ರಸ್ತೆಯಲ್ಲೇ ಕುಸಿದು ಬಿದ್ದ ಒಂಟೆ, ನೀರು ಕೊಟ್ಟು ಬಾಯಾರಿಕೆ ನೀಗಿಸಿದ ಪುಣ್ಯಾತ್ಮ

ನಾವು ಮಾಡುವ ಸಣ್ಣ ಪುಟ್ಟ ಸಹಾಯವು ಕೂಡ ಇನ್ನೊಬ್ಬರ ಜೀವ ಉಳಿಸುತ್ತದೆ ಎನ್ನುವುದು ನಿಜ. ಹೌದು ಕಷ್ಟಕಾಲದಲ್ಲಿ ಸಹಾಯ ಮಾಡುವ ಹೃದಯವಂತ ವ್ಯಕ್ತಿಗಳ ವಿಡಿಯೋಗಳು ಆಗಾಗ ವೈರಲ್ ಆಗುತ್ತಿರುತ್ತದೆ. ಆದರೆ ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ಮರುಭೂಮಿಯಲ್ಲಿ ಬಾಯಾರಿಕೆ ಬಳಲುತ್ತಿರುವ ಒಂಟೆಯ ಬಾಯಾರಿಕೆ ನೀಗಿಸುವ ಮೂಲಕ ಮಾನವೀಯತೆ ಮೆರೆದಿದ್ದಾನೆ. ಈ ವಿಡಿಯೋವೊಂದು ವೈರಲ್ ಆಗುತ್ತಿದ್ದಂತೆ ಬಳಕೆದಾರರು ಈ ವ್ಯಕ್ತಿಯ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ರಸ್ತೆಯಲ್ಲೇ ಕುಸಿದು ಬಿದ್ದ ಒಂಟೆ, ನೀರು ಕೊಟ್ಟು ಬಾಯಾರಿಕೆ ನೀಗಿಸಿದ ಪುಣ್ಯಾತ್ಮ
ವೈರಲ್ ವಿಡಿಯೋ
Image Credit source: Twitter

Updated on: May 28, 2025 | 2:16 PM

ಸ್ವಾರ್ಥ (selfish) ತುಂಬಿದ ಪ್ರಪಂಚದಲ್ಲಿ ಮಾನವೀಯತೆ, ಭಾವನೆಗಳಿಗೆ ಬೆಲೆಯಿಲ್ಲ ಎಂದು ಹೇಳುವುದನ್ನು ನೋಡಿರಬಹುದು. ಸ್ವಾರ್ಥ ಜನರ ನಡುವೆ ಹೃದಯವಂತ ಹಾಗೂ ಸಹಾಯ ಮಾಡುವ ಗುಣವಿರುವ ವ್ಯಕ್ತಿಗಳನ್ನು ನೋಡಿದಾಗ ನಿಜಕ್ಕೂ ಖುಷಿಯಾಗುತ್ತದೆ. ಇನ್ನು ಈ ಮೂಕ ಪ್ರಾಣಿಗಳ ಭಾವನೆಗಳಿಗೆ ಮಿಡಿಯುವ ಹಾಗೂ ಆಪತ್ತಿನಲ್ಲಿರುವ ಪ್ರಾಣಿಗಳನ್ನು ರಕ್ಷಿಸುವ ಸಹೃದಯಿ ವ್ಯಕ್ತಿಗಳ ವಿಡಿಯೋಗಳು ಆಗಾಗ ಕಾಣಸಿಗುತ್ತವೆ. ಆದರೆ ಇದೀಗ ಬಾಯಾರಿಕೆಯಿಂದ ಬಳಲುತ್ತಿರುವ ಒಂಟೆ (camel) ಗೆ ನೀರು ಕುಡಿಸಿ ಬಾಯಾರಿಕೆ ನೀಗಿಸಿದ ಟ್ರಕ್ ಚಾಲಕ (truck driver) ನ ವಿಡಿಯೋವೊಂದು ವೈರಲ್ ಆಗಿದೆ. ಈ ವ್ಯಕ್ತಿಯ ಹೃದಯ ಶ್ರೀಮಂತಿಕೆಯನ್ನು ಎಲ್ಲರೂ ಮೆಚ್ಚಿಕೊಂಡಿದ್ದಾರೆ.

@AMAZINGNATURE ಹೆಸರಿನ ಖಾತೆಯಲ್ಲಿ ಈ ವಿಡಿಯೋವನ್ನು ಶೇರ್ ಮಾಡಿಕೊಳ್ಳಲಾಗಿದ್ದು, ಮರುಭೂಮಿ ಪ್ರದೇಶದಲ್ಲಿ ಬಿಸಿಲಿನ ತಾಪವು ಹೆಚ್ಚಾಗಿದ್ದು, ರಸ್ತೆಯಲ್ಲಿ ಒಂಟೆಯೊಂದು ದಣಿದಿದ್ದು, ಬಾಯಾರಿಕೆಯಿಂದ ಕುಸಿದು ಬಿದ್ದಿದೆ. ಎದ್ದು ನಡೆಯಲು ಸಾಧ್ಯವಿಲ್ಲ ಎನ್ನುವಂತೆ ಇರುವ ಒಂಟೆಯನ್ನು ಕಂಡ ಟ್ರಕ್ ಚಾಲಕನು ನೀರಿನ ಬಾಟಲಿಯೊಂದಿಗೆ ಅದರತ್ತ ಬಂದಿದ್ದಾನೆ. ಬಾಯಾರಿಕೆಯಿಂದ ಬಳಲುತ್ತಿದ್ದ ಒಂಟೆಗೆ ನೀರು ಕುಡಿಸಿದ್ದಾನೆ. ನೀರು ಕುಡಿದ ಬಳಿಕ ಒಂಟೆಯೂ ಸ್ವಲ್ಪ ಮಟ್ಟಿಗೆ ಚೇತರಿಸಿಕೊಂಡಿದೆ. ಈ ಟ್ರಕ್ ಚಾಲಕನು ಈ ಒಂಟೆಯೂ ಬಾಯಾರಿಕೆಯಿಂದ ಸಾಯುವ ಹಂತದಲ್ಲಿತ್ತು. ಇಲ್ಲಿ ತಾಪಮಾನ 55 ಡಿಗ್ರಿ ಸೆಲ್ಸಿಯಸ್ ತಲುಪಿದೆ ಎಂದು ಹೇಳುತ್ತಿರುವುದನ್ನು ನೋಡಬಹುದು.

ಇದನ್ನೂ ಓದಿ
ಮಡದಿಗೆ ನೈಲ್ ಪಾಲಿಶ್ ಹಚ್ಚಿದ ವೃದ್ಧ
ಪತ್ನಿ ಹೆರಿಗೆ ನೋವು ಅನುಭವಿಸುವುದನ್ನು ನೋಡಿ ಬಿಕ್ಕಿ ಬಿಕ್ಕಿ ಅತ್ತ ಪತಿ
ಕರೆಂಟ್ ಬೇಲಿ ದಾಟಲು ಆನೆ ಬಳಸಿದ ಈ ಟ್ರಿಕ್, ನಿಮಗೂ ಉಪಯೋಗಕ್ಕೆ ಬರಬಹುದು
ರಸ್ತೆಯಲ್ಲಿ ಹೋಗುತ್ತಿದ್ದ ಬುರ್ಖಾದಾರಿ ಮಹಿಳೆಗೆ ಕಿಸ್​​ ಮಾಡಿ ಹೋದ ಯುವಕ

ಇದನ್ನೂ ಓದಿ :Video: ಮೈಗೆ ಸುತ್ತಿಕೊಂಡಿದ್ದ ವಿಷಕಾರಿ ಹಾವಿನಿಂದ ಮೇಕೆಯನ್ನು ಕಾಪಾಡಿದ್ಹೇಗೆ ನೋಡಿ

ವೈರಲ್ ವಿಡಿಯೋ ಇಲ್ಲಿದೆ ನೋಡಿ

ಈ ವಿಡಿಯೋವನ್ನು 8.6 ಮಿಲಿಯನ್ ಜನರು ವೀಕ್ಷಿಸಿದ್ದು, ಟ್ರಕ್ ಚಾಲಕ ಮಾಡಿದ ಕೆಲಸ ಮೆಚ್ಚುಗೆ ವ್ಯಕ್ತಪಡಿಸುವ ಮೂಲಕ ಕಾಮೆಂಟ್ ಗಳನ್ನು ಮಾಡಿದ್ದಾರೆ. ಬಳಕೆದಾರರೊಬ್ಬರು, ನಾನು ಆ ದೇವರಲ್ಲಿ ಈ ವ್ಯಕ್ತಿಗೆ ಒಳ್ಳೆಯದಾಗಲಿ ಎಂದು ಕೇಳುತ್ತೇನೆ ಎಂದಿದ್ದಾರೆ. ಇನ್ನೊಬ್ಬರು, ದೇವರಂತೆ ಬಂದು ಒಂಟೆಯ ಬಾಯಾರಿಕೆ ನೀಗಿಸಿದ ವ್ಯಕ್ತಿ, ಈ ದೃಶ್ಯ ಅದ್ಭುತವಾಗಿದೆ ಎಂದು ಕಾಮೆಂಟ್ ನಲ್ಲಿ ತಿಳಿಸಿದ್ದಾರೆ. ಮತ್ತೊಬ್ಬರು, ಮಾನವೀಯತೆ ಇಂದಿಗೂ ಜೀವಂತವಾಗಿದೆ ಎಂದು ಕಾಮೆಂಟ್ ನಲ್ಲಿ ಬರೆದುಕೊಂಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ