ವೈರಲ್ ಸುದ್ದಿ: 49 ವರ್ಷದ ಮಹಿಳೆಯನ್ನು ಮದುವೆಯಾದ 103 ವರ್ಷದ ಸ್ವಾತಂತ್ರ್ಯ ಹೋರಾಟಗಾರ

103 ವರ್ಷದ ವ್ಯಕ್ತಿ 49 ವರ್ಷದ ಮಹಿಳೆಯನ್ನು ಮದುವೆಯಾಗಿರುವ ಘಟನೆ ಭೋಪಾಲ್​ನಲ್ಲಿ ನಡೆದಿದ್ದು, ವಿಡಿಯೋ ಎಲ್ಲೆಡೆ ವೈರಲ್ ಆಗಿದೆ. ಇವರಿಬ್ಬರು 2023ರಲ್ಲಿ ಮದುವೆಯಾಗಿದ್ದಾರೆ, 103 ವರ್ಷದ ವ್ಯಕ್ತಿ ಸ್ವಾತಂತ್ರ್ಯ ಹೋರಾಟಗಾರರಾಗಿದ್ದಾರೆ. ಭೋಪಾಲ್‌ನ ಇಟ್ವಾರದ ಸ್ವಾತಂತ್ರ್ಯ ಹೋರಾಟಗಾರ ಹಬೀಬ್ ನಜರ್, ಕಳೆದ ವರ್ಷ 49 ವರ್ಷದ ಫಿರೋಜ್ ಜಹಾನ್ ಅವರೊಂದಿಗೆ ವಿವಾಹವಾಗಿದ್ದಾರೆ.

ವೈರಲ್ ಸುದ್ದಿ: 49 ವರ್ಷದ ಮಹಿಳೆಯನ್ನು ಮದುವೆಯಾದ 103 ವರ್ಷದ ಸ್ವಾತಂತ್ರ್ಯ ಹೋರಾಟಗಾರ
Image Credit source: India Today
Follow us
ನಯನಾ ರಾಜೀವ್
|

Updated on: Jan 29, 2024 | 9:54 AM

103 ವರ್ಷದ ವ್ಯಕ್ತಿ 49 ವರ್ಷದ ಮಹಿಳೆಯನ್ನು ಮದುವೆಯಾಗಿರುವ ಘಟನೆ ಭೋಪಾಲ್​ನಲ್ಲಿ ನಡೆದಿದ್ದು, ವಿಡಿಯೋ ಎಲ್ಲೆಡೆ ವೈರಲ್ ಆಗಿದೆ. ಇವರಿಬ್ಬರು 2023ರಲ್ಲಿ ಮದುವೆಯಾಗಿದ್ದಾರೆ, 103 ವರ್ಷದ ವ್ಯಕ್ತಿ ಸ್ವಾತಂತ್ರ್ಯ ಹೋರಾಟಗಾರರಾಗಿದ್ದಾರೆ.

ಭೋಪಾಲ್‌ನ ಇಟ್ವಾರದ ಸ್ವಾತಂತ್ರ್ಯ ಹೋರಾಟಗಾರ ಹಬೀಬ್ ನಜರ್, ಕಳೆದ ವರ್ಷ 49 ವರ್ಷದ ಫಿರೋಜ್ ಜಹಾನ್ ಅವರೊಂದಿಗೆ ವಿವಾಹವಾಗಿದ್ದಾರೆ.

ಸಾಕಷ್ಟು ಮಂದಿ ದಂಪತಿಗೆ ಅಭಿನಂದನೆ ಸಲ್ಲಿಸಿದ್ದಾರೆ, ಶುಭ ಹಾರೈಕೆಯ ಸುರಿಮಳೆಯ ನಡುವೆಯೇ ಅವರು ವಧುವಿನೊಂದಿಗೆ ಆಟೋ ರಿಕ್ಷಾದಲ್ಲಿ ಬರುತ್ತಿರುವ ವಿಡಿಯೋ ವೈರಲ್ ಆಗಿತ್ತು. ನಾಜರ್ ಮುಖದಲ್ಲಿ ನಗು, ಹಿತೈಷಿಗಳಿಗೆ ಕೃತಜ್ಞತೆ ಸಲ್ಲಿಸುತ್ತಿರುವುದು ಕಂಡು ಬರುತ್ತಿದೆ.

ಇದು ನಾಜರ್ ಅವರು ಮೂರನೇ ಮದುವೆಯಾಗಿದ್ದಾರೆ, ಅವರ ಎರಡನೇ ಹೆಂಡತಿಯ ಮರಣದ ನಂತರ, ನಾಜರ್ ಅವರು ತುಂಬಾ ಒಂಟಿತನವನ್ನು ಅನುಭವಿಸಿದರು, ಇದೇ ಕಾರಣಕ್ಕೆ ಮತ್ತೊಂದು ಮದುವೆಯಾಗಿದ್ದಾರೆ.

ಮತ್ತಷ್ಟು ಓದಿ: Viral Video: ಚಲಿಸುತ್ತಿರುವ ರೈಲಿನಲ್ಲಿ ಕಸರತ್ತು ಮಾಡಲು ಹೋಗಿ ಪಜೀತಿಗೆ ಸಿಲುಕಿದ ಭೂಪ

ಅವರ ಪತ್ನಿಯಾಗಿ ಬಂದಿರುವ ಫಿರೋಜ್ ಜಹಾನ್​ ಕೂಡ ತನ್ನ ಪತಿಯನ್ನು ಕಳೆದುಕೊಂಡಿದ್ದರು. ವಯಸ್ಸಾದ ಸ್ವಾತಂತ್ರ್ಯ ಹೋರಾಟಗಾರರನ್ನು ನೋಡಿಕೊಳ್ಳಲು ಯಾರಾದರೂ ಬೇಕೇ ಬೇಕು ಎಂಬುದನ್ನು ಅರಿತು ಅವರನ್ನು ಮದುವೆಯಾಗಿದ್ದಾರೆ.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ