Viral Video: ಉಚಿತ ಬಸ್​ ಪ್ರಯಾಣಕ್ಕಾಗಿ ಬುರ್ಖಾ ಧರಿಸಿದ ಪುರುಷ

|

Updated on: Jul 08, 2023 | 6:35 PM

Dharwad : ಉಚಿತ ಬಸ್​ ಪ್ರಯಾಣಕ್ಕಾಗಿ ಧಾರವಾಡದ ಬಸ್​ ಸ್ಟ್ಯಾಂಡಿನಲ್ಲಿ ಬಸ್ಸಿಗಾಗಿ ಕಾಯ್ದು ಕುಳಿತಾಗ, ಸ್ಥಳೀಯರ ಕೈಗೆ ಸಿಕ್ಕಿಬಿದ್ದು ಇವನ ನಾಟಕ ಬಯಲಾಗಿದೆ. ಆದರೆ ತಾನು ಬುರ್ಖಾ ಧರಿಸಿದ್ದ ಉದ್ದೇಶವೇ ಬೇರೆ ಎಂದಿದ್ದಾನೆ ಈತ!

Viral Video: ಉಚಿತ ಬಸ್​ ಪ್ರಯಾಣಕ್ಕಾಗಿ ಬುರ್ಖಾ ಧರಿಸಿದ ಪುರುಷ
ಉಚಿತ ಬಸ್​ ಪ್ರಯಾಣಕ್ಕಾಗಿ ಬುರ್ಖಾ ಹಾಕಿಕೊಂಡಿದ್ದ ವಿಜಯಪುರದ ವೀರಭದ್ರಯ್ಯ ಮಠಪತಿ.
Follow us on

Free Bus Ride : ರಾಜ್ಯಾದ್ಯಂತ ಮಹಿಳೆಯರು ಉಚಿತ ಬಸ್​ಗಳಲ್ಲಿ ಪ್ರಯಾಣಿಸುತ್ತಾ ತಮ್ಮ ತಮ್ಮ ಕೆಲಸಕಾರ್ಯಗಳಲ್ಲಿ ಮುಳುಗಿದ್ದಾರೆ. ಪುರುಷರು ಅವಕಾಶ ಸಿಕ್ಕಲ್ಲೆಲ್ಲಾ ಆ ಬಗ್ಗೆ ಟೀಕೆ ಟಿಪ್ಪಣಿ ತಕರಾರುಗಳನ್ನು ತೆಗೆದದ್ದೂ ಆಯಿತು. ಸಾಮಾಜಿಕ ಜಾಲತಾಣಗಳಲ್ಲಿ ಅವುಗಳು ವೈರಲ್ಲೂ ಆದವು. ತದನಂತರ ಎಲ್ಲವೂ ಸುಸೂತ್ರವಾಗಿ ಸಾಗುತ್ತಿದೆ ಎನ್ನುವಾಗಲೇ ವಿಚಿತ್ರ ಘಟನೆಯೊಂದು ನಡೆದಿದೆ. ಪುರುಷನೊಬ್ಬ  ಬುರ್ಖಾ ಧರಿಸಿ ಉಚಿತ ಬಸ್​ ಪ್ರಯಾಣ ಮಾಡಲು ಪ್ರಯತ್ನ ನಡೆಸುತ್ತಿರುವಾಗ ಸ್ಥಳೀಯರ ಕೈಗೆ ಸಿಕ್ಕಿಹಾಕಿಕೊಂಡಿದ್ದಾನೆ.

ಈ ವ್ಯಕ್ತಿಯನ್ನು ವಿಜಯಪುರದ ವೀರಭದ್ರಯ್ಯ ಮಠಪತಿ (Vijayapura) ಎಂದು ಗುರುತಿಸಲಾಗಿದೆ. ಗುರುವಾರದಂದು ಇವನು ಧಾರವಾಡದಿಂದ (Dharwad) ಉಚಿತವಾಗಿ ಪ್ರಯಾಣಿಸಲು ಇಲ್ಲಿಯ ಕೆಎಸ್​ಆರ್​ಟಿಸಿ ಬಸ್​ ನಿಲ್ದಾಣದಲ್ಲಿ ಬಸ್ಸಿಗಾಗಿ ಕಾಯುತ್ತ ಕುಳಿತಿದ್ದಾನೆ. ಬುರ್ಖಾ ಧರಿಸಿ, ಮಹಿಳೆಯಂತೆ ನಟಿಸುತ್ತಿರುವಾಗ ಅಕ್ಕಪಕ್ಕದವರಿಗೆ ಅನುಮಾನ ಬಂದಿದೆ.

ಇದನ್ನೂ ಓದಿ : Viral Video: ಹಿಮಾಲಯದಲ್ಲಿಯೂ ಕುಡಿಯುವ ನೀರಿಗೆ ತತ್ವಾರ; ಈ ಉಪಾಯವೇ ಆಧಾರ

ನಂತರ ಕೆಲವರು ಅವನೊಂದಿಗೆ ಮಾತಿಗಿಳಿದಾಗ ತಾನು ಉಚಿತ ಬಸ್​ ಪ್ರಯಾಣಕ್ಕಾಗಿ ಕಾದು ಕುಳಿತಿಲ್ಲ, ಭಿಕ್ಷೆ ಬೇಡಲು ಹೀಗೆ ವೇಷ ಹಾಕಿದ್ದೇನೆ ಎಂದಿದ್ದಾನೆ. ಆದರೆ ಅವನ ಬಳಿ ನಕಲಿ ಆಧಾರ್ ಕಾರ್ಡ್​ ಪತ್ತೆಯಾಗಿದೆ. ಇದೆಲ್ಲವನ್ನು ಗಮನಿಸಿದಾಗ ಅಲ್ಲಿದ್ದವರಿಗೆ ಅವನು ಉಚಿತ ಬಸ್​ ಪ್ರಯಾಣಕ್ಕೆ ಸಂಚು ಹೂಡಿದ್ದುದು ಖಾತ್ರಿಯಾಗಿದೆ.

ಇದನ್ನೂ ಓದಿ : Viral Video: ತಮಿಳಿನ ”ಟಮ್ ಟಮ್”​ ಧಾಟಿಯಲ್ಲಿ ಟೊಮ್ಯಾಟೋ ಗೀತೆ

ಈ ಟ್ವೀಟ್​ ಅನ್ನು ಸತೀಶ್​ ಕಂದಗಲ್​ಪುರ್​​ ಎನ್ನುವವರು ಟ್ವೀಟ್ ಮಾಡಿದ್ದಾರೆ. ಇಂಡಿಯಾ ಟುಡೇ ಇದನ್ನು ವರದಿ ಮಾಡಿದೆ. ಸಾಮಾಜಿಕ ಜಾಲತಾಣಗಳಲ್ಲಿಯ ಮೀಮ್​​ಗಳಲ್ಲಿಯ ಪಾತ್ರವೊಂದು ಹೀಗೊಂದು ದಿನ ಎದ್ದು ಬರಬಹುದು ಎಂಬ ಕಲ್ಪನೆಯೇ ಇರಲಿಲ್ಲ ಅಲ್ಲವೆ? ಏನಂತೀರಿ ಈ ವಿಡಿಯೋ ನೋಡಿದ ನೀವು?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 6:34 pm, Sat, 8 July 23