Viral Video : ಎಷ್ಟಂತ ನಾನೇ ನೋಡ್ಕೋಬೇಕು ನಿಮ್ಮನ್ನ. ಹೋಗಿ ನಿಮ್ಮಪ್ಪನ ಜೊತೆ ಅಂತ ಅಮ್ಮ ಹೊರಗೆ ಹಾಕಿರಬೇಕು. ಅಂತೂ ಈ ಅಪ್ಪ ನಾಲ್ಕೂ ಮರಿಗಳನ್ನು ಆಚೆ ಕರೆದುಕೊಂಡು ಹೊರಟಿದ್ದಾನೆ. ಏನು ಮಾಡಿದರೂ ಸಿಂಹ ಸಿಂಹವೇ! ಮಕ್ಕಳಿದ್ದರೇನು ಬಿಟ್ಟರೇನು ತನ್ನ ಗತ್ತು ತಾನು ಬಿಟ್ಟುಕೊಟ್ಟೀತೇ? ಧಡಧಡನೆ ಹೆಜ್ಜೆ ಹಾಕುತ್ತಿದ್ದಾನೆ. ಹಿಂದಿಂದೆ ಮರಿಗಳು ಅವನನ್ನು ತಲುಪಲು ಹರಸಾಹಸ ಪಡುತ್ತಿವೆ. ಎಂಥ ಅಪ್ಪ ನೀನು, ನಿಧಾನ ಹೋಗಬಾರದೆ ಎಂದು ನೆಟ್ಮಂದಿ ಹೇಳುತ್ತಿದ್ದಾರೆ.
Dad’s day out with kids?
ಇದನ್ನೂ ಓದಿ— Tansu YEĞEN (@TansuYegen) October 31, 2022
2.3 ಮಿಲಿಯನ್ಗಿಂತಲೂ ಹೆಚ್ಚು ಜನ ಈ ವಿಡಿಯೋ ನೋಡಿದ್ದಾರೆ. 44,000ಕ್ಕಿಂತಲೂ ಹೆಚ್ಚು ಜನ ಈ ವಿಡಿಯ ಇಷ್ಟಪಟ್ಟಿದ್ದಾರೆ. ಇವ ಓಡುವುದನ್ನು ನೋಡುತ್ತಿದ್ದರೆ, ಇವ ನಿಜವಾದ ಅಪ್ಪನೇ! ಎಂದಿದ್ದಾರೆ ಒಬ್ಬರು. ಇದು ಬಹಳ ಆರೋಗ್ಯಕರ ಸಿಂಹದಂತೆ ಕಾಣುತ್ತಿದೆ ಎಂದಿದ್ದಾರೆ ಇನ್ನೊಬ್ಬರು. ಮಕ್ಕಳೇ ನನ್ನನ್ನು ನಂಬಿ ನಿಮಗಾಗಿ ನಾನು ಹಾಲನ್ನು ತರುತ್ತೇನೆ ಎಂದು ಮತ್ತೊಬ್ಬರು ತಮಾಷೆ ಮಾಡಿದ್ದಾರೆ. ಎಂಥ ಪಿಕ್ನಿಕ್ಕೂ ಇಲ್ಲ ಗಿಕ್ನಿಕ್ಕೂ ಇಲ್ಲ. ಇವುಗಳಿಂದ ತಪ್ಪಿಸಿಕೊಂಡು ಓಡಲು ನೋಡುತ್ತಿದ್ದಾನೆ. ಏನಿದ್ದರೂ ಸಿಂಹಿಣಿಯೇ ಮಕ್ಕಳನ್ನು ನೋಡಿಕೊಳ್ಳುವುದು ಎಂದಿದ್ದಾರೆ ಮಗದೊಬ್ಬರು.
ನಿಮಗೇನು ಅನ್ನಿಸುತ್ತೆ ಈ ವಿಡಿಯೋ ನೋಡುತ್ತಿದ್ದರೆ?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ