ಕೊವಿಡ್ ನಿಯಂತ್ರಣದ ಕುರಿತಾಗಿ ಸಾಮಾಜಿಕ ಜಾಲತಾಣದಲ್ಲಿ ಜಾಗೃತಿ ಮೂಡಿಸುವ ಅದೆಷ್ಟೋ ಪ್ರಯತ್ನಗಳು ನಡೆಯುತ್ತಿವೆ. ದೇಶಾದ್ಯಂತ ಪೊಲೀಸ್ ಇಲಾಖೆ ಸೇರಿ ಸರ್ಕಾರಿ ಇಲಾಖೆಗಳೆಲ್ಲವೂ ಕೂಡಾ ವಿವಿಧ ಆಲೋಚನೆಗಳೊಂದಿಗೆ ಜನರಿಗೆ ಕೊವಿಡ್ ನಿಯಂತ್ರಣದ ಬಗ್ಗೆ ಜಾಗೃತಿ ಮೂಡಿಸುತ್ತಲೇ ಬಂದಿದೆ. ಕೊವಿಡ್-19 ನಿಯಂತ್ರಣಕ್ಕಾಗಿ, ಜನಪ್ರಿಯತೆ ಗಳಿಸಿಕೊಳ್ಳುತ್ತಿರುವ ‘ಫ್ಯಾಮಿನ್ ಮ್ಯಾನ್ 2’ ದೃಶ್ಯವೊಂದು ಇದೀಗ ಭಾರೀ ಸುದ್ದಿಯಲ್ಲಿದೆ. ಈ ಚಿತ್ರದಲ್ಲಿ ಅಭಿನಯಿಸಿದ ಮನೋಜ್ ಬಾಜ್ಪಾಯಿ ಅವರ ಶ್ರೀಕಾಂತ್ ತಿವಾರಿ ಎಂಬ ಪಾತ್ರದ ದೃಶ್ಯವನ್ನು ಕೇಂದ್ರ ಸರ್ಕಾರ ಹಂಚಿಕೊಂಡಿದ್ದು, ಕೊವಿಡ್-19 ಕುರಿತಾಗಿ ಜನರಲ್ಲಿ ಇನ್ನಷ್ಟು ಜಾಗೃತಿ ಮೂಡಿಸುವ ಪ್ರಯತ್ನ ಮಾಡಿದೆ.
ಸಾಮಾಜಿಕ ಜಾಲತಾಣದ ಮೂಲಕ ಕೊವಿಡ್ ನಿಯಂತ್ರಣಕ್ಕೆ ಕುರಿತಂತೆ ಜನರಿಗೆ ತಿಳಿಹೇಳುವ ಕುರಿತಾಗಿ ಕೇಂದ್ರ ಸರ್ಕಾರ ಟ್ವೀಟ್ ಮಾಡಿದೆ. ಇತ್ತೀಚೆಗೆ ಹಂಚಿಕೊಂಡ ಪೋಸ್ಟ್ವೊಂದರಲ್ಲಿ, ಎರಡೂ ಡೋಸ್ ಲಸಿಕೆ ಪಡೆದ ಬಳಿಕವೂ ಕೊವಿಡ್ ಕುರಿತಾಗಿ ನಿರ್ಲಕ್ಷ್ಯ ಬೇಡ. ನಿಯಂತ್ರಣಕ್ಕೆ ಜಾರಿಗೆ ತಂದ ಕೆಲವು ನಿರ್ಬಂಧಗಳನ್ನು ಪಾಲಿಸಲೇ ಬೇಕು ಎಂಬ ಎಚ್ಚರಿಕೆಯ ಮಾತಿನ ಸಾರ ದೃಶ್ಯದಲ್ಲಿ ಕಾಣಿಸುತ್ತಿದೆ.
‘ಎರಡೂ ಡೋಸ್ ಲಸಿಕೆ ಪಡೆದ ಬಳಿಕವೂ ಶ್ರೀಕಾಂತ್ ತಿವಾರಿ ಮುಖಗವಸನ್ನು ಧರಿಸಿದ್ದಾರೆ ಮತ್ತು ದೈಹಿಕ ಅಂತರವನ್ನು ಕಾಯ್ದುಕೊಳ್ಳುತ್ತಿದ್ದಾರೆ’ ಎಂಬ ಶೀರ್ಷಿಕೆಯೊಂದಿಗೆ ಪೋಸ್ಟ್ ಹಂಚಿಕೊಳ್ಳಲಾಗಿದೆ. ಲಸಿಕ ಪಡೆದ ಬಳಿಕವೂ ಪ್ರತಿಕ್ರಿಯೆ ಹೀಗಿರಲಿ ಎಂದು ದೃಶ್ಯ ಹೇಳುತ್ತಿದೆ.
?Even after getting both the doses, Srikant wears a mask & maintains physical distance.
✅ Follow #COVIDAppropriateBehaviour even after getting #vaccinated.
➡️ Wear a #Mask
➡️ Wash/Sanitize hands
➡️ Maintain physical distancing#We4Vaccine @BajpayeeManoj pic.twitter.com/7DF8OZs79I— #IndiaFightsCorona (@COVIDNewsByMIB) June 14, 2021
ಮೈಕ್ರೋಬ್ಲಾಗಿಂಗ್ ವೆಬ್ಸೈಟ್ನಲ್ಲಿ ಸಚಿವಾಲಯ ಹಂಚಿಕೊಂಡ ಪೋಸ್ಟ್ ನೋಡಿದ ನೆಟ್ಟಿಗರು ಸರ್ಕಾರಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕೊವಿಡ್-19 ಸೋಂಕಿನ ಕುರಿತಾಗಿ ಜಾಗರೂಕರಾಗಿರಲು ಜನರನ್ನು ಪ್ರೋತ್ಸಾಹಿಸಿದ ಈ ಪ್ರಯತ್ನವನ್ನು ಶ್ಲಾಘಿಸಿದ್ದಾರೆ.
ಇದನ್ನೂ ಓದಿ:
Samantha Akkineni: ‘ದಿ ಫ್ಯಾಮಿಲಿ ಮ್ಯಾನ್ 2’ಗಾಗಿ ಸಮಂತಾ, ಮನೋಜ್ ಬಾಜಪೇಯಿ ಪಡೆದ ಸಂಭಾವನೆ ಎಷ್ಟು?
‘ದಿ ಫ್ಯಾಮಿಲಿ ಮ್ಯಾನ್ 3’ ಕಥೆ ಬಹಿರಂಗ; ನಿರ್ದೇಶಕರು ಬಾಯ್ಬಿಟ್ಟ ಸೀಕ್ರೆಟ್ ಇಲ್ಲಿದೆ
Published On - 12:26 pm, Wed, 16 June 21