ಅಮ್ಮನಿಗೆ ಇಷ್ಟವಾಗದ ವ್ಯಕ್ತಿಗಳೆಂದರೆ, ನನ್ನ ಅಜ್ಜ-ಅಜ್ಜಿ! ಪರೀಕ್ಷೆಯಲ್ಲಿ ವಿದ್ಯಾರ್ಥಿಯ ಉತ್ತರ ನೋಡಿ ಶಿಕ್ಷಕರು ಶಾಕ್

ಮನೆಯಲ್ಲಿ ಒಂದು ಕೂಡುಕುಟುಂಬ ಇದ್ರೆ ತುಂಬಾ ಸಂತೋಷ ಇರುತ್ತದೆ ಎನ್ನುವುದು ಹಳೆಯ ಮಾತು. ಒಂದು ಮನೆಯಲ್ಲಿ 18, 20ಕ್ಕೂ ಹೆಚ್ಚು ಜನ ಇರುತ್ತಿದ್ದರು. ಆದರೆ ಈಗ ಒಂದು ಮನೆಯಲ್ಲಿ ಗಂಡ, ಹೆಂಡತಿ, ಮಕ್ಕಳು ಹೀಗೆ. ಕೆಲವೊಂದು ಕಡೆ ಅಪ್ಪಿ-ತಪ್ಪಿ ಅಜ್ಜ-ಅಜ್ಜಿ ಇರುತ್ತಾರೆ. ಅವರನ್ನು ನೋಡಿಕೊಳ್ಳಲು ಕೂಡ ಹೀಗೆ ಸೊಸೆಯಂದಿರಿಗೆ ತುಂಬಾ. ಸೊಸೆಯ ಕಾಟಕ್ಕೆ ಎಷ್ಟೊಂದು ಹಿರಿಯರು ಮನೆ ಬಿಟ್ಟು ಆಶ್ರಮಕ್ಕೆ ಹೋಗಿರುವ ಘಟನೆಗಳನ್ನು ನಾವು ನೋಡಿರಬಹುದು. ಇದೆಲ್ಲ ಮನೆಯಲ್ಲಿರುವ ಮಕ್ಕಳ ಮೇಲೆ ಹೇಗೆಲ್ಲ ಪರಿಣಾಮ ಬೀರುತ್ತದೆ ಎಂಬುದಕ್ಕೆ ಈ ಸ್ಟೋರಿ ಉದಾಹರಣೆ ನೋಡಿ.

ಅಮ್ಮನಿಗೆ ಇಷ್ಟವಾಗದ ವ್ಯಕ್ತಿಗಳೆಂದರೆ, ನನ್ನ ಅಜ್ಜ-ಅಜ್ಜಿ! ಪರೀಕ್ಷೆಯಲ್ಲಿ ವಿದ್ಯಾರ್ಥಿಯ ಉತ್ತರ ನೋಡಿ ಶಿಕ್ಷಕರು ಶಾಕ್
ವೈರಲ್​​ ವಿಡಿಯೋ
Updated By: ಅಕ್ಷಯ್​ ಪಲ್ಲಮಜಲು​​

Updated on: Apr 14, 2025 | 12:13 PM

ಮನೆಯಲ್ಲಿ ಮಕ್ಕಳ ಮುಂದೆ ಏನ್​​​ ಮಾಡುತ್ತೇವೆ. ಅದನ್ನೇ ಅವರು ಅನುಸರಿಸುತ್ತಾರೆ, ಮಕ್ಕಳ ಮುಂದೆ ಮಾತನಾಡುವ ಅಥವಾ ನಮ್ಮ ವರ್ತನೆ ಬಗ್ಗೆ ಎಚ್ಚರಿಕೆಯಿಂದ ಇರಬೇಕು. ಅವರ ಮುಂದೆ ಮಾತನಾಡುವ ಮಾತು ಅಥವಾ ಕೆಲವೊಂದು ವಿಚಾರಗಳು ಅವರನ್ನು ಹೇಗೆ ಬದಲಾಯಿಸುತ್ತದೆ ಅಥವಾ ಅವರ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದರ ಬಗ್ಗೆ ಯೋಚನೆ ಇರಬೇಕು. ಅದರಲ್ಲೂ ಅವಿಭಕ್ತಕುಟುಂಬದಲ್ಲಿ ಇದು ಹೆಚ್ಚಾಗಿರುತ್ತದೆ. ಒಂದು ಅವಿಭಕ್ತ ಕುಟುಂಬದಲ್ಲಿ (Joint family) ಅಜ್ಜಿ, ಅಜ್ಜ, ಅತ್ತೆ, ಮಾವ ಇನ್ನು ಅನೇಕರು ಇರುತ್ತಾರೆ. ಆದರೆ ಈ ಕಾಲದಲ್ಲಿ ಗಂಡ – ಹೆಂಡತಿ, ಮಕ್ಕಳು ಅಷ್ಟೇ ಸಾಕು ಎನ್ನುವ ಕಾಲ ಇದು. ಆದರೆ ಕೆಲವೊಂದು ಕಡೆ ಅಜ್ಜ-ಅಜ್ಜಿ (Grandparents) ಇರುತ್ತಾರೆ. ಅವರು ಹೆಚ್ಚಾಗಿ ಹತ್ತಿರವಾಗಿರುವುದು ಮೊಮ್ಮಕ್ಕಳಿಗೆ, ಮನೆ ಸೊಸೆಗೆ ಹೆಚ್ಚು ಆತ್ಮೀಯರಾಗಿರುವುದಿಲ್ಲ. ಪ್ರತಿದಿನ ಒಂದಲ್ಲ ಒಂದು ವಿಷಯಕ್ಕೆ ಈ ಕಿರಿಯರು ಹಾಗೂ ಹಿರಿಯರ ನಡುವೆ ಜಗಳಗಳು ನಡೆಯುತ್ತದೆ. ಇದು ಆ ಮನೆಯಲ್ಲಿರುವ ಪುಟ್ಟ ಕಂದಮ್ಮಗಳ ಮೇಲೆ ಪರಿಣಾಮ ಬೀರುತ್ತದೆ. ಹೀಗೆ ಒಂದು ಘಟನೆ ತೆಲಂಗಾಣದಲ್ಲಿ ನಡೆದಿದೆ. 4ನೇ ತರಗತಿಯ ಮಗುವೊಂದು ತನ್ನ ಪರೀಕ್ಷೆಯಲ್ಲಿ ತನ್ನ ಮನೆ ಸತ್ಯದ ಬಗ್ಗೆ ಬರೆದಿದೆ. ತನ್ನ ಮನೆಯಲ್ಲಾಗುವ ವಿಚಾರವನ್ನು ಪರೀಕ್ಷೆಯ ಉತ್ತರ ಪ್ರತಿಕೆಯಲ್ಲಿ ತಿಳಿಸಿದೆ.

ಸರ್ಕಾರಿ ಶಾಲೆಯ 4ನೇ ತರಗತಿಯ ಮಗುವೊಂದು ನಾಲ್ಕನೇ ತರಗತಿಯ ವಾರ್ಷಿಕ ಪರೀಕ್ಷೆಯಲ್ಲಿ ಕೇಳಿದ ಪ್ರಶ್ನೆಗೆ ವಿಚಿತ್ರವಾಗಿ ಉತ್ತರಿಸಿದೆ. ಇಂಗ್ಲಿಷ್ ಪ್ರಶ್ನೆ ಪ್ರತಿಕೆಯಲ್ಲಿ ಕೇಳಲಾಗಿದ್ದ ಪ್ರಶ್ನೆಗೆ ಮಗು ಉತ್ತರಿಸಿದ್ದು ಹೀಗೆ, ಅಮ್ಮನಿಗೆ ಏನು ಇಷ್ಟವಾಯಿತು ಮತ್ತು ಏನು ಇಷ್ಟವಾಗಲಿಲ್ಲ ಎಂಬುದರ ಬಗ್ಗೆ ಪ್ರಶ್ನೆ ಕೇಳಲಾಗಿತ್ತು. ಅದಕ್ಕೆ ಆ ಮಗು ಉತ್ತರಿಸಿದ್ದು “ಅಜ್ಜಿ, ಅಜ್ಜ” ಎಂದು. ಆ ಮಗುವಿನ ತಾಯಿಗೆ ಇಷ್ಟವಾಗದ್ದು ಎಂದರೆ ಅದು “ಅಜ್ಜಿ, ಅಜ್ಜ”. ಮಗುವಿನ ಈ ಉತ್ತರ ನೋಡಿ ಶಿಕ್ಷಕರಿಗೆ ಅಚ್ಚರಿಯಾಗಿದೆ. ಮನೆಯಲ್ಲಿ ನಡೆಯುವ ವಿಚಾರ ಮಗುವಿನ ಮನಸ್ಸಿಗೆ ಎಷ್ಟು ಪರಿಣಾಮ ಉಂಟು ಮಾಡಿದೆ ಎಂಬುದು ಈ ಇದರಿಂದ ತಿಳಿಯುತ್ತದೆ.

ಇಂದಿನ ಸಮಾಜದಲ್ಲಿ, ಪೋಷಕರು ಮತ್ತು ಅತ್ತೆ-ಮಾವಂದಿರು ವೃದ್ಧಾಪ್ಯದಲ್ಲಿ ಹೊರೆಯಾಗುತ್ತಾರೆ. ಈ ಕಾರಣಕ್ಕೆ ಸೊಸೆಯಂದಿರು ತುಂಬಾ ಕ್ರೂರವಾಗಿ ನಡೆಸಿಕೊಳ್ಳುತ್ತಾರೆ. ಇದನ್ನು ಈ ಮಗು ತನ್ನ ಉತ್ತರದಲ್ಲಿ ಬರದಿದೆ ಎಂದು ಹೇಳಲಾಗಿದೆ. ಇದನ್ನು ಗಮನಿಸಿದಾಗ ಮನುಷ್ಯನ ನಡುವಿನ ಸಂಬಂಧ ಎಷ್ಟು ಕೆಟ್ಟು ಹೋಗಿದೆ ನೋಡಿ. ಈ ಬಗ್ಗೆ ಶಿಕ್ಷಕರು ಉತ್ತರ ಪ್ರತಿಕೆಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಮನೆಯಲಾಗುವ ಘಟನೆಗಳು ಮಕ್ಕಳ ಮೇಲೆ ಹೇಗೆ ಪರಿಣಾಮವನ್ನು ಎಂಬುದನ್ನು ಪೋಷಕರು ಗಮನಿಸಬೇಕು ಎಂದು ಈ ಪೋಸ್ಟ್​​ನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ
ಭಾರತದ ಮೊದಲ ಕಾಫಿ ತೋಟ ತಾಣದ ಕಥೆಯನ್ನು ಹಂಚಿಕೊಂಡ ಆನಂದ್‌ ಮಹೀಂದ್ರಾ
ಕಾಲೇಜು ಪ್ರೊಫೆಸರ್‌ ಎನರ್ಜಿಗೆ ಫಿದಾ ಆದ ವಿದ್ಯಾರ್ಥಿಗಳು
ಬೆಂಗಳೂರಿನಲ್ಲಿ ಆಟೋ ಬುಕ್ ಮಾಡುವ ಟಿಪ್ಸ್ ನೀಡಬೇಕು
ಒಂದೇ ಮಂಟಪದಲ್ಲಿ, ಒಂದೇ ಸಮಯದಲ್ಲಿ ಇಬ್ಬರು ಮಹಿಳೆಯರನ್ನು ಮದುವೆಯಾದ ವ್ಯಕ್ತಿ

ಇದನ್ನೂ ಓದಿ: ಅಮುಲ್‌ ಗರ್ಲ್‌, ಪಾರ್ಲೆಜಿ ಹುಡುಗಿಗೆ ಜೀವ ಕಳೆ ತುಂಬಿದ ಎಐ; ವೈರಲ್‌ ಆಯ್ತು ಮುದ್ದಾದ ವಿಡಿಯೋ

ಈ ಘಟನೆ ತೆಲಂಗಾಣದ ರಾಜಣ್ಣ ಸಿರ್ಸಿಲ್ಲಾ ಜಿಲ್ಲೆಯ ಚಂದೂರ್ತಿ ಮಂಡಲದಲ್ಲಿ ನಡೆದಿದೆ. ಈ ಘಟನೆಯಿಂದ ಒಂದು ಅರ್ಥ ಮಾಡಿಕೊಳ್ಳಬೇಕು. ಕರ್ಮ ರಿಟರ್ನ್ ಬಂದೆ ಬರುತ್ತದೆ. ನಮ್ಮ ಹೆತ್ತವರನ್ನು ಅಥವಾ ಹಿರಿಯರನ್ನು ಅವಮಾನಿಸಿದ್ರೆ ನಮಗೆ ಮುಂದೊಂದು ದಿನ ನಮಗೂ ಈ ಪರಿಸ್ಥಿತಿ ಬರುತ್ತದೆ. ಒಂದು ಮಗುವಿಗೆ ತಿಳಿದಿರುವ ವಿಷಯ ನಮಗೆ ತಿಳಿಯುವುದಿಲ್ಲ ಎಂದರೆ ಅದಕ್ಕಿಂತ ವಿಪರ್ಯಾಸ ಬೇರಿಲ್ಲ.

ವೈರಲ್​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:13 pm, Mon, 14 April 25