾರರು ʼಇಂತಹ ಕೌಶಲ್ಯವನ್ನು ನಾನು ಇದೇ ಮೊದಲ ಬಾರಿಗೆ ನೋಡಿದ್ದುʼ ಎಂದು ಕಮೆಂಟ್ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರರು ʼನಾನಂತೂ ನನ್ನ ಹಾಸ್ಟೆಲ್ ಜೀವನದಲ್ಲಿ ಇಂತಹ ಕಸರತ್ತು ಮಾಡಿಲ್ಲʼ ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರರು ʼಎಲೆಕ್ಟ್ರಿಕ್ ಕೆಟಲ್ ಖರೀದಿಸುವ ಬದಲು ಅವರಿಗೆ ಎಲೆಕ್ಟ್ರಿಕ್ ಕುಕ್ಕರ್ ಖರೀದಿಸಬಹುದಿತ್ತುʼ ಅಂತ ಹೇಳಿದ್ದಾರೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ