Viral Video: ಹೋಟೆಲ್ ಆವರಣದಲ್ಲಿ ರಾಜರೋಷವಾಗಿ ಅಡ್ಡಾಡಿದ ಸಿಂಹರಾಜ, ಎದೆ ಝಲ್ ಎನಿಸೋ ವಿಡಿಯೋ 

ಇತ್ತೀಚಿನ ದಿನಗಳಲ್ಲಿ ಕಾಡಿನ ವಿನಾಶದಿಂದಾಗಿ, ಅರಣ್ಯದಲ್ಲಿನ ಪ್ರಾಣಿಗಳೆಲ್ಲಾ ಆಹಾರವನ್ನರಸುತ್ತಾ ನಾಡಿನ ಕಡೆಗೆ ಬರುತ್ತಿವೆ. ಹೀಗೆ ಆಹಾರವನ್ನರಸುತ್ತಾ ಬರುವ  ಅಪಾಯಕಾರಿ ಪ್ರಾಣಿಗಳು ಜನರು, ಶ್ವಾನ ಮತ್ತು ದನಕರುಗಳ ಮೇಲೆ ದಾಳಿ ಮಾಡುವಂತಹ ಸುದ್ದಿಗಳು ಆಗಾಗ್ಗೆ ಕೇಳಿಬರುತ್ತಿವೆ. ಹೀಗೆ ಕಾಡು ಪ್ರಾಣಿಗಳು ಜನವಸತಿ ಪ್ರದೇಶಗಳ ಬಳಿ ಬರುವುದು ಹೊಸದೇನಲ್ಲಾ. ಇದೀಗ ಅಂತಹದ್ದೇ ವಿಡಿಯೋವೊಂದು ಹರಿದಾಡುತ್ತಿದ್ದು, ದೈತ್ಯ ಸಿಂಹವೊಂದು ರಾತ್ರಿಯ ವೇಳೆ ಆಹಾರವನ್ನರಸುತ್ತಾ ಹೋಟೇಲ್ ಬಳಿ ಬಂದು, ಯಾವುದೇ ಬೇಟೆ ಸಿಗದೆ ವಾಪಸ್ ಹೊರಟು ಹೋಗಿದೆ. ಈ ದೃಶ್ಯಾವಳಿ ನೋಡುಗರಲ್ಲಿ ನಡುಕ ಹುಟ್ಟಿಸಿದೆ.

Viral Video: ಹೋಟೆಲ್ ಆವರಣದಲ್ಲಿ ರಾಜರೋಷವಾಗಿ ಅಡ್ಡಾಡಿದ ಸಿಂಹರಾಜ, ಎದೆ ಝಲ್ ಎನಿಸೋ ವಿಡಿಯೋ 
ವೈರಲ್​​ ವಿಡಿಯೋ
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on: Feb 10, 2024 | 2:38 PM

ಕಾಡಿನ ರಾಜ ಸಿಂಹ ಬೇಟೆಯಾಡುವುದರಲ್ಲಿ ಎತ್ತಿದ ಕೈ. ಈ ಸಿಂಹದ ಕಣ್ಣಿಗೆ ಇತರೆ ಅಮಾಯಕ ಪ್ರಾಣಿಗಳು ಬಿದ್ದರೆ ಅವುಗಳ ಕಥೆ ಮುಗಿಯಿತಂತಲೇ ಅರ್ಥ. ಹೀಗೆ ಈ ಬೇಟೆಗಾರ ಪ್ರಾಣಿ  ತನ್ನ ಆಹಾರಕ್ಕಾಗಿ ಇತರೆ ಪ್ರಾಣಿಗಳ ಮೇಲೆ ದಾಳಿ ನಡೆಸುವಂತಹ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ಆಗಾಗ್ಗೆ ಕಾಣಸಿಗುತ್ತಿರುತ್ತವೆ. ಇತ್ತೀಚಿನ ದಿನಗಳಲ್ಲಂತೂ ಅರಣ್ಯ ನಾಶದಿಂದಾಗಿ ಕಾಡಿನಲ್ಲಿರುವ ಹುಲಿ, ಚಿರತೆ, ಸಿಂಹ ನಾಡಿನೆಡೆಗೆ ಆಹಾರವನ್ನರಸುತ್ತಾ ಬರುತ್ತಿವೆ. ಹೀಗೆ ಬರುವ ಈ ಪ್ರಾಣಿಗಳು ದನ ಕರುಗಳು ಮತ್ತು ಮನುಷ್ಯರ ಮೇಲೆ ದಾಳಿ ಮಾಡುವಂತಹ ಸುದ್ದಿಗಳು ಆಗಾಗ್ಗೆ ಕೇಳಿ ಬರುತ್ತಿರುತ್ತವೆ. ಇದೀಗ ಕಾಡಿನ ರಾಜನಾಗಿರುವ  ಸಿಂಹ ಆಹಾರವನ್ನರಸುತ್ತಾ ಜನವಸತಿ ಪ್ರದೇಶದ ಬಳಿಗೆ ಬಂದತಂಹ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಈ ಭಯಾನಕ ದೃಶ್ಯ ನೋಡುಗರನ್ನು ಬೆಚ್ಚಿ ಬೀಳಿಸಿದೆ.

ಈ ಘಟನೆ ಕೆಲ ವರ್ಷಗಳ ಹಿಂದೆ ಗುಜರಾತಿನ ಜುನಾಗಢದಲ್ಲಿರುವ ಬೆಲ್ಲೆವ್ಯೂ ಸರೋವರ್ ಪೋಟ್ರಿಕೋ ಹೋಟೆಲ್ ಆವರಣದಲ್ಲಿ ನಡೆದಿದ್ದು ಎಂದು ಹೇಳಲಾಗುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಇದೀಗ ವೈರಲ್ ಆಗಿರುವ ಈ ವಿಡಿಯೋದಲ್ಲಿ ದೈತ್ಯ ಸಿಂಹವೊಂದು ಹೋಟೆಲ್ ಆವರಣದಲ್ಲಿ ರಾಜಾರೋಷವಾಗಿ ತಿರುಗಾಡುತ್ತಾ, ಆಹಾರವನ್ನರಸುತ್ತಿರುವ ದೃಶ್ಯವನ್ನು ಕಾಣಬಹುದು. ಈ ವಿಡಿಯೋವನ್ನು @desimojito ಎಂಬ ಹೆಸರಿನ X ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.

ವೈರಲ್​​​ ವಿಡಿಯೋ ಇಲ್ಲಿದೆ ನೋಡಿ:

ವೈರಲ್ ವಿಡಿಯೋದಲ್ಲಿ ರಸ್ತೆಯನ್ನು ದಾಟಿ ಹೋಟೆಲ್ ಆವರಣಕ್ಕೆ ಜಿಗಿದು ಬಂದಂತಹ ಸಿಂಹವೊಂದು ಸಿಕ್ಕಾಪಟ್ಟೆ ಹೊಟ್ಟೆ ಹಸಿತಿದೆ ಏನಾದ್ರೂ ಆಹಾರ ಸಿಗುತ್ತಾ ಅಂತ ಹೋಟೆಲ್ ಆವರಣದಲ್ಲಿ ರಾಜಾರೋಷವಾಗಿ ಅತ್ತಿಂದ  ಇತ್ತ ಸುತ್ತಾಡುತ್ತಾ ಆಹಾರವನ್ನರಸುತ್ತಿರುತ್ತೆ. ಆದ್ರೆ ಯಾವುದೇ ಬೇಟೆ ಸಿಗದ ಹಿನ್ನೆಲೆಯಲ್ಲಿ  ಇಲ್ಲಿ ಎಷ್ಟೇ ಹುಡುಕಿದ್ರೂ ನನ್ಗೆ ಯಾವುದೇ ಆಹಾರ ಸಿಗಲ್ಲ ಅಂತ ಭಾವಿಸಿದ  ಸಿಂಹವು ಬಂದ ದಾರಿಗೆ ಸುಂಕವಿಲ್ಲವೆಂದು ಗೇಟ್ ಹಾರಿ ವಾಪಸ್ ಹೊರಟು ಹೋಗುವುದನ್ನು ಕಾಣಬಹುದು. ಈ ಎಲ್ಲಾ ದೃಶ್ಯಾವಳಿ ಹೋಟೆಲಿನಲ್ಲಿ ಅಳವಡಿಸಲಾದ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಇದನ್ನೂ ಓದಿ: ಬಟರ್ ಫ್ಲೈ… ಬಟರ್ ಫ್ಲೈ  ಹಾಡಿಗೆ  ಸಖತ್ ಸ್ಟೆಪ್ ಹಾಕಿದ ಹಿರಿ ಜೀವಗಳು

ಫೆಬ್ರವರಿ 09 ರಂದು ಹಂಚಿಕೊಳ್ಳಲಾದ ಈ ವಿಡಿಯೋ ಮೂರುವರೆ ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ 3 ಸಾವಿರಕ್ಕೂ ಹೆಚ್ಚು ಲೈಕ್ಸ್ಗಳನ್ನು ಪಡೆದುಕೊಂಡಿದೆ. ಮತ್ತು ತರಹೇವಾರಿ ಕಮೆಂಟ್ಸ್ಗಳೂ ಹರಿದುಬಂದಿವೆ. ಒಬ್ಬ ಬಳಕೆದಾರರು ʼಗುಜರಾತಿನ ಗಿರ್ ಪ್ರದೇಶದಲ್ಲಿ ಇಂತಹ ಘಟನೆಗಳು ನಡೆಯುತ್ತಲೇ ಇರುತ್ತವೆʼ ಎಂದು ಕಮೆಂಟ್ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರರು ʼಕಾಡಿನ ರಾಜ ಬೇಸರಗೊಂಡು ಹೊರಟು ಹೋದʼ ಎಂಬ ತಮಾಷೆಯ ಕಮೆಂಟ್ ಬರೆದುಕೊಂಡಿದ್ದಾರೆ. ಇನ್ನೂ ಅನೇಕರ ಈ ದೃಶ್ಯ ತುಂಬಾನೇ ಭಯಾನಕವಾಗಿದೆ ಎಂದು ಹೇಳಿದ್ದಾರೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ