Viral : ರೀಲ್ಸ್ ಗಾಗಿ ಕಾರಿನ ಮೇಲೆ ಕುಳಿತು ಅಪಾಯಕಾರಿ ಸ್ಟಂಟ್ ಮಾಡಿದ ಯುವಕರು, ವಿಡಿಯೋ ವೈರಲ್
ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುವ ಕೆಲ ವಿಡಿಯೋಗಳು ಎದೆಯಲ್ಲಿ ನಡುಕ ಹುಟ್ಟಿಸುತ್ತವೆ. ಇದೀಗ ಇಂತಹದ್ದೆ ವಿಡಿಯೋವೊಂದು ವೈರಲ್ ಆಗಿದ್ದು, ಕಾರಿನ ಮೇಲೆ ಕುಳಿತು ಯುವಕರು ಅಪಾಯಕಾರಿ ಸ್ಟಂಟ್ ಮಾಡಿದ್ದಾರೆ. ವಿಡಿಯೋ ವೈರಲ್ ಆಗುತ್ತಿದ್ದಂತೆ ಯುವಕರ ಈ ಹುಚ್ಚಾಟಕ್ಕೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿ ನಾನಾ ರೀತಿಯ ಕಾಮೆಂಟ್ ಮಾಡಿದ್ದಾರೆ.

ಈಗಿನ ಯುವಕ ಯುವತಿಯರಿಗೆ ಸೋಶಿಯಲ್ ಮೀಡಿಯಾದಲ್ಲಿ ಫೇಮಸ್ ಆಗುವ ಹುಚ್ಚು. ಹೀಗಾಗಿ ಫೇಮಸ್ ಆಗುವ ಸಲುವಾಗಿ ರೀಲ್ಸ್ ಮಾಡುವವರು ಹಲವಾರು ಸಾಹಸಗಳನ್ನು ಮಾಡುತ್ತಿರುತ್ತಾರೆ. ಅದರಲ್ಲಿ ಚಿತ್ರ ವಿಚಿತ್ರ ಸಾಹಸಗಳನ್ನು ಮಾಡಲು ಹೋಗಿ ಪ್ರಾಣಕ್ಕೆ ಆಪತ್ತು ಕುತ್ತು ತರುವವರು ಇದ್ದಾರೆ. ಹೀಗೆ ರೀಲ್ಸ್ ಮಾಡಲು ಹೋಗಿ ಅಪಾಯ ಮೈ ಮೇಲೆ ಎಳೆದುಕೊಂಡವರ ಸುದ್ದಿಗಳು ಆಗಾಗ್ಗೆ ಕೇಳಿ ಬರುತ್ತಿರುತ್ತವೆ. ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ಯುವಕರ ಗುಂಪೊಂದು ಕಾರಿನ ಮೇಲೆ ಕುಳಿತುಕೊಳ್ಳುವ ಮೂಲಕ ಅಪಾಯಕಾರಿ ಸ್ಟಂಟ್ ಮಾಡಿದೆ. ಉತ್ತರ ಪ್ರದೇಶದ ಸಹರಾನ್‌ಪುರದಲ್ಲಿ ನಡೆದಿದೆ ಎನ್ನಲಾಗಿದೆ.
ಯುವಕರು ಇನ್‌ಸ್ಟಾಗ್ರಾಮ್ ರೀಲ್ಸ್‌ಗಾಗಿ ಚಲಿಸುವ ಕಾರಿನ ಛಾವಣಿಯ ಮೇಲೆ ಕುಳಿತಿರುವುದು ವಿಡಿಯೋದಲ್ಲಿ ಕಾಣಬಹುದು. ಪ್ರಾರಂಭದಲ್ಲಿ ಬೈಕ್ ಗಳು ಯುವಕರನ್ನು ಸುತ್ತುವರೆಯುತ್ತಿದ್ದಂತೆ ಈ ಯುವಕರ ತಂಡವು ಕಾರಿನ ಛಾವಣಿಯ ಮೇಲೆ ಕುಳಿತ್ತಿದ್ದಾರೆ. ಕಾರು ಮುಂದೆ ಚಲಿಸುವುದನ್ನು ನೋಡಬಹುದು. ಈ ಅಪಾಯಕಾರಿ ವಿಡಿಯೋವನ್ನು ಭಾರತ್ ಸಮಾಚಾರ್ ಹೆಸರಿನ ಖಾತೆ ಯಲ್ಲಿ ಶೇರ್ ಮಾಡಿಕೊಳ್ಳಲಾಗಿದೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
सहारनपुर: युवकों का कार की छत पर खड़े होकर स्टंट करते वीडियो वायरल
🚗 “दर्जन भर बाइक भी वायरल वीडियो में नजर आ रही” 📍 “रामपुर मनिहारान क्षेत्र में दिल्ली यमुनोत्री हाईवे पर स्टंटबाजी”#Saharanpur #StuntBazi #DangerousDriving #ViralVideo @saharanpurpol pic.twitter.com/AVAgT3zmqc
— भारत समाचार | Bharat Samachar (@bstvlive) February 1, 2025
ಇದನ್ನೂ ಓದಿ: ಹುಲಿಯಂತೆ ಕಾಣಲು ನಾಯಿಗಳಿಗೆ ಬಣ್ಣ ಬಳಿದ ಚೀನಾದ ಮೃಗಾಲಯ; ವಿಡಿಯೋ ವೈರಲ್
ರಾಂಪುರ ಮಣಿಹರನ್ ಪ್ರದೇಶದ ದೆಹಲಿ ಗೊಂಗ್ಲ್ ಯಮುನೋತ್ರಿ ಹೆದ್ದಾರಿಯಲ್ಲಿ ಈ ಘಟನೆ ನಡೆದಿದೆ. ಈ ಯುವಕರ ವಿರುದ್ಧ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಸೂಚಿಸಲಾಗಿದೆ ಎಂದು ಸಹರಾನ್‌ಪುರ ಪೊಲೀಸರು ತಿಳಿಸಿದ್ದಾರೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಉತ್ತರ ಪ್ರದೇಶ ಪೊಲೀಸರು ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ. ಈ ವಿಡಿಯೋಗೆ ನೆಟ್ಟಿಗರು ಕಾಮೆಂಟ್ ಗಳ ಸುರಿಮಳೆಗೈದಿದ್ದು, ಬಳಕೆದಾರರೊಬ್ಬರು, ಪ್ರಾಣದ ಜೊತೆಗೆ ಚೆಲ್ಲಾಟ ಆಡಬೇಡಿ ಎಂದಿದ್ದಾರೆ. ಇನ್ನೊಬ್ಬ ಬಳಕೆದಾರರು, ಈ ಯುವಕರ ವಿರುದ್ಧ ತಕ್ಷಣವೇ ಕ್ರಮ ಕೈಗೊಳ್ಳಿ ಎಂದು ಕಾಮೆಂಟ್ ನಲ್ಲಿ ತಿಳಿಸಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ