ಚಲಿಸುತ್ತಿದ್ದ ರೈಲಿನಿಂದ ಆಯತಪ್ಪಿ ಬೀಳುತ್ತಿದ್ದ ಪ್ರಯಾಣಿಕನ ಪ್ರಾಣ ಉಳಿಸಿದ ಆರ್‌ಪಿಎಫ್ ಸಿಬ್ಬಂದಿ

ರೈಲಿನಲ್ಲಿ ಪ್ರಯಾಣಿಸುವಾಗ ಅಥವಾ ರೈಲು ಹತ್ತುವಾಗ ಎಷ್ಟು ಜಾಗರೂಕರಾಗಿದ್ದರೂ ಸಾಲುವುದಿಲ್ಲ. ಹೌದು ಈ ವೇಳೆ ಸ್ವಲ್ಪ ಎಚ್ಚರ ತಪ್ಪಿದ್ರೂ ಅವಘಡಗಳು ಸಂಭವಿಸುತ್ತದೆ. ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ಚಲಿಸುತ್ತಿದ್ದ ರೈಲಿನಿಂದ ಪ್ರಯಾಣಿಕನೋರ್ವ ಕೆಳಗೆ ಬೀಳುತ್ತಿದ್ದಂತೆ ಅಲ್ಲೇ ಇದ್ದರೈಲ್ವೆ ರಕ್ಷಣಾ ಪಡೆಯ ಕಾನ್ ಸ್ಟೇಬಲ್ ರಕ್ಷಿಸಿದ್ದಾರೆ. ಈ ವಿಡಿಯೋ ನೋಡಿದ ನೆಟ್ಟಿಗರು ಕಾನ್ ಸ್ಟೇಬಲ್ ಮಾಡಿದ ಒಳ್ಳೆಯ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಚಲಿಸುತ್ತಿದ್ದ ರೈಲಿನಿಂದ ಆಯತಪ್ಪಿ ಬೀಳುತ್ತಿದ್ದ ಪ್ರಯಾಣಿಕನ ಪ್ರಾಣ ಉಳಿಸಿದ  ಆರ್‌ಪಿಎಫ್ ಸಿಬ್ಬಂದಿ
ವೈರಲ್ ವಿಡಿಯೋ
Image Credit source: Twitter

Updated on: Apr 25, 2025 | 4:07 PM

ಉತ್ತರ ಪ್ರದೇಶ, ಏ 25: ಹೆಚ್ಚಿನವರು ದೂರದ ಊರುಗಳಿಗೆ ಪ್ರಯಾಣಿಸಲು ರೈಲ್ವೆ (railway) ಸಾರಿಗೆಯನ್ನೇ ಅವಲಂಬಿಸಿಕೊಂಡಿರುತ್ತಾರೆ. ಆದರೆ ಈ ರೈಲ್ವೆ ಪ್ರಯಾಣ ಮಾಡುವ ಜಾಗರೂಕರಾಗಿರುವುದು ಮುಖ್ಯ. ಕೆಲವು ಯುವಕರು ರೈಲ್ವೆ ಪ್ರಯಾಣದ ವೇಳೆ ಹುಚ್ಚು ಸಾಹಸ ಗಳನ್ನು ಮಾಡಿ ಅಪಾಯವನ್ನು ಮೈ ಮೇಲೆ ಎಳೆದುಕೊಳ್ಳುವುದಿದೆ. ಇನ್ನು ಕೆಲವೊಮ್ಮೆ ರೈಲು ಹತ್ತಲು ಹೋಗಿ ಅನಾಹುತಗಳು ಸಂಭವಿಸಿದ್ದು ಇದೆ. ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ಚಲಿಸುತ್ತಿದ್ದ ರೈಲಿನಿಂದ ವ್ಯಕ್ತಿಯೊಬ್ಬರು ಕೆಳಗೆ ಬೀಳುತ್ತಿದ್ದಂತೆ ರೈಲ್ವೆ ರಕ್ಷಣಾ ಪಡೆಯ ಕಾನ್‌ಸ್ಟೇಬಲ್ ಹೇಮೇಂದ್ರ ಸಿಂಗ್ (RPF constable hemendra singh) ಅವರು ಪ್ರಯಾಣಿಕನನ್ನು ರಕ್ಷಿಸಿದ್ದಾರೆ. ಈ ಘಟನೆಯೂ ಉತ್ತರ ಪ್ರದೇಶ (uttar pradesh) ದ ಅಲಿಗಢ ರೈಲು ನಿಲ್ದಾಣ (aligarh railway station) ದಲ್ಲಿ ನಡೆದಿದೆ. ಈ ಘಟನೆಯ ದೃಶ್ಯವು ಸಿಸಿಟಿವಿಯಲ್ಲಿ ಸೆರೆಯಾಗಿದೆ.

Priya singh ಹೆಸರಿನ ಖಾತೆ ಯಲ್ಲಿ ಈ ವಿಡಿಯೋವನ್ನು ಶೇರ್ ಮಾಡಲಾಗಿದ್ದು, ಈ ವಿಡಿಯೋದಲ್ಲಿ ರೈಲ್ವೆ ನಿಲ್ದಾಣದಲ್ಲಿ ರೈಲು ನಿಧಾನವಾಗಿ ಚಲಿಸುತ್ತಿದೆ. ಈ ವೇಳೆಯಲ್ಲಿ ಚಲಿಸುತ್ತಿದ್ದ ರೈಲಿನಿಂದ ಪ್ರಯಾಣಿಕನೊಬ್ಬನು ಕೆಳಗೆ ಬಿದ್ದಿದ್ದು, ಅಲ್ಲೇ ಇದ್ದ ಕಾನ್ಸ್ಟೇಬಲ್ ಓಡಿ ಹೋಗಿ ಆ ವ್ಯಕ್ತಿಯನ್ನು ಪ್ರಾಣಾಪಾಯದಿಂದ ಪಾರು ಮಾಡಿದ್ದಾರೆ.

ಇದನ್ನೂ ಓದಿ
ಚೀನಾದ ಈ ರೆಸ್ಟೋರೆಂಟ್ ನಲ್ಲಿ ಆನೆ ಲದ್ದಿಯಿಂದ ತಯಾರಾಗುತ್ತೆ ಸ್ವೀಟ್
ಟ್ರಾಫಿಕ್ ಕ್ಲಿಯರ್ ಮಾಡಿ ಆ್ಯಂಬುಲೆನ್ಸ್ ಹೋಗಲು ದಾರಿ ಮಾಡಿಕೊಟ್ಟ ಮದುಮಗ
ನನಗೆ ಇಷ್ಟ ಇಲ್ಲದಿದ್ರೂ ಅಮ್ಮ ಹೋಮ್ ವರ್ಕ್ ಮಾಡಿಸ್ತಾಳೆ, ಈ ವಿಡಿಯೋ ನೋಡಿ
ಏಳು ವರ್ಷಗಳ ಬಳಿಕ ಸ್ನೇಹಿತರಿಬ್ಬರ ಅನಿರೀಕ್ಷಿತ ಭೇಟಿಯ ಕ್ಷಣ ಇಲ್ಲಿದೆ ನೋಡಿ

ಇದನ್ನೂ ಓದಿ : Viral :ಫ್ರಿಡ್ಜ್​​​​ ಒಳಗೆ ಹೆಡೆಯೆತ್ತಿ ಕುಳಿತ ದೈತ್ಯಗಾತ್ರದ ನಾಗರಹಾವು, ವಿಡಿಯೋ ವೈರಲ್

ವೈರಲ್ ವಿಡಿಯೋ ಇಲ್ಲಿದೆ ನೋಡಿ

ಈ ವಿಡಿಯೋವನ್ನು ಏಪ್ರಿಲ್ 20 ರಂದು ಶೇರ್ ಮಾಡಿಕೊಳ್ಳಲಾಗಿದ್ದು, ಒಂದು ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು ಸೋಶಿಯಲ್ ಮೀಡಿಯಾ ಬಳಕೆದಾರರು ಕಾಮೆಂಟ್ ಮಾಡುವ ಮೂಲಕ ಕಾನ್ಸ್ಟೇಬಲ್ ಅವರ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಬಳಕೆದಾರರೊಬ್ಬರು, ರೈಲು ಚಲಿಸುವಾಗ ಬಾಗಿಲ ಬಳಿ ನಿಲ್ಲುವ ಕೆಲಸ ಮಾಡಬೇಡಿ, ಇದು ನಿಜಕ್ಕೂ ಅಪಾಯಕಾರಿ ಎಂದಿದ್ದಾರೆ. ಇನ್ನೊಬ್ಬರು, ‘ಪ್ರಯಾಣಿಕನು ಬೀಳುತ್ತಿದ್ದಂತೆ ರಕ್ಷಣೆಗೆ ಧಾವಿಸಿ ಪ್ರಾಣ ಉಳಿಸಿದ ವ್ಯಕ್ತಿಗೆ ನನ್ನದೊಂದು ಸೆಲ್ಯೂಟ್’ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊರ್ವ ಬಳಕೆದಾರರು, ರೈಲ್ವೆ ರಕ್ಷಣಾ ಪಡೆಯ ಕಾನ್‌ಸ್ಟೇಬಲ್ ಅವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ