ಸಾಮಾನ್ಯವಾಗಿ ನ್ಯಾಯಮೂರ್ತಿಗಳು ಅಥವಾ ನ್ಯಾಯಾಧೀಶರು ಎಂದರೆ ಎಲ್ಲರಿಗೂ ಗೌರವ. ತಪ್ಪಿತಸ್ಥರಿಗೆ ಶಿಕ್ಷೆ ನೀಡುವ, ತಪ್ಪಿಲ್ಲದವರನ್ನು ರಕ್ಷಿಸುವ ಅಧಿಕಾರ ಅವರಿಗೊಂದೇ ಇದೆ ಎಂಬುದು ನಂಬಿಕೆ. ಆದರೆ ಅವರೇ ತಪ್ಪು ಮಾಡಿದರೆ ಜನರು ಒಂದು ಸಲ ಕಸಿವಿಸಿಗೊಳ್ಳುವುದು ಸಹಜ. ಇದು ಸುಮಾರು 45 ವರ್ಷಗಳ ಹಿಂದಿನ ಕತೆ, ನ್ಯಾಯದಾನ ಮಾಡಬೇಕಾದ ನ್ಯಾಯಾಧೀಶರಿಗೆ ಗಲ್ಲು ಶಿಕ್ಷೆ ವಿಧಿಸಿದ ಸಮಯವದು.
ಈ ನ್ಯಾಯಾಧೀಶರ ಹೆಸರು ಉಪೇಂದ್ರನಾಥ್ ರಾಜ್ಖೋವಾ, ಅವರು ಅಸ್ಸಾಂನ ದುಬ್ರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾಗಿ ನೇಮಕಗೊಂಡಿದ್ದರು. ಎಲ್ಲಾ ನ್ಯಾಯಾಧೀಶರಂತೆ ಅವರಿಗೂ ಕೂಡ ಸರ್ಕಾರಿ ನಿವಾಸವಿತ್ತು. ರಾಜ್ಖೋವಾ ಅವರು 1970ರಲ್ಲಿ ನಿವೃತ್ತರಾದರು. ಆದರೆ ಸರ್ಕಾರಿ ಬಂಗಲೆಯನ್ನು ಖಾಲಿ ಮಾಡಿರಲಿಲ್ಲ. ಅದೇ ಬಂಗಲೆಯಲ್ಲಿ ಪತ್ನಿ ಹಾಗೂ ಮೂವರು ಪುತ್ರಿಯರೊಂದಿಗೆ ವಾಸವಿದ್ದರು. ಒಂದು ದಿನ ಇದ್ದಕ್ಕಿದ್ದಂತೆ ಹೆಂಡತಿ ಮಕ್ಕಳೆಲ್ಲಾ ಕಾಣೆಯಾದರು. ರಾಜ್ಖೋವಾ ಅವರ ಕುಟುಂಬದ ಬಗ್ಗೆ ಸಂಬಂಧಿಕರು ಕೇಳಿದಾಗಲೆಲ್ಲಾ ಏನೋ ಒಂದು ಸಬೂಬು ನೀಡಿ ತಪ್ಪಿಸಿಕೊಳ್ಳುತ್ತಿದ್ದರು.
ಆದರೆ ಏಪ್ರಿಲ್ನಲ್ಲಿ ಇದ್ದಕ್ಕಿಂದ್ದಂತೆ ಸರ್ಕಾರಿ ಬಂಗಲೆಯನ್ನು ಖಾಲಿ ಮಾಡಿದರು, ಅವರ ಬದಲು ಆ ಬಂಗಲೆಯಲ್ಲಿ ಬೇರೆ ನ್ಯಾಯಾಧೀಶರು ಬಂದು ಉಳಿದರು.
ಸಿಲಿಗುರಿಯ ಹೋಟೆಲ್ನಲ್ಲಿ ತಂಗಿದ್ದ ನ್ಯಾಯಾಧೀಶರು
ರಾಜ್ಖೋವಾ ಬಗ್ಗೆ ಯಾರಿಗೂ ಯಾವುದೇ ಮಾಹಿತಿ ಇರಲಿಲ್ಲ, ರಾಜ್ಖೋವಾ ಅವರ ಭಾವ ಪೊಲೀಸ್ ಇಲಾಖೆಯಲ್ಲಿ ಇದ್ದ ಕಾರಣ ತನ್ನ ಸಹೋದರಿ ಹಾಗೂ ಸೊಸೆಯಂದಿರನ್ನು ಸಂಪರ್ಕಿಸಲು ಸಾಧ್ಯವಾಗದಿದ್ದಾಗ ತನಿಖೆ ಆರಂಭಿಸಿದ್ದಾರೆ.
ಪೊಲೀಸರು ಹೋಟೆಲ್ ಮೇಲೆ ದಾಳಿ ನಡೆಸಿದರು, ಆತ ಹೆಂಡತಿ ಹಾಗೂ ಮಕ್ಕಳನ್ನು ಕೊಂದಿರುವುದಾಗಿ ಒಪ್ಪಿಕೊಂಡಿದ್ದರು.
ರಾಜ್ಖೋವಾರನ್ನು ಬಂಧಿಸಲಾಯಿತು.
ಮತ್ತಷ್ಟು ಓದಿ: ಎರಡು ಕೊಲೆ ಮಾಡಿದ್ದ ಮೂವರು ಅಪರಾಧಿಗಳಿಗೆ ಗಲ್ಲು ಶಿಕ್ಷೆ ಪ್ರಕಟ ಮಾಡಿದ ಚಿಕ್ಕೋಡಿ ನ್ಯಾಯಾಲಯ
ವಿಚಾರಣೆ ಸುಮಾರು ಒಂದು ವರ್ಷಗಳ ಕಾಲ ಮುಂದುವರೆಯಿತು, ಕೆಳ ನ್ಯಾಯಾಲಯ ರಾಜ್ಖೋವಾ ಅವರಿಗೆ ಮರಣದಂಡನೆ ಶಿಕ್ಷೆ ವಿಧಿಸಿತು. ಹೈಕೋರ್ಟ್ ಕೂಡ ಕೆಳ ನ್ಯಾಯಾಲಯದ ತೀರ್ಪನ್ನೇ ಎತ್ತಿ ಹಿಡಿಯಿತು. ಬಳಿಕ ಸುಪ್ರೀಂಕೋರ್ಟ್ಗೆ ಹೋದರೂ ಕೂಡ ಅವರ ಅರ್ಜಿಯನ್ನು ತಿರಸ್ಕರಿಸಲಾಯಿತು. 1976ರ ಫೆಬ್ರವರಿ 14 ರಂದು ಜೋರ್ಹತ್ ಜೈಲಿನಲ್ಲಿ ರಾಜ್ಖೋವಾ ಅವರನ್ನು ಗಲ್ಲಿಗೇರಿಸಲಾಯಿತು. ಆದರೆ ಆತ ಪತ್ನಿ ಹಾಗೂ ಪುತ್ರಿಯರನ್ನು ಕೊಂದಿದ್ದೇಕೆ ಎನ್ನುವುದು ಮಾತ್ರ ತಿಳಿದುಬಂದಿಲ್ಲ.
ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ