Viral : ಈ ಮದುವೆಯಿಂದ ನನಗೆ ಭವಿಷ್ಯವಿಲ್ಲ. ಏಕೆಂದರೆ ನಾನು ಮದುವೆಯಾಗುತ್ತಿರುವುದು ನನ್ನ ಹೆತ್ತವರ ಸಮಾಧಾನಕ್ಕಾಗಿ ಎಂದು ಚೀನಾದ 20 ವರ್ಷದ ಯುವತಿ ಹೇಳಿರುವ ವಿಡಿಯೋ ಚೀನಾದ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ನಾನು ಮದುವೆಯಾಗುತ್ತಿರುವವರನ್ನು ಪ್ರೀತಿಸುತ್ತಿಲ್ಲ, ಬದಲಾಗಿ ವಯಸ್ಸಾದ ಅಪ್ಪ ಅಮ್ಮನ ಸಮಾಧಾನ ಮತ್ತು ತೃಪ್ತಿಗೆ ಮದುವೆಯಾಗುತ್ತಿದ್ದೇನೆ ಎಂದು ದುಃಖಿಸಿದಿದ್ದಾಳೆ.
ಇದನ್ನೂ ಓದಿ : ಹೆಂಡತಿ ಕೋಪಗೊಂಡಿದ್ದಾಳೆ; ರಜೆ ಕೇಳುವಲ್ಲಿ ಪ್ರಮಾಣಿಕತೆ ಮೆರೆದ ನವವಿವಾಹಿತ ಕಾನ್ಸ್ಟೇಬಲ್
ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ನ ಪ್ರಕಾರ, ವಧು ಯಾನ್ ನೈಋತ್ಯ ಚೀನಾದ ಗ್ಯುಝೌ ಪ್ರಾಂತ್ಯದವಳು. ನನಗೆ ಮದುವೆಯಾಗಲು ಮನಸ್ಸಿಲ್ಲ. ಅಪ್ಪ ಅಮ್ಮನ ನಿರೀಕ್ಷೆ ತಣಿಸಲು ಮತ್ತು ಸಾಂಪ್ರದಾಯಿಕ ನಂಬಿಕೆಗಳಿಂದ ಕೂಡಿದ ಅವರ ಮನಸ್ಸನ್ನು ತೃಪ್ತಿಪಡಿಸಲು ಮದುವೆಯಾಗುತ್ತಿದ್ದೇನೆ. ಮದುವೆಗೆ ತಕರಾರು ಎತ್ತಿದ್ದಕ್ಕೆ ನೆರೆಹೊರೆಯವರು ನನ್ನ ಬಗ್ಗೆ ಇಲ್ಲಸಲ್ಲದ್ದನ್ನು ಹಬ್ಬಿಸುತ್ತಾರೆ. ಹಾಗಾಗಿ ಇವರೆಲ್ಲರ ಸಲುವಾಗಿ ಮದುವೆಯಾಗುತ್ತಿದ್ದೇನೆ ಎಂದಿದ್ದಾಳೆ.
ಇದನ್ನೂ ಓದಿ : ‘ಬೀಡಿ ಜಲೈಲೆ ಜಿಗರ್ ಸೆ ಪಿಯಾ’ ಹಾಡಿಗೆ ನರ್ತಿಸಿದ ಪಾಕಿಸ್ತಾನಿ ದಂಪತಿಯ ವಿಡಿಯೋ ವೈರಲ್
ಮದುವೆ ಎಂಬ ಈ ಒತ್ತಡಕ್ಕೊಂದು ಕೊನೆಗಳಿಸುವುದಕ್ಕೋಸ್ಕರ ಆ ವ್ಯಕ್ತಿಯನ್ನು ಒಂದು ದಿನ ಭೇಟಿಯಾದೆ. ಅವನ ಬಗ್ಗೆ ನನಗೆ ಆಸಕ್ತಿ ಇಲ್ಲದಿದ್ದರೂ ಅವನೊಂದಿಗೆ ಮದುವೆಯಾಗಲು ಒಪ್ಪಿಕೊಂಡೆ. ನನಗೆ ಖಂಡಿತ ಗೊತ್ತಿದೆ ಎಲ್ಲರನ್ನೂ ಸಮಾಧಾನಪಡಿಸಲು ಮದುವೆಯಾಗುತ್ತಿರುವ ನನಗೆ ಒಳ್ಳೆಯ ಭವಿಷ್ಯ ಖಂಡಿತ ಇಲ್ಲವೆಂದು.
ಇದನ್ನೂ ಓದಿ : ವಧುವನ್ನು ಎತ್ತಿಕೊಂಡು ಮಂಟಪದಿಂದ ಇಳಿಯುತ್ತಿರುವಾಗ ಆಯತಪ್ಪಿ ಬಿದ್ದ ವರನ ವಿಡಿಯೋ ವೈರಲ್
ಈ ವಿಡಿಯೋಗೆ ಚೀನಾದ ಸಾಮಾಜಿಕ ಮಾಧ್ಯಮದಲ್ಲಿ 11,000 ಕ್ಕೂ ಜನರು ಪ್ರತಿಕ್ರಿಯಿಸಿದ್ದಾರೆ. ಈಕೆಗೆ ಸಂತೋಷ ಕೊಡದ ಮದುವೆ ಸಲ್ಲದು ಎಂದು ಹೇಳಿದ್ದಾರೆ. ಇದು ಬಲವಂತದ ಮದುವೆ, ಬಹಳ ನೋವಿನ ಸಂಗತಿ ಎಂದಿದ್ದಾರೆ ಒಬ್ಬರು. ಇತರರನ್ನು ತೃಪ್ತಿಪಡಿಸಲು ಈಕೆ ಯಾಕೆ ಮದುವೆಯಾಗಬೇಕು? ಇಂಥ ತ್ಯಾಗ ಸರಿಯಲ್ಲ, ತನ್ನ ಬದುಕನ್ನು ಬದುಕಬೇಕು ಎಂದಿದ್ದಾರೆ ಮತ್ತೊಬ್ಬರು.
ಇದನ್ನೂ ಓದಿ : ಜಿಮ್ಪ್ರಿಯೆ! ಮದುವೆಯಲ್ಲಿ ಪುಲ್ಅಪ್ಸ್ ತೆಗೆದ ವಧುವಿನ ವಿಡಿಯೋ ವೈರಲ್
ಈಕೆ ಬಹಳ ದುಃಖಗೊಂಡಿದ್ದಾಳೆ. ಪರಸ್ಪರ ಪ್ರೀತಿಸಲು ಸಾಧ್ಯವಿಲ್ಲದೇ ಇದ್ದಾಗ ಅಲ್ಲಿ ನೋವೇ ಇರುತ್ತದೆ ಎಂದಿದ್ಧಾರೆ ಮತ್ತೊಬ್ಬರು. ಅವಳ ಗಂಡ ಒಳ್ಳೆಯವನೆಂದು ಭಾವಿಸುತ್ತೇನೆ. ದಾಂಪತ್ಯದಲ್ಲಿ ಪ್ರಣಯದ ಮೂಲಕ ಪ್ರೀತಿಯನ್ನು ಹುಟ್ಟುಹಾಕಬಹುದೇನೋ ಎಂದಿದ್ದಾರೆ ಮಗದೊಬ್ಬರು.
ಇದನ್ನು ಓದಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 4:04 pm, Fri, 13 January 23