
Viral Video: ಊರ್ಫಿ ಜಾವೇದ್ (Uorfi Javed) ಎಂದತಕ್ಷಣ ಆಕೆ ತೊಟ್ಟುಕೊಳ್ಳುವ ಚಿತ್ರವಿಚಿತ್ರ ಬಟ್ಟೆಗಳೆಲ್ಲ ಕಣ್ಣಮುಂದೆ ಬರುತ್ತವೆ. ಹಿಂದೊಮ್ಮೆ ಕೂದಲಿನಿಂದ ಮಾಡಿದ ಉಡುಪನ್ನು ಧರಿಸಿ ಥೇಟ್ ನಮ್ಮ ಅಕ್ಕಮಹಾದೇವಿಯನ್ನು ನೆನಪಿಸಿದ್ದನ್ನು ನೀವ ನೋಡಿರಬಹುದು. ಇದೀಗ ಈಕೆ ಮರದ ತೊಗಟೆಯನ್ನು ಮೈಗೆ ಸುತ್ತಿಕೊಂಡು ಟ್ರೆಂಡ್ನಲ್ಲಿದ್ದಾರೆ. ಮಾರ್ವೆಲ್ ಸಿನೆಮಾದ ಗಾರ್ಡಿಯನ್ಸ್ ಆಫ್ ದಿ ಗ್ಯಾಲಕ್ಸಿಯಲ್ಲಿನ ಪಾತ್ರ ಗ್ರೂಟ್ ಅನ್ನು ಇದು ನೆನಪಿಸುತ್ತಿದೆ ಎನ್ನುತ್ತಿದ್ದಾರೆ ನೆಟ್ಟಿಗರು. ನೋಡಿ ವೈರಲ್ ಆಗುತ್ತಿರುವ ಈಕೆಯ ಈ ವಿಡಿಯೋ.
ಈ ವಿಡಿಯೋ ಪೋಸ್ಟ್ ಮಾಡಿದ ಈಕೆ, ‘ಈ ಉಡುಗೆ ತಯಾರಿಸುವಾಗ ಯಾವುದೇ ಮರಗಳಿಗೆ ಹಾನಿಯನ್ನುಂಟುಮಾಡಿಲ್ಲ’ ಎಂದು ಹೇಳಿದ್ದಾರೆ. ತಿಳಿಲ್ಯಾವೆಂಡರ್ ಉಡುಪಿನಲ್ಲಿ ಮರದ ಬಳಿ ಬಂದು ನಿಲ್ಲುವ ಊರ್ಫಿ ನಂತರ ತೊಗಟೆಯನ್ನು ತೊಟ್ಟುಕೊಂಡ ಕ್ಲಿಪ್ಪಿಂಗ್ನಲ್ಲಿ ಕಾಣಿಸಿಕೊಳ್ಳುತ್ತಾರೆ. ಈತನಕ ಸುಮಾರು 2.4 ಮಿಲಿಯನ್ ಜನ ನೋಡಿದ್ದಾರೆ. ಸುಮಾರು 14 ಲಕ್ಷ ಜನರು ಈ ವಿಡಿಯೋ ಇಷ್ಟಪಟ್ಟಿದ್ದಾರೆ. ಸಾವಿರಾರು ಜನರು ಪ್ರತಿಕ್ರಿಯಿಸಿದ್ದಾರೆ.
ಇದನ್ನೂ ಓದಿ : Viral Video: ಹೈದರಾಬಾದಿನ 76 ವರ್ಷದ ಈ ಯುವಕನ ಲಗೇಜು ತಾಲೀಮು
ಇದು ಪೇಯ್ಡ್ ಪೋಸ್ಟ್ ಎಂದು ಕೆಲವರು ಹೇಳಿದ್ದಾರೆ. ಸದ್ಯ ಈ ಸಲ ಇಷ್ಟಾದರೂ ಬಟ್ಟೆ ಧರಿಸಿದ್ದೀಯಲ್ಲ ಒಳ್ಳೆಯದು ಎಂದಿದ್ದಾರೆ ಅನೇಕರು. ನಾನಂತೂ ಈ ಪೋಸ್ಟ್ಗೆ ಹಾಕುವ ಮಜಾ ಕಾಮೆಂಟ್ಗಳನ್ನು ಓದಲೆಂದೇ ಬಂದಿದ್ದೇನೆ ಎಂದು ಒಬ್ಬರು ಹೇಳಿದ್ದಾರೆ. ಇದು ಚಾಕೋಲೇಟ್ ಮೆತ್ತಿದ ಬಟ್ಟೆಯಂತೆ ಕಾಣುತ್ತಿದೆ, ತಿನ್ನಬಹುದೆ? ಎಂದಿದ್ದಾರೆ ಮತ್ತೊಬ್ಬರು. ಅಯ್ಯೋ ನಂಗಂತೂ ಇದು ಸೆಗಣಿ ಮೆತ್ತಿದಂತೆ ಕಾಣುತ್ತಿದೆ ಎಂದು ಇನ್ನೊಬ್ಬರು.
ಇದನ್ನೂ ಓದಿ : Viral Video: ಬಾ ಕೂಸೇ ಮುದ್ದಿಸ್ತೀನಿ; ವಾತ್ಸಲ್ಯಮಯೀ ಒರಾಂಗುಟಾನ್
ಗಿಡಮರಗಳನ್ನು ಬೆಳೆಸಲು ಪ್ರೋತ್ಸಾಹಿಸುತ್ತಿರುವಂತೆ ಕಾಣುತ್ತಿದೆ ಒಳ್ಳೆಯದು, ತುಂಬಾ ಚೆಂದ ಕಾಣುತ್ತಿದ್ದೀರಿ ಎಂದು ಮತ್ತೊಬ್ಬರು ಹೇಳಿದ್ದಾರೆ. ಎವಿಡ್ ಡೆಡ್ ಸಿನೆಮಾ ನೆನಪಿಗೆ ಬರುತ್ತಿದೆ ಎಂದು ಇನ್ನೊಬ್ಬರು ಹೇಳಿದ್ದಾರೆ. ಡಿಸ್ಲೈಕ್ ಬಟನ್ ಎಲ್ರೋ ಎಂದು ಹಲವರು ಕೇಳಿದ್ಧಾರೆ. ಈ ವಿಡಿಯೋ ನೋಡಿದ ನಿಮ್ಮ ಅನಿಸಿಕೆ ಏನು?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 2:18 pm, Wed, 24 May 23