Viral Video: ಬಟರ್ ಫ್ಲೈ… ಬಟರ್ ಫ್ಲೈ  ಹಾಡಿಗೆ  ಸಖತ್ ಸ್ಟೆಪ್ ಹಾಕಿದ ಹಿರಿ ಜೀವಗಳು

ಇದೀಗ ಎಲ್ಲಿ ನೋಡಿದ್ರೂ ಬಟರ್ ಫ್ಲೈ…  ಬಟರ್ ಫ್ಲೈ… ಹಾಡಿನದ್ದೇ ಹವಾ. ಚಿಕ್ಕ ಮಕ್ಕಳಿಂದ ಹಿಡಿದು ಯುವಕರವೆರೆಗೂ ಬಹುತೇಕ ಎಲ್ಲರೂ ಈ ಹಾಡಿಗೆ ರೀಲ್ಸ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹರಿಬಿಡುತ್ತಿದ್ದಾರೆ.  ವಿಶೇಷವಾಗಿ ಈ ಹಾಡಿನ ರೀಲ್ಸ್ ವಿಡಿಯೋಗಳಂತೂ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ. ಇದೀಗ ಅಂತಹದ್ದೇ ಸುಂದರವಾದ  ವಿಡಿಯೋವೊಂದು ವೈರಲ್ ಆಗಿದ್ದು, ʼಬಟರ್ ಫ್ಲೈʼ ಹಾಡಿಗೆ ಹಿರಿ ಜೀವಗಳು ಮುದ್ದಾಗಿ ನೃತ್ಯ ಮಾಡಿರುವ ಪರಿಯನ್ನು ಕಂಡು ನೆಟ್ಟಿಗರಂತೂ ಫುಲ್ ಫಿದಾ ಆಗಿದ್ದಾರೆ. 

Viral Video: ಬಟರ್ ಫ್ಲೈ... ಬಟರ್ ಫ್ಲೈ  ಹಾಡಿಗೆ  ಸಖತ್ ಸ್ಟೆಪ್ ಹಾಕಿದ ಹಿರಿ ಜೀವಗಳು
ವೈರಲ್​​​ ವಿಡಿಯೋ
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on: Feb 09, 2024 | 6:24 PM

ಸಾಮಾಜಿಕ ಜಾಲತಾಣದಲ್ಲಿ  ಹರಿದಾಡುವ ಹಿರಿ ಜೀವಗಳ ಕುರಿತ ಕೆಲವೊಂದು ವಿಡಿಯೋಗಳನ್ನು ನೋಡಿದಾಗ ವಯಸ್ಸು ದೇಹಕ್ಕೆ ಆಗುವುದೇ ಹೊರತು ಮನಸ್ಸಿಗಲ್ಲ, ಜೀವನೋತ್ಸಾಹಕ್ಕಲ್ಲ  ಎಂಬ ಮಾತು ಅಕ್ಷರಶಃ ಸತ್ಯ ಅಂತ ಅನಿಸುತ್ತೆ ಅಲ್ವಾ. ಇಳಿ ವಯಸ್ಸಿನಲ್ಲಿಯೂ ತಮ್ಮ ಜೀವನೋತ್ಸಾಹದಿಂದ ಗಮನ ಸೆಳೆದಂತಹ ಅದೆಷ್ಟೋ ವೃದ್ಧರಿದ್ದಾರೆ.  ಹೀಗೆ ಇಳಿ ವಯಸ್ಸಿನಲ್ಲೂ ಅದ್ಭುತವಾಗಿ ನೃತ್ಯ ಮಾಡುವ, ಯುವಕರಂತೆ ಪ್ರತಿಯೊಂದು ಚಟುವಟಿಕೆಯಲ್ಲೂ ಬಹಳ ಉತ್ಸಾಹದಿಂದ ತೊಡಗಿಕೊಳ್ಳುವ ಹಿರಿ ಜೀವಗಳ ಕುರಿತ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಆಗಾಗ್ಗೆ ವೈರಲ್ ಆಗುತ್ತಲೇ ಇರುತ್ತವೆ.  ಸದ್ಯ ಅಂತಹದ್ದೇ ಮುದ್ದಾದ ವಿಡಿಯೋವೊಂದು ಹರಿದಾಡುತ್ತಿದ್ದು, ಇದೀಗ ಇನ್ಸ್ಟಾಗ್ರಾಮ್ ರೀಲ್ಸ್ ಅಲ್ಲಿ ಬಹಳನೇ ಟ್ರೆಂಡಿಂಗ್ ನಲ್ಲಿರುವ “ಬಟರ್ ಫ್ಲೈ, ಬಟರ್ ಫ್ಲೈ ವೇರ್ ಆರ್ ಯೂ” ಎಂಬ ಹಾಡಿಗೆ ವೃದ್ಧರ ತಂಡವೊಂದು ಸಖತ್ ಆಗಿ ನೃತ್ಯ ಮಾಡಿದೆ. ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಅಗಿದ್ದು,  ಏಜ್ ಇಸ್ ಎ ಜಸ್ಟ್ ನಂಬರ್  ಅಂತ  ನೆಟ್ಟಿಗರು ಹೇಳುತ್ತಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ವೃದ್ಧಾಶ್ರಮದಲ್ಲಿನ ಹಿರಿ ಜೀವಗಳು ಬಟರ್ ಫ್ಲೈ ಹಾಡಿಗೆ ಪುಟ್ಟ ಮಕ್ಕಳಂತೆ ಮುದ್ದಾಗಿ ನೃತ್ಯ ಮಾಡುತ್ತಿರುವ ದೃಶ್ಯವನ್ನು ಕಾಣಬಹುದು.  ಕೇರಳದ ಅಡೈಕ್ಕಲಂ ವೃದ್ಧಾಶ್ರಮದ (@adaikkalam_free_oldege_home)  ಅಧೀಕೃತ ಇನ್ಸ್ಟಾಗ್ರಾಮ್ ಪೇಜ್ ಅಲ್ಲಿ ಈ  ವೈರಲ್ ವಿಡಿಯೋವನ್ನು ಹಂಚಿಕೊಳ್ಳಲಾಗಿದ್ದು,  ಬಟರ್ಫ್ಲೈ ಸಾಂಗ್”ಎಂಬ ಶೀರ್ಷಿಕೆಯನ್ನು ಬರೆದುಕೊಳ್ಳಲಾಗಿದೆ.

ವೈರಲ್​​ ವಿಡಿಯೋ ಇಲ್ಲಿದೆ ನೋಡಿ:

ವೈರಲ್ ವಿಡಿಯೋದಲ್ಲಿ ಅಡೈಕ್ಕಲಂ ವೃದ್ಧಾಶ್ರಮದಲ್ಲಿನ ಹಿರಿ ಜೀವಗಳು ಇನ್ಸ್ಟಾಗ್ರಾಮ್ ಅಲ್ಲಿ ಬಹಳನೇ ಟ್ರೆಂಡಿಂಗ್ ನಲ್ಲಿರುವ ʼಬಟರ್ ಫ್ಲೈ, ಬಟರ್ ಫ್ಲೈ…. ವೇರ್ ಆರ್ ಗೋಯಿಂಗ್ʼ ಎಂಬ ಹಾಡಿಗೆ ಪುಟಾಣಿ ಮಕ್ಕಳಂತೆ  ತಮ್ಮದೇ ಶೈಲಿಯಲ್ಲಿ ಬಹಳ ಮುದ್ದು ಮುದ್ದಾಗಿ ನೃತ್ಯ ಮಾಡುತ್ತಿರುವ ಸುಂದರ ದೃಶ್ಯವನ್ನು ಕಾಣಬಹುದು.

ಇದನ್ನೂ ಓದಿ:  ಹೇರ್ ಸ್ಟೈಲ್ ಹೆಣ್ಮಕ್ಕಳಿಗೆ ಒಂದು ವರ, ಇದು ನೋಡಿ ಹೊಸ ಕುದುರೆ ಸ್ಟೈಲ್

ನಾಲ್ಕು ದಿನಗಳ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ 17.4 ಮಿಲಿಯನ್ ವೀಕ್ಷಣೆಗಳನ್ನು ಹಾಗೂ 1.6 ಮಿಲಿಯನ್ ಲೈಕ್ಸ್ಗಳನ್ನು ಪಡೆದುಕೊಂಡಿದೆ. ನೆಟ್ಟಿಗರು ಕಮೆಂಟ್ಸ್ ಮೂಲಕ ಹಿರಿ ಜೀವಗಳ ಮುದ್ದಾದ ನೃತ್ಯ ಪ್ರದರ್ಶನಕ್ಕೆ ಮೆಚ್ಚುಗೆಯನ್ನು ಸೂಚಿಸಿದ್ದಾರೆ.  ಒಬ್ಬ ಬಳಕೆದಾರರು ʼಏಜ್ ಇಸ್ ಎ ಜಸ್ಟ್ ನಂಬರ್ ಅನ್ನೋದಕ್ಕೆ ಈ ವಿಡಿಯೋ ಸೂಕ್ತ ಉದಾಹರಣೆʼ ಎಂಬ ಕಮೆಂಟ್ ಬರೆದುಕೊಂಡಿದ್ದಾರೆ. ಇನ್ನೊಬ್ಬ ಬಳಕೆದಾರರು ʼಬಹಳ ಸುಂದರವಾದ ಚಿಟ್ಟೆಗಳುʼ ಎಂಬ ಕಮೆಂಟ್ ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼಅಯ್ಯಯ್ಯೋ ಎಷ್ಟು ಮುದ್ದಾಗಿದೆ ಇವರುಗಳ ನೃತ್ಯʼ ಎಂದು ಹೇಳಿದ್ದಾರೆ. ಇನ್ನೂ ಅನೇಕರು ನಿಜಕ್ಕೂ ಈ ಮುಗ್ಧ ಮನಸಸ್ಸುಗಳ ನೃತ್ಯ ಬಹಳ ಅದ್ಭುತವಾಗಿದೆ ಎಂದು ಹೇಳಿದ್ದಾರೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಖೋ- ಖೋ ವಿಶ್ವಕಪ್ ಗೆದ್ದು ಬೀಗಿದ ಭಾರತ ಮಹಿಳಾ ಪಡೆ
ಖೋ- ಖೋ ವಿಶ್ವಕಪ್ ಗೆದ್ದು ಬೀಗಿದ ಭಾರತ ಮಹಿಳಾ ಪಡೆ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ