ಮಲಗಿದ್ದವನ ಮೈ ಮೇಲೆ ಹರಿದಾಡಿದ ದೈತ್ಯಾಕಾರದ ಕಾಳಿಂಗ ಸರ್ಪ, ಎದೆ ಝಲ್ ಎನಿಸುವ ದೃಶ್ಯ
ಕಾಳಿಂಗ ಸರ್ಪ ಈ ಹೆಸರು ಕೇಳಿದರೆ ಒಂದು ಕ್ಷಣ ಮೈ ನಡುಕ ಉಂಟಾಗುತ್ತದೆ. ಕಣ್ಣ ಮುಂದೆ ಬಂದು ನಿಂತರಂತೂ ಕಾಲೇ ಮುಂದೆ ಹೋಗಲ್ಲ. ಇನ್ನು ಮೈ ಮೇಲೆ ಹರಿದಾಡಿದರೆ ಆ ಕ್ಷಣ ಹೇಗಿದ್ದೀರಬಹುದು ಒಮ್ಮೆ ಊಹಿಸಿ. ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ಮಲಗಿದ್ದ ವ್ಯಕ್ತಿಯ ಮೈ ಮೇಲೆ ದೈತ್ಯಾಕಾರದ ಕಾಳಿಂಗ ಸರ್ಪವೊಂದು ಹರಿದಾಡಿದೆ. ಈ ವಿಡಿಯೋವನ್ನು ನೋಡಿದ ನೆಟ್ಟಿಗರು ಹೌಹಾರಿದ್ದಾರೆ.

ಉತ್ತರಾಖಂಡ, ಮೇ 27: ಕಾಳಿಂಗ ಸರ್ಪ (king cobra) ಈ ಜಗತ್ತಿನ ವಿಷಕಾರಿ ಹಾವುಗಳಲ್ಲಿ ಒಂದು. ಇದರ ಆಕಾರ, ಬುಸುಗುಡುವಿಕೆ ನೋಡುಗರ ಎದೆಯಲ್ಲಿ ನಡುಕ ಹುಟ್ಟಿಸುತ್ತದೆ. ಇಂತಹ ದೈತ್ಯ ಗಾತ್ರದ ಕಾಳಿಂಗ ಸರ್ಪಗಳು ಕಣ್ಣಿಗೆ ಕಾಣಸಿಗುವುದೇ ಬಲು ಅಪರೂಪ. ಆದರೆ ಇದೀಗ ಮಲಗಿದ್ದ ವ್ಯಕ್ತಿಯೊಬ್ಬನ ಮೈ ಮೇಲೆ ದೈತ್ಯಾಕಾರದ ಕಾಳಿಂಗ ಸರ್ಪವೊಂದು ಹರಿದಾಡಿದ್ದು, ಆತನಿಗೆ ಈ ವಿಷ್ಯ ಗೊತ್ತಿದ್ದರೂ ಸ್ವಲ್ಪ ಕೂಡ ಭಯ ಪಡದೇ ಸುಮ್ಮನೆ ಇದ್ದಾನೆ. ಈ ಘಟನೆಯೂ ಉತ್ತರಾಖಂಡ (uttarakhand) ದಲ್ಲಿ ನಡೆದಿದೆ ಎನ್ನಲಾಗಿದೆ. ಈ ವಿಡಿಯೋವೊಂದು ವೈರಲ್ ಆಗುತ್ತಿದ್ದಂತೆ ವ್ಯಕ್ತಿಯ ಧೈರ್ಯವನ್ನು ಎಲ್ಲರೂ ಮೆಚ್ಚಿಕೊಂಡಿದ್ದಾರೆ.
insidestory ಹೆಸರಿನ ಖಾತೆಯಲ್ಲಿ ಈ ವಿಡಿಯೋವನ್ನು ಶೇರ್ ಮಾಡಿಕೊಳ್ಳಲಾಗಿದ್ದು, ಈ ವಿಡಿಯೋದಲ್ಲಿ ವ್ಯಕ್ತಿಯೊಬ್ಬನು ಮಲಗಿರುವುದನ್ನು ಕಾಣಬಹುದು. ಹೀಗಿರುವಾಗ ವ್ಯಕ್ತಿಯ ಕಾಲುಗಳ ಮೇಲೆ ಕಾಳಿಂಗ ಸರ್ಪವೊಂದು ಹರಿದಾಡುತ್ತಾ ಬರುತ್ತಿದ್ದು, ವ್ಯಕ್ತಿಯೂ ಮಾತ್ರ ತುಟಿಕ್ ಪಿಟಿಕ್ ಎನ್ನದೇ ಮಲಗಿದ್ದಾನೆ. ಆತನಿಗೆ ತನ್ನ ಕಾಲುಗಳ ಮೇಲೆ ಕಾಳಿಂಗ ಸರ್ಪ ಹರಿದಾಡುತ್ತಿದೆ ಎನ್ನುವುದು ತಿಳಿದಿದ್ದರೂ ಆತನ ಮುಖದಲ್ಲಿ ಭಯವು ಕಾಣಿಸುತ್ತಿಲ್ಲ. ಈ ಹಾವು ಆತನ ಮೇಲೆ ಹರಿದಾಡಿ ಮೂಲೆಯನ್ನು ಸೇರಿಕೊಂಡಿದ್ದು, ಈ ವಿಡಿಯೋದ ಕೊನೆಯಲ್ಲಿ ಈ ವ್ಯಕ್ತಿಯೂ ನಗುವುದನ್ನು ಕಾಣಬಹುದು.
ಇದನ್ನೂ ಓದಿ :ವಿದ್ಯಾರ್ಥಿಗೆ ಗಿಟಾರ್ ನುಡಿಸಲು ಕಲಿಸಿದ ಮೇಘಾಲಯ ಸಿಎಂ; ಸರಳತನಕ್ಕೆ ಭಾರೀ ಮೆಚ್ಚುಗೆ
ವೈರಲ್ ವಿಡಿಯೋ ಇಲ್ಲಿದೆ ನೋಡಿ
View this post on Instagram
ಈ ವಿಡಿಯೋವೊಂದು 39 ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದುಕೊಂಡಿದ್ದು ನೆಟ್ಟಿಗರು ಈ ವಿಡಿಯೋ ನೋಡಿ ಶಾಕ್ ಆಗಿದ್ದು ಕಾಮೆಂಟ್ ಗಳನ್ನು ಮಾಡಿದ್ದಾರೆ. ಬಳಕೆದಾರರೊಬ್ಬರು, ವ್ಯಕ್ತಿಯೂ ಸಾಕಿದ ಹಾವಾಗಿರಬೇಕು, ಇಲ್ಲದಿದ್ದರೆ ಆ ವ್ಯಕ್ತಿಯೂ ಆರಾಮಾಗಿ ಮಲಗಲು ಹೇಗೆ ಸಾಧ್ಯ ಎಂದಿದ್ದಾರೆ. ಇನ್ನೊಬ್ಬರು, ಈ ದೃಶ್ಯ ನೋಡಿ ನನ್ನ ಹೃದಯ ಒಂದು ಕ್ಷಣ ನಿಂತೇ ಹೋಯಿತು ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು, ಕ್ಯಾಮೆರಾ ಮ್ಯಾನ್ ತನ್ನ ಕೆಲಸವನ್ನು ಅತ್ಯಂತ ಪ್ರಾಮಾಣಿಕವಾಗಿ ಮಾಡಿದ್ದಾನೆ ಎಂದಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








