Viral Video: ವ್ಹಾವ್… ಪ್ರತಿಭೆ ಅಂದ್ರೆ ಇದಪ್ಪಾ; ಕಲಾವಿದನ ಕುಂಚದಲ್ಲಿ ಅರಳಿದ ಬಾಲ ರಾಮನ ಅದ್ಭುತ ಕಲಾಕೃತಿ

ಕಲೆ, ಪ್ರತಿಭೆ ಕೆಲವರನ್ನು ಬೇರೊಂದು ಮಟ್ಟಕ್ಕೆ ಕೊಂಡೊಯ್ಯುತ್ತವೆ. ಈ ರೀತಿ ತಮ್ಮ ವಿಶೇಷ ಕೌಶಲ್ಯದ ಮೂಲಕವೇ ಎಲ್ಲರನ್ನೂ ಬೆರಗುಗೊಳಿಸುವಂತಹ ಅತ್ಯದ್ಭುತ ಕಲಾ ಪ್ರತಿಭೆಗಳ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಆಗಾಗ್ಗೆ ವೈರಲ್ ಆಗುತ್ತಿರುತ್ತವೆ. ಇದೀಗ ಅಂತಹದ್ದೇ ವಿಡಿಯೋವೊಂದು ವೈರಲ್ ಆಗಿದ್ದು, ಕಲಾವಿದರೊಬ್ಬರು ತಮ್ಮ ಮೊಂಡು ಕೈಗಳಿಂದಲೇ ಬಾಲ ರಾಮ ವಿಗ್ರಹದ ಸುಂದರ ಚಿತ್ರವನ್ನು ಬಿಡಿಸಿದ್ದಾರೆ. ಈ ಅತ್ಯದ್ಭುತ ಕಲಾವಿದನ ಕಲಾ ಪ್ರತಿಭೆಯನ್ನು ಕಂಡು ನೆಟಿಗರು ನಿಬ್ಬೆರಗಾಗಿದ್ದಾರೆ.

Viral Video: ವ್ಹಾವ್… ಪ್ರತಿಭೆ ಅಂದ್ರೆ ಇದಪ್ಪಾ;  ಕಲಾವಿದನ  ಕುಂಚದಲ್ಲಿ ಅರಳಿದ ಬಾಲ ರಾಮನ ಅದ್ಭುತ ಕಲಾಕೃತಿ
Dhaval KhatriImage Credit source: instagram
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷತಾ ವರ್ಕಾಡಿ

Updated on: Jan 28, 2024 | 3:33 PM

ಕಲೆ ಅನ್ನೋದು ಯಾರ ಸ್ವತ್ತು ಕೂಡಾ ಅಲ್ಲ. ಈ ಕಲೆ ಅಷ್ಟು ಸುಲಭವಾಗಿ ಎಲ್ಲರಿಗೂ ಒಲಿಯೋದಿಲ್ಲ, ಒಲಿದರೆ ಅದು ಎಂತಹವರನ್ನೂ ಉತ್ತುಂಗಕ್ಕೆ ತೆಗೆದುಕೊಂಡು ಹೋಗುತ್ತದೆ. ಇದಕ್ಕೆ ಸೂಕ್ತ ಉದಾಹರಣೆ ಚಿತ್ರ ಕಲಾವಿದ ಧವಳ್ ಖತ್ರಿ. ಗುಜರಾತಿನ ಅಹಮದಾಬಾದ್ ನಿವಾಸಿಯಾಗಿರುವ ಧವಳ್ ಖತ್ರಿ ಒಬ್ಬ ಅದ್ಭುತ ಚಿತ್ರ ಕಲಾವಿದರಾಗಿದ್ದು, ಸಣ್ಣ ವಯಸ್ಸಿನಲ್ಲಿ ಯಾವುದೋ ಒಂದು ಅಪಘಾತದಲ್ಲಿ ತನ್ನ ಎರಡೂ ಕೈಗಳನ್ನು ಕಳೆದುಕೊಳ್ಳುತ್ತಾರೆ. ಇದರಿಂದ ಎದೆಗುಂದದ ಧವಳ್ ತಮ್ಮ ತಂದೆ ತಾಯಿಯ ಪ್ರೋತ್ಸಾಹದೊಂದಿಗೆ, ಮೊಂಡು ಕೈಗಳಲ್ಲಿ ಕುಂಚ ಹಿಡಿದುಕೊಂಡು ಚಿತ್ರಗಳನ್ನು ಬಿಡಿಸಲು ಆರಂಭಿಸುತ್ತಾರೆ. ಹೀಗೆ ತಮ್ಮ ಕಲಾ ಬದುಕನ್ನು ಆರಂಭಿಸಿದ ಧವಳ್ ಇಂದು ಅದೆಷ್ಟೋ ಜನರಿಗೆ ಸ್ಪೂರ್ತಿಯ ಚಿಲುಮೆಯಾಗಿ ನಿಂತಿದ್ದಾರೆ. ಇವರನ್ನು ಸೆಲೆಬ್ರಿಟಿ ಆರ್ಟಿಸ್ಟ್ ಅಂದ್ರೂ ತಪ್ಪಾಗದು.

ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವ ಧವಳ್ ತಾವು ಬಿಡಿಸಿದಂತಹ ಅದ್ಭುತ ಚಿತ್ರಕಲೆಗಳ ವಿಡಿಯೋ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ಅವರು ಬಾಲ ರಾಮನ ವಿಗ್ರಹ ಸುಂದರ ಕಲಾಕೃತಿಯನ್ನು ರಚಿಸುವಂತಹ ವಿಡಿಯೋವೊಂದನ್ನು ಸಾಮಾಜಿಕ ಜಾಲತಣಾದಲ್ಲಿ ಹಂಚಿಕೊಂಡಿದ್ದು, ಇವರ ಈ ಅದ್ಭುತ ಕಲಾ ಪ್ರತಿಭೆಯನ್ನು ಕಂಡು ನೋಡುಗರು ಮಂತ್ರಮುಗ್ಧರಾಗಿದ್ದಾರೆ.

ಈ ವೈರಲ್ ವಿಡಿಯೋವನ್ನು ಧವಳ್ ಖತ್ರಿ (@uniquedhavalkhatri) ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದು, “ನಾನು ತುಂಬು ಹೃದಯದಿಂದ ಈ ವಿಶೇಷ ಚಿತ್ರವನ್ನು ಮಾಡುತ್ತಿದ್ದೇನೆ… ಜೈ ಶ್ರೀರಾಮ್” ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ. ವಿಡಿಯೋದಲ್ಲಿ ಕಲಾವಿದ ಧವಳ್ ಖತ್ರಿ ತಮ್ಮ ಮೊಂಡು ಕೈಗಳಲ್ಲಿ ಅದ್ಭುತವಾಗಿ ಬಾಲ ರಾಮನ ಕಲಾಕೃತಿಯನ್ನು ರಚಿಸುವಂತಹ ಸುಂದರ ದೃಶ್ಯವನ್ನು ಕಾಣಬಹುದು. ವೈರಲ್ ವಿಡಿಯೋದಲ್ಲಿ ಕಲಾವಿದ ಧವಳ್ ಖತ್ರಿ ತಮ್ಮ ಮೊಂಡು ಕೈಗಳಲ್ಲಿ ಕುಂಚವನ್ನು ಹಿಡಿದುಕೊಂಡು ಬಾಲ ರಾಮನ ವಿಗ್ರಹದ ಸುಂದರ ಕಲಾಕೃತಿಯನ್ನು ರಚಿಸುವಂತಹ ಅತ್ಯದ್ಭುತ ದೃಶ್ಯವನ್ನು ಕಾಣಬಹುದು. ಈ ವಿಡಿಯೋ ಇದೀಗ ನೆಟ್ಟಿಗರ ಮನಗೆದ್ದಿದೆ.

ಇದನ್ನೂ ಓದಿ:  ಚಲಿಸುತ್ತಿರುವ ರೈಲಿನಲ್ಲಿ ಕಸರತ್ತು ಮಾಡಲು ಹೋಗಿ ಪಜೀತಿಗೆ ಸಿಲುಕಿದ ಭೂಪ

ಐದು ದಿನಗಳ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ 16.3 ಮಿಲಿಯನ್ ವೀಕ್ಷಣೆಗಳನ್ನು ಹಾಗೂ1.7 ಮಿಲಿಯನ್ ವೀಕ್ಷಣೆಗಳನ್ನು ಪಡೆದುಕೊಂಡಿದೆ. ಹಾಗೂ ನೆಟ್ಟಿಗರು ಕಮೆಂಟ್ಸ್ ಮಾಡುವ ಮೂಲಕ ಧವಳ್ ಅವರ ಪ್ರತಿಭೆಗೆ ಮೆಚ್ಚುಗೆಯನ್ನು ಸೂಚಿಸಿದ್ದಾರೆ. ಒಬ್ಬ ಬಳಕೆದಾರರು “ನನಗೆ ಎರಡು ಕೈಗಳಿದ್ದರೂ ಕೂಡಾ ನಿಮ್ಮಷ್ಟು ನಿಖರವಾಗಿ ಮನಸ್ಸಿಗೆ ಮುದ ನೀಡುವ ಚಿತ್ರವನ್ನು ಬಿಡಿಸಲು ಸಾಧ್ಯವಾಗದುʼ ಎಂದು ಕಮೆಂಟ್ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರರು ʼಅದೆಷ್ಟೋ ವಿಕಲ ಚೇತನರಿಗೆ ನೀವು ಸ್ಪೂರ್ತಿಯ ಚಿಲುಮೆʼ ಎಂದು ಹೊಗಳಿಕೆಯ ಮಾತುಗಳನ್ನಾಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼನಿಮ್ಮ ಈ ಅದ್ಭುತ ಕಲೆಯನ್ನು ವರ್ಣಿಸಲು ಪದಗಳೇ ಸಾಲದುʼ ಎಂದು ಹೇಳಿದ್ದಾರೆ. ಇನ್ನೂ ಅನೇಕರು ಧವಳ್ ಅವರ ಕಲಾ ಪ್ರತಿಭೆಯನ್ನು ಕಂಡು ಮಂತ್ರ ಮುಗ್ಧರಾಗಿದ್ದಾರೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ