Viral Video: ಈ ಕಣ್ಣಲ್ಲಿ ಇನ್ನು ಏನೇನ್ ನೋಡ್ಬೇಕೋ; ಆಲೂ, ಪನೀರ್ ಪರೋಟ ಆಯ್ತು, ಈಗ ಚಾಕೊಲೇಟ್ ಪರೋಟ
ನೀವು ಆಹಾರದ ಬಗ್ಗೆ ಒಲವು ಹೊಂದಿದ್ದರೆ, ಈ ವಿಡಿಯೋ ನಿಮಗಾಗಿ… ತಿಂಡಿ ತಿನಿಸುಗಳಲ್ಲಿ ಚಿತ್ರ ವಿಚಿತ್ರ ಪ್ರಯೋಗಗಳು ನಡೆಯುತ್ತಲೇ ಇರುತ್ತವೆ. ಐಸ್ ಕ್ರೀಮ್ ದೋಸೆ, ಗುಲಾಬ್ ಜಾಮೂನ್ ದೋಸೆ ಹೀಗೆ ಹಲವಾರು ವಿಯರ್ಡ್ ಕಾಂಬಿನೇಷನ್ ಫುಡ್ಗಳ ಕುರಿತ ವಿಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ಆಗಾಗ್ಗೆ ಹರಿದಾಡುತ್ತಿರುತ್ತವೆ. ಸದ್ಯ ಅಂತಹದ್ದೇ ವಿಡಿಯೋವೊಂದು ವೈರಲ್ ಆಗಿದ್ದು, ಸ್ಟ್ರೀಟ್ ಫುಡ್ ವ್ಯಾಪಾರಿಯೊಬ್ಬರು ಆಲೂ, ಪನೀರ್ ಪರಾಠ ಎಲ್ಲರೂ ತಯಾರಿಸ್ತಾರೆ ನಾವೇನಾದ್ರೂ ಡಿಫರೆಂಟ್ ಆಗಿರುವ ಪರೋಟ ರೆಸಿಪಿ ತಯಾರಿಸೋಣ ಅಂತ ಚಾಕೊಲೇಟ್ ಪರಾಠವನ್ನು ತಯಾರಿಸಿದ್ದಾರೆ.
ಬಹುತೇಕ ಹೆಚ್ಚಿನವರಿಗೆ ಈ ಪರೋಟ ಅಂದ್ರೆ ತುಂಬಾನೇ ಇಷ್ಟ. ಪರೋಟವನ್ನು ನಾನಾ ಬಗೆಯಲ್ಲಿ ತಯಾರಿಸಲಾಗುತ್ತದೆ. ಹಿಟ್ಟಿಗೆ ಬೇರೆ ಬೇರೆ ತರಕಾರಿಯ ಹೂರಣ ಬೆರೆಸಿ, ರುಚಿಯಾದ ಪರೋಟ ಮಾಡಲಾಗುತ್ತದೆ. ಆಲೂ ಪರೋಟ, ಪನೀರ್ ಪರೋಟ, ಚೀಸ್ ಪರೋಟ, ಗೋಬಿ ಪರೋಟ, ಪಾಲಕ್ ಪನೀರ್ ಪರೋಟ ಹೀಗೆ ನಾನಾ ಬಗೆಯ ಪರೋಟವನ್ನು ನಾವು ಬೆಳಗಿನ ಉಪಹಾರಕ್ಕೆ ಹಾಗೂ ಮಧ್ಯಾಹ್ನದ ಊಟಕ್ಕೆ ಸೇವನೆ ಮಾಡ್ತೇವೆ. ನೀವು ಇಂತಹ ವಿವಿಧ ಬಗೆಯ ಪರೋಟಗಳನ್ನು ಸವಿದಿರುತ್ತೀರಿ ಅಲ್ವಾ. ಆದ್ರೆ ನೀವು ಎಂದಾದ್ರೂ ಚಾಕೊಲೇಟ್ ಪರೋಟವನ್ನು ಸವಿದಿದ್ದೀರಾ? ಅರೇ ಏನಿದು ಚಾಕೊಲೇಟ್ ನಿಂದ ಮಿಲ್ಕ್ ಶೇಕ್, ಐಸ್ ಕ್ರೀಮ್ ತಯಾರಿಸ್ತಾರೆ, ಅದನ್ನು ಬಿಟ್ಟು ಇವನ್ಯಾರಪ್ಪಾ ಪರೋಟವನ್ನು ತಯಾರಿಸಿದ್ದಾನೆ ಅಂತ ಯೋಚ್ನೆ ಮಾಡ್ತಿದ್ದೀರಾ? ಹಾಗಿದ್ರೆ ಈ ವೈರಲ್ ವಿಡಿಯೋವನ್ನು ಒಮ್ಮೆ ನೋಡಿ.
ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ವೈರಲ್ ಆಗುತ್ತಿರುವ ಚಾಕೊಲೇಟ್ ಪರೋಟ ರೆಸಿಪಿಯನ್ನು ಕಂಡ್ರೆ ಈ ಜನ್ಮದಲ್ಲಿ ಪರೋಟವನ್ನು ತಿನ್ನೋಲ್ಲ ಅಂತ ನೀವು ಹೇಳ್ತೀರಿ ನೋಡಿ. ಈ ವೈರಲ್ ವಿಡಿಯೋವನ್ನು @yumyumindia ಎಂಬ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, “ಚಾಕೊಲೇಟ್ ಪರೋಟ, ಯಾರು ಇದನ್ನು ತಿನ್ನುತ್ತೀರಿ?” ಎಂಬ ಶೀರ್ಷಿಕೆಯನ್ನು ಬರೆದುಕೊಳ್ಳಲಾಗಿದೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ:
View this post on Instagram
ವೈರಲ್ ವಿಡಿಯೋದಲ್ಲಿ ಸ್ಟ್ರೀಟ್ ಫುಡ್ ವ್ಯಾಪಾರಿಯೊಬ್ಬರು ಮೊದಲಿಗೆ ಎರಡು ಬಗೆಯ ಚಾಕೊಲೇಟ್ ಅನ್ನು ತೆಗೆದುಕೊಂಡು ಅದಕ್ಕೆ ಸ್ವಲ್ಪ ದ್ರಾಕ್ಷಿ ಮತ್ತು ಗೋಡಂಬಿಯನ್ನು ಮಿಶ್ರಣ ಮಾಡಿ ಎಲ್ಲವನ್ನು ಚೆನ್ನಾಗಿ ಮಿಶ್ರಣ ಮಾಡಿ ಅದನ್ನು ಬದಿಗಿಟ್ಟು, ನಂತರ ಪರೋಟ ಹಿಟ್ಟನ್ನು ಲಟ್ಟಣಿಸಿ ಅದರ ಮೇಲೆ ಮೊದಲೇ ತಯಾರಿಸಿದಂತಹ ಚಾಕೊಲೇಟ್ ಹೂರಣವನ್ನು ತುಂಬಿಸಿ ಬಳಿಕ ಅದನ್ನು ಹಿಟ್ಟಿನಿಂದ ಕವರ್ ಮಾಡಿ ಮತ್ತೆ ಲಟ್ಟಿಸುತ್ತಾರೆ. ನಂತರ ಅವರು ಅದನ್ನು ಒಲೆಯ ಮೇಲಿರುವ ತವಾಗೆ ಹಾಕಿ ಚೆನ್ನಾಗಿ ಬೇಯಿಸಿಕೊಂಡು, ಕೊನೆಯಲ್ಲಿ ಪರೋಟವನ್ನು ನಾಲ್ಕು ಭಾಗಗಳನ್ನಾಗಿ ಕತ್ತರಿಸಿ, ಒಂದು ಪ್ಲೇಟ್ ಗೆ ವರ್ಗಾಯಿಸಿ ಗ್ರಾಹಕರಿಗೆ ನೀಡುವ ದೃಶ್ಯವನ್ನು ಕಾಣಬಹುದು.
ಇದನ್ನೂ ಓದಿ: ಹೋಟೆಲ್ ಆವರಣದಲ್ಲಿ ರಾಜರೋಷವಾಗಿ ಅಡ್ಡಾಡಿದ ಸಿಂಹರಾಜ, ಎದೆ ಝಲ್ ಎನಿಸೋ ವಿಡಿಯೋ
ಕೆಲ ಸಮಯದ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ ಒಂದು ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಮೂರು ಸಾವಿಕ್ಕೂ ಹೆಚ್ಚು ಲೈಕ್ಸ್ ಗಳನ್ನು ಪಡೆದುಕೊಂಡಿದೆ. ಹಾಗೂ ತರಹೇವಾರಿ ಕಮೆಂಟ್ಸ್ಗಳೂ ಹರಿದು ಬಂದಿವೆ. ಒಬ್ಬ ಬಳಕೆದಾರರು ʼದಯವಿಟ್ಟು ನಾವು ತಿನ್ನೋ ಆಹಾರವನ್ನು ಹಾಳು ಮಾಡಬೇಡಿʼ ಎಂದು ಗರಂ ಆಗಿದ್ದಾರೆ. ಇನ್ನೊಬ್ಬ ಬಳಕೆದಾರರು ʼನಾನು ಈ ರೆಸಿಪಿಯನ್ನು ಟ್ರೈ ಮಾಡಿದೆ, ಆದ್ರೆ ಇದ್ರ ರುಚಿ ಒಂದು ಚೂರು ಚೆನ್ನಾಗಿಲ್ಲ. ಯಾರು ಕೂಡಾ ಇದನ್ನು ಟ್ರೈ ಮಾಡಬೇಡಿʼ ಎಂತ ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರರು ʼದಯವಿಟ್ಟು ತಿನ್ನೋ ಆಹಾರದಲ್ಲಿ ಇಂತಹ ಪ್ರಯೋಗಗಳನ್ನು ಮಾಡಬೇಡಿʼ ಎಂಬ ಕಮೆಂಟ್ ಬರೆದುಕೊಂಡಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ