ಸಾವಿನಂಚಿನಲ್ಲಿದ್ದ ವ್ಯಕ್ತಿಯ ಜೀವ ಉಳಿಸಿದ ಪೊಲೀಸ್ ಅಧಿಕಾರಿ -ವೀಡಿಯೊ ವೈರಲ್

|

Updated on: Feb 19, 2024 | 1:42 PM

CPR Viral Video: ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಗೆ ಪೊಲೀಸ್ ಅಧಿಕಾರಿ ಸಿಪಿಆರ್ ಮಾಡಿ ಪ್ರಾಣ ಉಳಿಸಿದ್ದಾರೆ. ಇಬ್ರಾಹಿಂಪಟ್ಟಣದಲ್ಲಿ ಈ ಅನಿರೀಕ್ಷಿತ ಘಟನೆ ನಡೆದಿದೆ. ಪಶ್ಚಿಮ ಬಂಗಾಳದ ಸಂತೋಷ್ ಮುಖರ್ಜಿ ಜೀವನೋಪಾಯಕ್ಕಾಗಿ ಹೈದರಾಬಾದ್‌ಗೆ ಬಂದಿದ್ದರು. ಕೌಟುಂಬಿಕ ಸಮಸ್ಯೆಗಳಿಂದಾಗಿ ಮುಖರ್ಜಿ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಸಾವಿನಂಚಿನಲ್ಲಿದ್ದ ವ್ಯಕ್ತಿಯ ಜೀವ ಉಳಿಸಿದ ಪೊಲೀಸ್ ಅಧಿಕಾರಿ -ವೀಡಿಯೊ ವೈರಲ್
ವೀಡಿಯೊ: ಸಾವಿನಂಚಿನಲ್ಲಿದ್ದ ವ್ಯಕ್ತಿಯ ಜೀವ ಉಳಿಸಿದ ಪೊಲೀಸ್ ಅಧಿಕಾರಿ
Follow us on

ಹೃದಯಾಘಾತದ ಸಮಸ್ಯೆಗಳು ಹೆಚ್ಚುತ್ತಿರುವ ಪ್ರಸ್ತುತ ದಿನಗಳಲ್ಲಿ, ಪ್ರತಿಯೊಬ್ಬರೂ ಸಿಪಿಆರ್ ಬಗ್ಗೆ ಹೆಚ್ಚು ತಿಳಿದುಕೊಳ್ಳುತ್ತಿದ್ದಾರೆ. ಸಾಯುತ್ತಿರುವ ವ್ಯಕ್ತಿಯನ್ನು ಉಳಿಸುವ ಶಕ್ತಿ ಸಿಪಿಆರ್‌ಗೆ (ಹೃದಯ ಮತ್ತು ಶ್ವಾಸಕೋಶ ಪ್ರಚೋದಕ -Cardiopulmonary resuscitation -CPR) ಇದೆ ಎಂದು ಹೇಳಬೇಕಾಗಿಲ್ಲ. ಇತ್ತೀಚೆಗಷ್ಟೇ ಹೈದರಾಬಾದ್‌ನ ಪೊಲೀಸ್ ಅಧಿಕಾರಿಯೊಬ್ಬರು ಸಾವಿನ ಅಂಚಿನಲ್ಲಿದ್ದ ವ್ಯಕ್ತಿಯನ್ನು ಸಿಪಿಆರ್ ಮಾಡುವ ಮೂಲಕ ರಕ್ಷಿಸಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಸದ್ಯ ವೈರಲ್ ಆಗುತ್ತಿದೆ.

ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಗೆ ಪೊಲೀಸ್ ಅಧಿಕಾರಿ ಸಿಪಿಆರ್ ಮಾಡಿ ಪ್ರಾಣ ಉಳಿಸಿದ್ದಾರೆ. ಇಬ್ರಾಹಿಂಪಟ್ಟಣದಲ್ಲಿ ಈ ಅನಿರೀಕ್ಷಿತ ಘಟನೆ ನಡೆದಿದೆ. ವಿವರ ನೋಡುವುದಾದರೆ.. ಪಶ್ಚಿಮ ಬಂಗಾಳದ ಸಂತೋಷ್ ಮುಖರ್ಜಿ (38) ಜೀವನೋಪಾಯಕ್ಕಾಗಿ ಹೈದರಾಬಾದ್‌ಗೆ ಬಂದಿದ್ದರು. ಕೌಟುಂಬಿಕ ಸಮಸ್ಯೆಗಳಿಂದಾಗಿ ಮುಖರ್ಜಿ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಾಹಿತಿ ಪಡೆದ ಎಸ್ಸೈ ಮೈಬೆಳ್ಳಿ ಸ್ಥಳಕ್ಕೆ ಧಾವಿಸಿದರು.

ಆತ್ಮಹತ್ಯೆ ಮಾಡಿಕೊಂಡ ಮುಖರ್ಜಿಯನ್ನು ತಕ್ಷಣ ಕೆಳಗೆ ಇಳಿಸಲಾಯಿತು. ಅವರ ಉಸಿರಾಟ ಆಗಲೇ ನಿಂತು ಹೋಗಿದ್ದರಿಂದ ಸಿಪಿಆರ್ ನಡೆಸಲಾಯಿತು. ಸ್ವಲ್ಪ ಸಮಯದ ನಂತರ ಸಂತ್ರಸ್ತ ಯುವಕನಿಗೆ ಪ್ರಜ್ಞೆ ಬಂದಿದೆ. ಬದುಕುಳಿದ ನಂತರ ಆತನನ್ನು ಆಸ್ಪತ್ರೆಗೆ ಸಾಗಿಸಲಾಯಿತು. ನಂತರ ಉತ್ತಮ ಚಿಕಿತ್ಸೆ ನೀಡಿ ಪ್ರಾಣ ಉಳಿಸಿಕೊಂಡಿದ್ದಾರೆ. ಇದೆಲ್ಲವನ್ನು ಅಲ್ಲಿದ್ದವರೊಬ್ಬರು ಮೊಬೈಲ್ ಫೋನ್ ನಲ್ಲಿ ರೆಕಾರ್ಡ್ ಮಾಡಿದ್ದಾರೆ. ಈ ವಿಡಿಯೋ ಈಗ ವೈರಲ್ ಆಗುತ್ತಿದೆ. ಸಾಯಲು ಬಯಸಿದ್ದ ವ್ಯಕ್ತಿಗೆ ಸಿಪಿಆರ್ ಮೂಲಕ ಜೀವ ನೀಡಿದ ಎಸ್ ಎಸ್ ಐಗೆ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ.

ಹೆಚ್ಚಿನ ಟ್ರೆಂಡಿಂಗ್ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ..