ಬಟ್ಟೆ-ಬೂಟಿಗೆ ಹಾನಿಯಾಗದಂತೆ JCB ಹತ್ತಿದ ಯುವಕರಿಬ್ಬರು ಸಮತೋಲನ ತಪ್ಪಿ ಏನಾದರು ನೊಡಿ!

ವೈರಲ್ ವಿಡಿಯೋದಲ್ಲಿ ಇಬ್ಬರು ಯುವಕರು ಬುಲ್ಡೋಜರ್ ಮೇಲೆ ಕುಳಿತಿರುವುದು ಕಂಡುಬಂದಿದೆ. ಅವರು ನೋಡಲು ಚೆನ್ನಾಗಿ ಬಟ್ಟೆ ಬೂಟು ಧರಿಸಿದ್ದಾರೆ. ಬಹುಶಃ ನೋಡುತ್ತಿದ್ದರೆ ... ಅವರು ಕಚೇರಿಗೆ ಹೋಗುತ್ತಿದ್ದಾರೆ ಎಂದು ಭಾವಿಸುವಂತಿದೆ. ಆದರೆ, ಮಣ್ಣಿನ ಕಾಲುವೆ ಅವರ ದಾರಿಗೆ ಅಡ್ಡಿಯಾಗಿದೆ. ಅದನ್ನು ದಾಟಲು ಬುಲ್ಡೋಜರ್‌ನ ಸಹಾಯ ಪಡೆದಿದ್ದಾರೆ. ಅವರು ವೀಡಿಯೊದಲ್ಲಿ ಕಂಡುಬಂದಂತೆ ಬುಲ್ಡೋಜರ್‌ನಲ್ಲಿ ಕುಳಿತು ಸಾವಕಾಶವಾಗಿ ಇನ್ನೊಂದು ದಡಕ್ಕೆ ಕೊಂಡೊಯ್ಯುವ ಪ್ರಯಯತ್ನ ನಡೆದಿದೆ.

ಬಟ್ಟೆ-ಬೂಟಿಗೆ ಹಾನಿಯಾಗದಂತೆ JCB ಹತ್ತಿದ ಯುವಕರಿಬ್ಬರು ಸಮತೋಲನ ತಪ್ಪಿ ಏನಾದರು ನೊಡಿ!
ಬುಲ್ಡೋಜರ್ ಹತ್ತಿದ ಯುವಕರಿಬ್ಬರು ಸಮತೋಲನ ತಪ್ಪಿ ಏನಾದರು ನೊಡಿ!
Follow us
| Updated By: ಅಕ್ಷಯ್​ ಪಲ್ಲಮಜಲು​​

Updated on: Mar 29, 2024 | 5:37 PM

ಭಾರೀ ಮಳೆ ಮತ್ತು ಪ್ರವಾಹದಿಂದಾಗಿ ಜನಜೀವನ ಅಸ್ತವ್ಯಸ್ತವಾಗಿದೆ. ಎಲ್ಲಿ ನೋಡಿದರೂ ಮಳೆ ನೀರು, ಕೆಸರು ಶೇಖರಣೆಯಾಗಿ ಜನರು ಪರದಾಡುತ್ತಿದ್ದಾರೆ. ಪಟ್ಟಣ ಹಾಗೂ ನಗರ ಪ್ರದೇಶಗಳಲ್ಲಿ ರಸ್ತೆ, ಚರಂಡಿಗಳು ತುಂಬಿ ಹರಿಯುತ್ತಿವೆ. ಹಲವೆಡೆ ಪ್ರವಾಹದ ನೀರಿನಲ್ಲಿ ಬಿದ್ದು ಕೆಲವರು ಪ್ರಾಣ ಕಳೆದುಕೊಂಡ ಘಟನೆಗಳೂ ನಡೆದಿವೆ. ಇನ್ನು ಕೆಲವೆಡೆ ಮಕ್ಕಳು, ದೊಡ್ಡವರು ಮ್ಯಾನ್ ಹೋಲ್ ಗೆ ಬಿದ್ದು ದಾರಿ ತಪ್ಪಿದ ಘಟನೆಗಳನ್ನೂ ನೋಡಿದ್ದೇವೆ.. ಅಲ್ಲದೇ ಹಲವೆಡೆ ಸಾಕಷ್ಟು ಮಳೆ ಬಂದು, ಬಳಿಕ ಕೆಸರು ಹಾಗೆಯೇ ಉಳಿದುಕೊಂಡಿದೆ. ಕೆಸರಿನಲ್ಲಿ ಜಾರಿ ಬೀಳುವುದು ಸಹ ಸಾಮಾನ್ಯವಾಗಿದೆ. ತಪ್ಪಿ ಕೆಸರಿನ ಮೇಲೆ ಕಾಲಿಟ್ಟರೆ ಅಷ್ಟೇ.. ಜಾರಿದರೆ ಏನಾಗುತ್ತದೋ ಗೊತ್ತಿಲ್ಲ.. ಬಟ್ಟೆಯೂ ಕೆಸರುಮಯವಾಗುತ್ತದೆ. ಅದಕ್ಕೇ ಎಲ್ಲೇ ಕೆಸರು ಕಂಡರೂ ತಕ್ಷಣ ಜಾಗೃತರಾಗುತ್ತಾರೆ ಜನ. ಕೆಸರಿನಿಂದಾಗಿ ಸ್ಯಾಂಡಲ್ ಚಪ್ಪಲಿಗಳು ಮತ್ತು ಬೂಟುಗಳು ಹಾಳಾಗುತ್ತವೆ ಎಂದೂ ಜನ ಬೆಚ್ಚಿಬೀಳುತ್ತಾರೆ. ಅದಕ್ಕಾಗಿಯೇ ಜನರು ಶತಾಯಗತಾಯ ಮಣ್ಣಿನಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಇಲ್ಲಿದೆ ನೋಡಿ, ಕೆಸರಿನಿಂದ ತಪ್ಪಿಸಿಕೊಳ್ಳಲು ಯತ್ನಿಸಿದ ಇಬ್ಬರು ಯುವಕರು ಬುಲ್ಡೋಜರ್ ಅನ್ನು ಆಶ್ರಯಿಸಿದ್ದಾರೆ. ಅದರೆ ನಂತರ ಏನಾಯಿತು ಎಂಬುದನ್ನು ತೋರಿಸುವ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ವೈರಲ್ ವಿಡಿಯೋದಲ್ಲಿ ಇಬ್ಬರು ಯುವಕರು ಬುಲ್ಡೋಜರ್ ಮೇಲೆ ಕುಳಿತಿರುವುದು ಕಂಡುಬಂದಿದೆ. ಅವರು ನೋಡಲು ಚೆನ್ನಾಗಿ ಬಟ್ಟೆ ಬೂಟು ಧರಿಸಿದ್ದಾರೆ. ಬಹುಶಃ ನೋಡುತ್ತಿದ್ದರೆ … ಅವರು ಕಚೇರಿಗೆ ಹೋಗುತ್ತಿದ್ದಾರೆ ಎಂದು ಭಾವಿಸುವಂತಿದೆ. ಆದರೆ, ಮಣ್ಣಿನ ಕಾಲುವೆ ಅವರ ದಾರಿಗೆ ಅಡ್ಡಿಯಾಗಿದೆ. ಅದನ್ನು ದಾಟಲು ಬುಲ್ಡೋಜರ್‌ನ ಸಹಾಯ ಪಡೆದಿದ್ದಾರೆ. ಅವರು ವೀಡಿಯೊದಲ್ಲಿ ಕಂಡುಬಂದಂತೆ ಬುಲ್ಡೋಜರ್‌ನಲ್ಲಿ ಕುಳಿತು ಸಾವಕಾಶವಾಗಿ ಇನ್ನೊಂದು ದಡಕ್ಕೆ ಕೊಂಡೊಯ್ಯುವ ಪ್ರಯಯತ್ನ ನಡೆದಿದೆ. ಇನ್ನೇನು ಆ ಕಡೆಯ ದಡ ತಲುಪಬೆಕು ಅಷ್ಟರಲ್ಲಿ ಅನಿರೀಕ್ಷಿತ ದೃಶ್ಯ ಕಂಡುಬಂದಿದೆ. ಎಲ್ಲ ಉಲ್ಟಾಪಲ್ಟಾ ಆಗಿ, ಅವರಿಬ್ಬರು ಹಿಂದಕ್ಕೆ ಬಿದ್ದಿದ್ದಾರೆ.

ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ಯುವಕರಿಬ್ಬರೂ ಕೆಸರಿನಲ್ಲಿ ಬಿದ್ದಿದ್ದಾರೆ. ಬಹುಶಃ ಅವರು ತಮ್ಮ ಬಟ್ಟೆ ಮತ್ತು ಶೂ-ಚಪ್ಪಲಿಗಳನ್ನು ಹಾನಿಗೊಳಗಾಗದಂತೆ ಇರಿಸಿಕೊಳ್ಳಲು ಪ್ರಯತ್ನಿಸಿದ್ದಾರೆ ಅನ್ನಿಸುತ್ತದೆ. ಆದರೆ ಅದಕ್ಕೆ ವ್ಯತಿರಿಕ್ತವಾಗಿ ಅವರು ಸಂಪೂರ್ಣವಾಗಿ ಕೆಸರಿನಲ್ಲಿ ಮುಳುಗಬೇಕಾದ ಪರಿಸ್ಥಿತಿ ಅನುಭವಿಸಿದ್ದಾರೆ. ಕೆಸರಿನಲ್ಲಿ ಒದ್ದೆಯಾದ ನಂತರ ಆ ಇಬ್ಬರೂ ಹೇಗೋ ಎದ್ದು ಕೆಸರಿನಿಂದ ಹೊರ ಬಂದರು. ಇಬ್ಬರು ಯುವಕರ ಈ ಅಸಹಾಯಕತೆ 22 ಸೆಕೆಂಡ್ ಅವಧಿಯ ವಿಡಿಯೋದಲ್ಲಿ ಕಾಣಬಹುದು. ಇದುವರೆಗೆ ಸಾವಿರಾರು ಮಂದಿ ಈ ವಿಡಿಯೋವನ್ನು ವೀಕ್ಷಿಸಿದ್ದಾರೆ. ಈ ವಿಡಿಯೋಗೆ ಕೆಲವರು ತಮಾಷೆಯ ಕಾಮೆಂಟ್ ಕೂಡ ಮಾಡಿದ್ದಾರೆ. ಬುಲ್ಡೋಜರ್‌ಗಳನ್ನು ದುರುಪಯೋಗಪಡಿಸಿಕೊಳ್ಳಬಾರದು ಎಂದು ವೀಡಿಯೊವನ್ನು ಹಂಚಿಕೊಂಡ ಬಳಕೆದಾರರು ಬರೆದಿದ್ದಾರೆ.

ನಾಗವಲ್ಲಿ ಮಿಂಚು ರಾಧಿಕಾ ಕಣ್ಣಲ್ಲಿ ಕಾಣಿಸಿತು: ರಮೇಶ್ ಅರವಿಂದ್
ನಾಗವಲ್ಲಿ ಮಿಂಚು ರಾಧಿಕಾ ಕಣ್ಣಲ್ಲಿ ಕಾಣಿಸಿತು: ರಮೇಶ್ ಅರವಿಂದ್
ಇಲ್ಲಿ ನಾನೇ ಅಭ್ಯರ್ಥಿ: ಅಚ್ಚರಿ ಹೇಳಿಕೆ ನೀಡಿದ ಡಿಸಿಎಂ ಡಿಕೆ ಶಿವಕುಮಾರ್​
ಇಲ್ಲಿ ನಾನೇ ಅಭ್ಯರ್ಥಿ: ಅಚ್ಚರಿ ಹೇಳಿಕೆ ನೀಡಿದ ಡಿಸಿಎಂ ಡಿಕೆ ಶಿವಕುಮಾರ್​
ಬಿಹಾರದಲ್ಲಿ ಪ್ರವಾಹ ಭೀತಿ; ನೂರಾರು ಹಳ್ಳಿಗಳಿಗೆ ನುಗ್ಗಿದ ಗಂಗಾ ನದಿ ನೀರು
ಬಿಹಾರದಲ್ಲಿ ಪ್ರವಾಹ ಭೀತಿ; ನೂರಾರು ಹಳ್ಳಿಗಳಿಗೆ ನುಗ್ಗಿದ ಗಂಗಾ ನದಿ ನೀರು
ಹಾಡಹಗಲೇ ಮೆಡಿಕಲ್ ಶಾಪ್​ಗೆ ನುಗ್ಗಿ ದರೋಡೆ ಮಾಡಿದ ಕಳ್ಳರು; ವಿಡಿಯೋ ವೈರಲ್
ಹಾಡಹಗಲೇ ಮೆಡಿಕಲ್ ಶಾಪ್​ಗೆ ನುಗ್ಗಿ ದರೋಡೆ ಮಾಡಿದ ಕಳ್ಳರು; ವಿಡಿಯೋ ವೈರಲ್
ರಾಮನಗರದಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿಗೆ ಕೌಂಟರ್ ಕೊಟ್ಟ ಡಿಕೆಶಿ
ರಾಮನಗರದಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿಗೆ ಕೌಂಟರ್ ಕೊಟ್ಟ ಡಿಕೆಶಿ
ಕಾರು ಡಿಕ್ಕಿ ಹೊಡೆದ ರಭಸಕ್ಕೆ ಫ್ಲೈಓವರ್ ಪಿಲ್ಲರ್ ಮೇಲೆ ಸಿಲುಕಿದ ಯುವತಿ
ಕಾರು ಡಿಕ್ಕಿ ಹೊಡೆದ ರಭಸಕ್ಕೆ ಫ್ಲೈಓವರ್ ಪಿಲ್ಲರ್ ಮೇಲೆ ಸಿಲುಕಿದ ಯುವತಿ
ಬೀದರ್​​ನ ಐತಿಹಾಸಿಕ ಕೋಟೆ ಆವರಣದಲ್ಲಿ ಏರ್ ಶೋ ಪ್ರದರ್ಶನ
ಬೀದರ್​​ನ ಐತಿಹಾಸಿಕ ಕೋಟೆ ಆವರಣದಲ್ಲಿ ಏರ್ ಶೋ ಪ್ರದರ್ಶನ
ಬಾಂಗ್ಲಾ ತಂಡದ ಫೀಲ್ಡಿಂಗ್ ಸೆಟ್ ಮಾಡಿದ ರಿಷಭ್ ಪಂತ್
ಬಾಂಗ್ಲಾ ತಂಡದ ಫೀಲ್ಡಿಂಗ್ ಸೆಟ್ ಮಾಡಿದ ರಿಷಭ್ ಪಂತ್
ದರ್ಬಾರ್ ಗಲ್ಲಿಯಲ್ಲಿ ರಸ್ತೆಯುದ್ದಕ್ಕೂ ಪ್ಯಾಲೆಸ್ತೀನ್ ಧ್ವಜ ಶಾಮಿಯಾನ
ದರ್ಬಾರ್ ಗಲ್ಲಿಯಲ್ಲಿ ರಸ್ತೆಯುದ್ದಕ್ಕೂ ಪ್ಯಾಲೆಸ್ತೀನ್ ಧ್ವಜ ಶಾಮಿಯಾನ
ಚನ್ನಪಟ್ಟಣ: ಹೈಟೆಕ್ ಕ್ರೀಡಾಂಗಣ ನಿರ್ಮಾಣಕ್ಕೆ ಡಿಕೆಶಿ ಶಂಕುಸ್ಥಾಪನೆ
ಚನ್ನಪಟ್ಟಣ: ಹೈಟೆಕ್ ಕ್ರೀಡಾಂಗಣ ನಿರ್ಮಾಣಕ್ಕೆ ಡಿಕೆಶಿ ಶಂಕುಸ್ಥಾಪನೆ