Viral Video: ಸೌಮ್ಯ ಸ್ವಭಾವದವರು ಹೀಗೆ ಘೀಳಿಡುತ್ತಾ ಕಾದಾಟಕ್ಕಿಳಿದಿದ್ದೇಕೆ?

Elephant : ಆನೆಗಳು ಬಲವಾಗಿ ಬಾಲವನ್ನು ಅಲ್ಲಾಡಿಸುತ್ತಿವೆ ಎಂದರೆ ಅವುಗಳ ನಡುವಿನ ಸಂಘರ್ಷ ಅತ್ಯಂತ ಪ್ರಬಲವಾಗಿದೆ. ಇತರೇ ಆನೆಗಳು ಅವುಗಳ ಬಳಿ ಸುಳಿಯಬಾರದು ಎಂದು. ಅಷ್ಟಕ್ಕೂ ಯಾಕೆ ಇಷ್ಟೊಂದು ಭಯಂಕರ ಕಾದಾಟ?

Viral Video: ಸೌಮ್ಯ ಸ್ವಭಾವದವರು ಹೀಗೆ ಘೀಳಿಡುತ್ತಾ ಕಾದಾಟಕ್ಕಿಳಿದಿದ್ದೇಕೆ?
ಆನೆಗಳ ಕಾದಾಟ
Edited By:

Updated on: May 17, 2023 | 12:36 PM

Elephants : ಈ ದೈತ್ಯದೇಹಿ ಎಷ್ಟು ಸೌಮ್ಯ ಮತ್ತು ಸೂಕ್ಷ್ಮವೋ ಅಷ್ಟೇ ಬಲಶಾಲಿಯೂ. ಕಾದಾಟಕ್ಕೆ ನಿಂತರೆ  ಅಷ್ಟೇ! ಈ ಎರಡೂ ಆನೆಗಳಿಗೆ ಅದ್ಯಾಕೆ ಕೋಪ ಬಂದಿದೆಯೋ, ಹೀಗೆ ಸೊಂಡಲಿನೊಳಗೆ ಸೊಂಡಿಲು ಬೆಸೆದು ಘೀಳಿಡುತ್ತ ಗುದ್ದಾಡುವುದಕ್ಕೆ ಕಾರಣವೇನೋ ತಿಳಿಯದು. ದಟ್ಟಕಾಡಿನ ಮಧ್ಯೆ ಸೀಳಿಕೊಂಡು ಹೋಗಿರುವ ರಸ್ತೆಯ ಮೇಲೆ ಇವೆರಡೂ ಹೀಗೆ ಜಗಳಕ್ಕಿಳಿದಿವೆ. ಈ ವಿಡಿಯೋ ಅನ್ನು ಐಎಫ್​ಎಸ್ ಅಧಿಕಾರಿ ಸುಸಾಂತ ನಂದಾ ಟ್ವೀಟ್ ಮಾಡಿದ್ದಾರೆ.

ಈ ವಿಡಿಯೋ ಅನ್ನು ಎಲ್ಲಿ ಚಿತ್ರೀಕರಿಸಲಾಗಿದೆ ಎಂದು ತಿಳಿದುಬಂದಿಲ್ಲ. ಆದರೆ ಈ ಎರಡೂ ಆನೆಗಳು ಹೀಗೆ ಇಷ್ಟೊಂದು ಆಕ್ರೋಶದಿಂದ ಗುದುಮುರಿಗೆ ಹಾಕುತ್ತಿರುವುದು ಯಾಕೋ? ನೆಟ್ಟಿಗರು ಅಚ್ಚರಿಯಿಂದ ಈ ವಿಡಿಯೋ ನೋಡುತ್ತಿದ್ದಾರೆ. ಇವು ಘೀಳಿಡುವ ರೀತಿ ಯಾರನ್ನೂ ಬೆಚ್ಚಿಬೀಳಿಸುವಂತಿದೆ. ಈ ವಿಡಿಯೋ ಅನ್ನು ಈತನಕ ಸುಮಾರು 37,000 ಜನರು ನೋಡಿದ್ದಾರೆ.

ಇದನ್ನೂ ಓದಿ : Viral Video: ಶಾರ್ಕ್ ಆಕ್ರಮಿಸಿದಾಗ! ಮುಂದೇನಾಯಿತು ನೋಡಿ ಈ ವಿಡಿಯೋ

ಈ ಭಯಂಕರ ವಿಡಿಯೋ ನೋಡಿದ ನೆಟ್ಟಿಗರು ಅನೇಕ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ. ಇವರು ಅತ್ಯಂತ ಮೃದು ಮತ್ತು ಸೌಮ್ಯ ಸ್ವಭಾವದವರು ಎಂದುಕೊಂಡಿದ್ದೆ. ಆದರೆ ಇವರೂ ಹೀಗೆ ಕಾಳಗಕ್ಕಿಳಿಯುತ್ತಾರೆಂದರೆ ಕಾರಣ ಇದ್ದಿರಲೇಬೇಕು ಎಂದು ಒಬ್ಬರು ಹೇಳಿದ್ದಾರೆ. ಅಬ್ಬಾ ಇವರಿಬ್ಬರ ಈ ಸಂಘರ್ಷ ನೋಡಿ ಮೈನವಿರೆದ್ದಿತು ಎಂದು ಮತ್ತೊಬ್ಬರು ಹೇಳಿದ್ದಾರೆ.

ಇದನ್ನೂ ಓದಿ : ಆನೆಗಳು ಭಯಂಕರ ಕಾದಾಟಕ್ಕಿಳಿದಿವೆ, ನೆಟ್ಟಿಗರು ಮಾತ್ರ ಇದು ಪ್ರೀತಿಯ ಆಟ ಎನ್ನುತ್ತಿದ್ದಾರೆ

ಎಷ್ಟೊಂದು ಬಲವಾಗಿ ಬಾಲವನ್ನು ಅಲ್ಲಾಡಿಸುತ್ತಿವೆ ನೋಡಿ. ಬಾಲವನ್ನು ತಿರುಗಿಸುತ್ತವೆ ಎಂದರೆ ಅವು ತಮ್ಮ ಪ್ರಾಬಲ್ಯವನ್ನು ಮೆರೆಯುವ ಸೂಚನೆ. ತಮ್ಮಿಂದ ಇತರೇ ಆನೆಗಳಿಗೆ ದೂರ ಇರುವಂತೆ ಅವು ಎಚ್ಚರಿಕೆ ನೀಡುತ್ತಿವೆ ಎಂದರ್ಥ ಎಂದು ಮಗದೊಬ್ಬರು ಪ್ರತಿಕ್ರಿಯಿಸಿದ್ದಾರೆ.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 12:34 pm, Wed, 17 May 23