
ಇತ್ತೀಚಿನ ದಿನಗಳಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಹಳೆಯ ಕಾಲದ ದಿನಸಿ ಸಾಮಗ್ರಿಗಳ ರಶೀದಿ, ಹೋಟೆಲ್ ಬಿಲ್‌ಗಳು ಅಥವಾ ಮದುವೆ ಆಮಂತ್ರಣ ಪತ್ರಿಕೆಗಳು ವೈರಲ್ ಆಗುವುದು ಮತ್ತು ಅವುಗಳನ್ನು ನೋಡಿ ಜನರು ಆಶ್ಚರ್ಯಪಡುವುದು ಸಾಮಾನ್ಯವಾಗಿದೆ. ಅದೇ ರೀತಿ, ಈಗ ಇಂಟರ್ನೆಟ್‌ನಲ್ಲಿ ಬರೋಬ್ಬರಿ 41 ವರ್ಷಗಳಷ್ಟು ಹಳೆಯದಾದ ಹೋಟೆಲ್ ಬಿಲ್ ಒಂದು ಭಾರಿ ಸದ್ದು ಮಾಡುತ್ತಿದೆ. ಈ ಬಿಲ್, ಮಹಾರಾಷ್ಟ್ರದ ಬೊಂಬಾಯಿ (ಈಗಿನ ಮುಂಬೈ) ನಗರದ ಪ್ರಸಿದ್ಧ ಕುಲಾಬಾ (Colaba) ಪ್ರದೇಶದಲ್ಲಿರುವ ‘ಹೋಟೆಲ್ ಸೀ ಪ್ಯಾಲೇಸ್’ (Hotel Sea Palace) ಗೆ ಸಂಬಂಧಿಸಿದ್ದಾಗಿದೆ.
ಈ ಬಿಲ್ ಅನ್ನು 18 ಜುಲೈ 1985 ರಂದು ಮುಖೇಶ್ ಘಾಂಚಿ (Mukesh Ghanchi) ಎಂಬ ಗ್ರಾಹಕನ ಹೆಸರಿನಲ್ಲಿ ನೀಡಲಾಗಿದೆ. ಅವರು ಹೋಟೆಲ್‌ನ ರೂಮ್ ನಂಬರ್ 304 ರಲ್ಲಿ ತಂಗಿದ್ದರು. ಬಿಲ್‌ನಲ್ಲಿ ನಮೂದಿಸಲಾದ ಅಂದಿನ ಬೆಲೆಗಳನ್ನು ನೋಡಿದರೆ ಇಂದಿನ ಕಾಲಕ್ಕೆ ನಂಬಲು ಸಾಧ್ಯವಾಗದಂತಿದೆ:
ಗ್ರಾಹಕರು 50 ರ ನೋಟು ನೀಡಿದ್ದು, ಅವರಿಗೆ ಹೋಟೆಲ್‌ನವರು 1.00 ರೂ. ಬ್ಯಾಲೆನ್ಸ್ (ಚಿಲ್ಲರೆ) ವಾಪಸ್ ನೀಡಿರುವುದನ್ನು ಬಿಲ್‌ನ ಕೆಳಭಾಗದಲ್ಲಿ ಸ್ಪಷ್ಟವಾಗಿ ಬರೆಯಲಾಗಿದೆ!
ಇದನ್ನೂ ಓದಿ: ಬೆಂಗಳೂರಲ್ಲಿ 3BHK ಫ್ಲ್ಯಾಟ್‌ಗೆ ಬರೋಬ್ಬರಿ 6.5 ಕೋಟಿ ರೂ! ಬೆಲೆ ಕೇಳಿ ಬೆಚ್ಚಿಬಿದ್ದ ನೆಟ್ಟಿಗರು
ಇಂದಿನ ಕಾಲದಲ್ಲಿ ಒಂದು ಕಪ್ ಚಹಾ ಕುಡಿಯಬೇಕಾದರೂ ಕನಿಷ್ಠ 20 ರಿಂದ 50 ರೂ. ಖರ್ಚಾಗುತ್ತದೆ. ಇನ್ನು ಐಷಾರಾಮಿ ಹೋಟೆಲ್‌ಗಳಲ್ಲಿ ಕೇವಲ ಒಂದು ರಾತ್ರಿ ಉಳಿದುಕೊಳ್ಳಲು ಸಾವಿರಾರು ರೂಪಾಯಿಗಳನ್ನು ನೀಡಬೇಕಾಗುತ್ತದೆ.
ಇಂತಹ ಪರಿಸ್ಥಿತಿಯಲ್ಲಿ, 1985 ರಲ್ಲಿ ಕೇವಲ 50 ರೂಪಾಯಿಗಳಲ್ಲಿ ಒಬ್ಬ ವ್ಯಕ್ತಿ ಇಡೀ ದಿನ ಹೋಟೆಲ್‌ನಲ್ಲಿ ತಂಗಿ, ಎರಡು ಹೊತ್ತು ಹೊಟ್ಟೆತುಂಬಾ ಊಟ ಮಾಡಿ, ತಿಂಡಿ-ಚಹಾ ಸವಿದು ಹೋಗಿರುವುದನ್ನು ನೋಡಿ ನೆಟ್ಟಿಗರು ಆಶ್ಚರ್ಯಚಕಿತರಾಗಿದ್ದಾರೆ. “ನಮ್ಮ ತಂದೆ-ತಾತನ ಕಾಲದ ದಿನಗಳೇ ಚಂದ, ಅಂದು ಹಣಕ್ಕೆ ಭಾರಿ ಮೌಲ್ಯವಿತ್ತು” ಎಂದು ಹಲವರು ಕಮೆಂಟ್ ಮಾಡುತ್ತಿದ್ದಾರೆ. ಈ ಹಳೆಯ ಬಿಲ್ ಸದ್ಯ ಇನ್‌ಸ್ಟಾಗ್ರಾಮ್ ಹಾಗೂ ಎಕ್ಸ್ (ಟ್ವಿಟರ್) ನಂತಹ ವೇದಿಕೆಗಳಲ್ಲಿ ಹಳೆಯ ಸವಿನೆನಪುಗಳನ್ನು ಮರುಕಳಿಸುವಂತೆ ಮಾಡಿದೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ