Florida: ವಿಷಕಾರಿ ಮತ್ತು ನಿಗೂಢ ಜೀವಿಗಳಾದ ಹಾವುಗಳನ್ನು ಕಂಡು ಅನೇಕರು ಭಯ ಬೀಳುತ್ತಾರೆ. ಹಾಗಾಗಿ ತಮ್ಮ ರಕ್ಷಣೆಗೆ ಅವುಗಳನ್ನು ಕೊಲ್ಲಲು ಮುಂದಾಗುತ್ತಾರೆ. ಆದರೆ ಅವುಗಳನ್ನು ರಕ್ಷಿಸುವ ಕೆಲಸಕ್ಕೆ ಕೆಲವೇ ಕೆಲವರು ಮುಂದಾಗುತ್ತಾರೆ. ಅದರಲ್ಲೂ ಮಾರುದ್ದ ಹಾವನ್ನು ಪಳಗಿಸಿ ಹಿಡಿಯುವವರು ಸಅಕಷ್ಟು ಜನರು ನಮ್ಮ ನಡುವೆ ಇದ್ದಾರೆ ಆದರೆ ದೊಡ್ಡ ದೊಡ್ಡ ಹೆಬ್ಬಾವುಗಳನ್ನು? ಇದೀಗ ಫ್ಲೋರಿಡಾದಲ್ಲಿ 5 ಪುರುಷರು 17 ಅಡಿ ಹೆಬ್ಬಾವನ್ನು ರಕ್ಷಿಸಿದ ಫೋಟೋಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಫ್ಲೋರಿಡಾದ ಬಿಗ್ ಸೈಪ್ರೆಸ್ ನ್ಯಾಷನಲ್ ಪ್ರಿಸರ್ವ್ನಲ್ಲಿ (Florida’s Big Cypress National Preserve) ಈ ಕಾರ್ಯಾಚರಣೆ ಮಾಡಲಾಗಿದೆ.
ಇದನ್ನೂ ಓದಿ : Viral Brain Teaser: ವಾರಾಂತ್ಯದ ಮಂಕನ್ನು ಓಡಿಸಲು ಇಲ್ಲಿದೆ ಮೋಜಿನ ಗಣಿತ
ಹೆಬ್ಬಾವು ಬೇಟೆಗಾರರ ಗುಂಪೊಂದು 17 ಅಡಿ ಉದ್ದದ ಮತ್ತು 90 ಕಿಲೋಗ್ರಾಂಗಳಷ್ಟು ತೂಕವಿರುವ ಹೆಬ್ಬಾವನ್ನು ಸೆರೆಹಿಡಿದಿದೆ. ನೆಟ್ಟಿಗರು ಈ ಫೋಟೋಗಳನ್ನು ನೋಡಿ ಇವರ ಧೈರ್ಯವನ್ನು ಕೊಂಡಾಡುತ್ತಿದ್ದಾರೆ. ನಿಜಕ್ಕೂ ಈ ಫೋಟೋಗಳು ಬೆಚ್ಚಿಬೀಳಿಸುತ್ತಿವೆ ಎಂದೂ ಹೇಳುತ್ತಿದ್ದಾರೆ.
ಹಾವು ರಕ್ಷಕ ಮೈಕ್ ಎಲ್ಫೆನ್‌ಬೀನ್ ಮತ್ತು ಅವರ 17 ವರ್ಷದ ಅವರ ಮಗ ಕೋಲ್ ಹಾವುಗಳ ಸಂರಕ್ಷಣೆಗಾಗಿ ಹಾವುಗಳನ್ನು ಹುಡುಕುತ್ತಿದ್ದಾಗ ಈ ಹೆಬ್ಬಾವು ಸಿಕ್ಕಿದೆ. ನಂತರ ಬೇಟೆಗಾರರಾದ ಟ್ರೇ ಬಾರ್ಬರ್, ಕಾರ್ಟರ್ ಗ್ಯಾವ್ಲಾಕ್ ಮತ್ತು ಹೋಲ್ಡನ್ ಹಂಟರ್ ಸಹಾಯದಿಂದ ಈ ದೈತ್ಯ ಹೆಬ್ಬಾವನ್ನು ಹಿಡಿಸಿದ್ದಾರೆ. ನಾವು ಪರಸ್ಪರ ಅಪರಿಚಿತರಾಗಿದ್ದೆವು. ಆದರೆ ಈ ಹಾವನ್ನು ಒಟ್ಟಾಗಿ ಸೆರೆಹಿಡಿಯಬೇಕು ಎನ್ನುವುದು ನಮ್ಮ ನಿರ್ಧಾರವಾಗಿತ್ತು. ಮೊದಲು ಗಾವ್ಲಾಕ್ ಇದರ ಬಾಲವನ್ನು ಹಿಡಿದ. ನಂತರ ಗಾವ್ಲಾಕ್ ಮತ್ತು ಕೋಲ್ ಅದರ ತಲೆಯನ್ನು ಗಟ್ಟಿಯಾಗಿ ಹಿಡಿದರು. 17 ಅಡಿ ಉದ್ದದ ಈ ಹೆಬ್ಬಾವನ್ನು ನಿಯಂತ್ರಿಸುವುದು ದೊಡ್ಡ ಹರಸಾಹಸವೇ ಆಗಿತ್ತು.’ ಎಂದಿದ್ದಾರೆ ಎಂದಿದ್ದಾರೆ ಎಲ್ಫೆನ್‌ಬೀನ್.
ಇದನ್ನೂ ಓದಿ : Viral Video: ದೀಪಾವಳಿ ಬೋನಸ್; ತಮಿಳುನಾಡಿನ ಟೀ ಎಸ್ಟೇಟ್ ಉದ್ಯೋಗಿಗಳಿಗೆ ರಾಯಲ್ ಎನ್ಫೀಲ್ಡ್
ಅಬ್ಬಾ ಇದನ್ನು ಬಂಧಿಸುವಾಗ ನಿಮಗೆ ಅದು ತೊಂದರೆ ಮಾಡಲಿಲ್ಲವೇ? ಕಚ್ಚುವುದು, ಸುತ್ತಿಕೊಳ್ಳುವುದು ಇತ್ಯಾದಿ ಎಂದಿದ್ದಾರೆ ಅನೇಕರು. ಸದ್ಯ ನಿಮಗೇನು ಆಗಿಲ್ಲವಲ್ಲ ಎಂದು ಕಾಳಜಿ ವ್ಯಕ್ತಪಡಿಸಿದ್ದಾರೆ ಕೆಲವರು.
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ