Viral: ಸಮೋಸ ತರಲು ನಿರಾಕರಿಸಿದ ಪತಿ, ಕೋಪದಲ್ಲಿ ಥಳಿಸಿ ಹಲ್ಲೆಗೆ ಯತ್ನಿಸಿದ ಪತ್ನಿ

ಗಂಡ ಹೆಂಡಿರ ಜಗಳ ಉಂಡು ಮಲಗೋ ತನಕ ಎಂದು ಹೇಳುತ್ತಾರೆ. ಜಗಳವೇ ಇಲ್ಲದೇ ಯಾವ ಸಂಸಾರವು ಇಲ್ಲ. ಹೌದು, ಸಣ್ಣ ಪುಟ್ಟ ವಿಷಯಕ್ಕೆ ಜಗಳಗಳು ನಡೆಯುವುದು ಸರ್ವೇ ಸಾಮಾನ್ಯ. ಆದರೆ ಇಲ್ಲೊಬ್ಬಳು ತನ್ನ ಪತಿಯೂ ಸಮೋಸ ತರಲು ನಿರಾಕರಿಸಿದ ಎನ್ನುವ ಒಂದೇ ಒಂದು ಕಾರಣಕ್ಕೆ ಪತಿಗೆ ಥಳಿಸಿದ್ದಾಳೆ. ಹಾಗಾದ್ರೆ ಏನಿದು ಘಟನೆ? ಈ ಘಟನೆ ನಡೆದಿರುವುದು ಎಲ್ಲಿ? ಈ ಕುರಿತಾದ ಮಾಹಿತಿ ಇಲ್ಲಿದೆ.

Viral: ಸಮೋಸ ತರಲು ನಿರಾಕರಿಸಿದ ಪತಿ, ಕೋಪದಲ್ಲಿ ಥಳಿಸಿ ಹಲ್ಲೆಗೆ ಯತ್ನಿಸಿದ ಪತ್ನಿ
ವೈರಲ್‌ ವಿಡಿಯೋ
Image Credit source: Twitter

Updated on: Sep 05, 2025 | 4:13 PM

ಉತ್ತರ ಪ್ರದೇಶ, ಸೆಪ್ಟೆಂಬರ್ 05: ಪತಿ ಪತ್ನಿಯರ ನಡುವೆ ಸಣ್ಣ ಪುಟ್ಟ ಜಗಳಗಳು, ಮನಸ್ತಾಪಗಳು ಇದ್ದಿದ್ದೆ. ಭಿನ್ನಾಭಿಪ್ರಾಯ ಉಂಟಾದಾಗ ಪರಸ್ಪರ ಚರ್ಚಿಸಿ ಪರಿಹಾರವನ್ನು ಕಂಡು ಕೊಳ್ಳಬೇಕಾಗುತ್ತದೆ. ಆದರೆ ಇತ್ತೀಚೆಗಿನ ದಿನಗಳಲ್ಲಿ ಗಂಡ ಹೆಂಡಿರು ಜಗಳ ಮಾಡುವುದಕ್ಕೆ ಸಣ್ಣ ಸಣ್ಣ ಕಾರಣಗಳೇ ಸಾಕಾಗುತ್ತದೆ. ತಿಂಡಿ ತೆಗೆದುಕೊಂಡು ಹೋಗಲಿಲ್ಲ ಎಂದು ಸಿಟ್ಟಿನಿಂದ ಗಂಡನ ಜೊತೆಗೆ ಜಗಳಕ್ಕೆ ಇಳಿಯುವ ಹೆಂಡ್ತಿಯರು ಇದ್ದಾರೆ. ಇಲ್ಲೊಂದು ಕಡೆ ಇದೇ ರೀತಿಯಾಗಿದೆ. ಸಮೋಸ (Samosa) ತರಲು ಮರೆತ ಎನ್ನುವ ಕಾರಣಕ್ಕೆ ಪತ್ನಿಯೊಬ್ಬಳು ತನ್ನ ಪತಿಗೆ ಥಳಿಸಿ ಹಲ್ಲೆಗೆ ಮುಂದಾಗಿದ್ದಾಳೆ. ಈ ಘಟನೆಯೂ ಉತ್ತರ ಪ್ರದೇಶದ ಆನಂದಪುರದಲ್ಲಿ (Anandpur of Uttara Pradesh) ನಡೆದಿದೆ ಎನ್ನಲಾಗಿದೆ. ಈ ಕುರಿತಾದ ವಿಡಿಯೋ ಸಖತ್ ವೈರಲ್ ಆಗುತ್ತಿದೆ.

ಏನಿದು ಘಟನೆ?

ಇದನ್ನೂ ಓದಿ
ನೆರೆಮನೆಯ ಯುವಕನೊಂದಿಗೆ ಓಡಿಹೋದ ಒಂದೇ ಮನೆಯ ಸೊಸೆಯಂದಿರು
ಲವರ್​ ಜತೆ ಹೊರಟ ತಾಯಿಯನ್ನು ಪರಿ ಪರಿಯಾಗಿ ಬೇಡಿದ ಮಕ್ಕಳು
15 ದಿನ ಗಂಡನ ಜೊತೆ, 15 ದಿನ ಪ್ರೇಮಿ ಜೊತೆ; ಈ ಮಹಿಳೆಯ ಶೋಕಿಗೆ ಊರವರು ಶಾಕ್!
ಚಲಿಸುತ್ತಿದ್ದ ಬೈಕ್‌ನಲ್ಲಿ ಮೈ ಮರೆತ ಜೋಡಿಹಕ್ಕಿಗಳು

ಕಳೆದ ಕೆಲವು ವರ್ಷಗಳ ಹಿಂದೆಯಷ್ಟೇ ಶಿವಂ  ಎಂಬಾತ ಸಂಗೀತಾಳನ್ನು ಮದುವೆಯಾಗಿದ್ದನು. ಕೇಳಿದನ್ನೆಲ್ಲಾ ಕೊಡಿಸುತ್ತಿದ್ದ ಶಿವಂ ಬಳಿ ಸಂಗೀತಾ ಸಮೋಸ ತರಲು ಹೇಳಿದ್ದಾಳೆ. ಆದರೆ ಆತ ಸಮೋಸ ತರಲು ನಿರಾಕರಿಸಿದ್ದು, ಖಾಲಿ ಕೈಯಲ್ಲಿ ಮನೆಗೆ ಬಂದ ಪತಿಯನ್ನು ಕಂಡು ಕೋಪಗೊಂಡ ಪತ್ನಿ ಸಣ್ಣ ವಿಷ್ಯಕ್ಕೆ ಜಗಳ ಮಾಡಿದ್ದಾಳೆ. ಊಟ ಬಿಟ್ಟಿದ್ದಾಳೆ, ಈ ವಿಷಯದ ಬಗ್ಗೆ ತನ್ನ ತವರು ಮನೆಗೂ ತಿಳಿಸಿದ್ದಾಳೆ. ಈಕೆಯ ಕುಟುಂಬಸ್ಥರು ಮನೆಗೆ ಬಂದು ರಾಜಿ ಪಂಚಾಯತಿ ಮಾಡಲು ಮುಂದಾಗಿದ್ದಾರೆ.

ವೈರಲ್ ವಿಡಿಯೋ ಇಲ್ಲಿದೆ ನೋಡಿ

ಶಿವಂ ಮೇಲೆ ಹಲ್ಲೆ ನಡೆಸಿದ ಸಂಗೀತಾ ಕುಟುಂಬಸ್ಥರು

ಪಂಚಾಯತಿ ವೇಳೆಯಲ್ಲಿ ಮಾತಿಗೆ ಮಾತು ಬೆಳೆದಿದೆ. ಸಂಗೀತಾ ಕುಟುಂಬಸ್ಥರು ಶಿವಂ ಹಾಗೂ ಆತನ ತಂದೆ ವಿಜಯ್ ಕುಮಾರ್ ಮೇಲೆ ಹಲ್ಲೆ ನಡೆಸಿದ್ದಾರೆ. ಈ ವೇಳೆಯಲ್ಲಿ ಅಕ್ಕ ಪಕ್ಕದವರು ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ತಿಳಿಯಾಗಿಸುವಲ್ಲಿ ಪ್ರಯತ್ನ ಮಾಡಿದ್ದಾರೆ. ಈ ಘಟನೆಗೆ ಸಂಬಂಧ ಪಟ್ಟಂತೆ ಶಿವಂ ತಂದೆ ವಿಜಯ್ ಕುಮಾರ್ ಅವರು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಈ ದೂರಿನ ಆಧಾರದಲ್ಲಿ ಹಲ್ಲೆ ನಡೆಸಿದ ಪತ್ನಿ ಸಂಗೀತಾ, ಆಕೆಯ ಪೋಷಕರಾದ ಉಷಾ, ರಾಮ್‌ಲಡೈಟ್ ಮತ್ತು ಮಾವ ರಾಮೋತಾರ್ ನನ್ನು ಪೋಲಿಸರು ಬಂಧಿಸಿದ್ದಾರೆ. ಬಿಎನ್‌ಎಸ್ ಅಡಿಯಲ್ಲಿ ನಾಲ್ವರು ಆರೋಪಿಗಳ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ವರದಿಯಾಗಿದೆ. ಇನ್ನು ಸೆಪ್ಟೆಂಬರ್ 1 ರಂದು ಪೂರ್ಣಪುರ ಪೊಲೀಸ್ ಠಾಣೆಯಲ್ಲಿ ದಾಖಲಾದ ದೂರಿನ ಆಧಾರದ ಮೇಲೆ, ಸಂಬಂಧಿತ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಮುಂದಿನ ಕಾನೂನು ಕ್ರಮಗಳು ನಡೆಯುತ್ತಿವೆ ಎಂದು ಪಿಲಿಭಿತ್ ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ:ಒಬ್ಬನ ಮೇಲೆ ಇಬ್ಬರ ಲವ್; ನೆರೆಮನೆಯ ಯುವಕನೊಂದಿಗೆ ಓಡಿಹೋದ ಒಂದೇ ಮನೆಯ ಸೊಸೆಯಂದಿರು

ವೈರಲ್‌ ಆಗಿರುವ ಈ ವಿಡಿಯೋದಲ್ಲಿ ಎರಡು ಕುಟುಂಬಗಳ ನಡುವೆ ಜಗಳ ನಡೆಯುತ್ತಿರುವುದನ್ನು ಕಾಣಬಃಉದು. ನೆರೆಹೊರೆಯರು ಮಧ್ಯಪ್ರವೇಶಿಸಿ ಜಗಳ ಬಿಡಿಸುತ್ತಿರುವುದನ್ನು ನೀವಿಲ್ಲಿ ನೋಡಬಹುದು. ಈ ವಿಡಿಯೋಗೆ ನೆಟ್ಟಿಗರು ನಾನಾ ರೀತಿಯಲ್ಲಿ ಕಾಮೆಂಟ್‌ ಮಾಡಿ ಪ್ರತಿಕ್ರಿಯೆ ನೀಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ