ತನ್ನ ಅನುಮತಿ ಇಲ್ಲದೆ ಪತ್ನಿ ತವರಿಗೆ ಹೋಗಿದ್ದಕ್ಕೆ ಪೊಲೀಸ್ ಠಾಣೆ ಗೇಟ್ ಬಳಿ ತಲಾಖ್ ಕೊಟ್ಟ ಪತಿ
ವ್ಯಕ್ತಿಯೊಬ್ಬ ಕ್ಷುಲ್ಲಕ ಕಾರಣಕ್ಕೆ ಪತ್ನಿ ತಲಾಖ್ ನೀಡಿರುವ ಘಟನೆ ಉತ್ತರ ಪ್ರದೇಶದಲ್ಲಿ ವರದಿಯಾಗಿದೆ. ತನ್ನ ಅನುಮತಿ ಇಲ್ಲದೆ ತವರಿಗೆ ಹೋಗಿದ್ದಕ್ಕೆ ನವ ವಿವಾಹಿತನೊಬ್ಬ ಪತ್ನಿಗೆ ತ್ರಿವಳಿ ತಲಾಖ್ ನೀಡಿದ್ದಾನೆ.
ತ್ರಿವಳಿ ತಲಾಖ್ ವಿರುದ್ಧ ಕಾನೂನು ಬಂದಿದ್ದರೂ ಕೂಡ ಅದರ ಬಗ್ಗೆ ಜನರು ತಲೆಕೆಡಿಸಿಕೊಂಡಂತೆ ಕಾಣುತ್ತಿಲ್ಲ. ಸಣ್ಣ ಪುಟ್ಟ ವಿಚಾರಗಳಿಗೆ ತಲಾಖ್ ನೀಡುತ್ತಿರುವವರ ಸಂಖ್ಯೆಯೇನೂ ಕಡಿಮೆ ಇಲ್ಲ. ಪತ್ನಿ ತನಗೆ ಹೇಳದೆ ತವರು ಮನೆಗೆ ಹೋಗಿದ್ದಕ್ಕೆ ನವವಿವಾಹಿತನೊಬ್ಬ ಪೊಲೀಸ್ ಠಾಣೆ ಬಳಿ ಆಕೆಯನ್ನು ಕರೆದೊಯ್ದು ಗೇಟ್ ಬಳಿ ತಲಾಖೆ ನೀಡಿರುವ ಘಟನೆ ಉತ್ತರ ಪ್ರದೇಶದ ಮೊರಾದಾಬಾದ್ನಲ್ಲಿ ನಡೆದಿದೆ.
ಅಬ್ಬಾಸ್ ಎನ್ನುವ ಯುವಕ ತನ್ನ ಪತ್ನಿ ಫಿಜಾಳಿಗೆ ತ್ರಿವಳಿ ತಲಾಖ್ ನೀಡಿದ್ದಾನೆ.ಪೊಲೀಸ್ ಠಾಣೆಯ ಹೊರಗೆ ನಿಂತು ತಲಾಖೆ ನೀಡಿದ್ದಾರೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆದ ನಂತರ, ವಿಚ್ಛೇದನ ನೀಡುವ ಯುವಕನ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಬಗ್ಗೆ ಜನರು ಒತ್ತಾಯಿಸುತ್ತಿದ್ದಾರೆ.
ಅನುಮತಿಯನ್ನು ಪಡೆಯದೆ ತನ್ನ ಪತ್ನಿ ಫಿಜಾ ತನ್ನ ತಾಯಿಯ ಮನೆಗೆ ಹೋಗಿದ್ದಕ್ಕಾಗಿ ವ್ಯಕ್ತಿ ತನ್ನ ಪತ್ನಿ ಫಿಜಾಗೆ ತ್ರಿವಳಿ ತಲಾಖ್ ನೀಡಿದ್ದಾನೆ ಎಂದು ಮೂಲಗಳು ಹೇಳಿವೆ.
ಮತ್ತಷ್ಟು ಓದಿ: ಪತ್ನಿಗೆ ಫೋನ್‌ನಲ್ಲೇ ತಲಾಖ್ ನೀಡಿ ಪಾಕಿಸ್ತಾನದ ಯುವತಿಯನ್ನು ವರಿಸಿದ ಭಾರತದ ವ್ಯಕ್ತಿ
ಇದರಿಂದ ಯುವಕ ತನ್ನ ಪತ್ನಿ ಫಿಜಾ ಮೇಲೆ ಕೋಪಗೊಂಡಿದ್ದ. ಮೊದಲಿಗೆ, ತ್ರಿವಳಿ ತಲಾಖ್ ನೀಡಿದ ವ್ಯಕ್ತಿಯ ಮನವೊಲಿಸಲು ಗ್ರಾಮದ ಜನರು ಸಾಕಷ್ಟು ಪ್ರಯತ್ನಗಳನ್ನು ಮಾಡಿದರು. ಅನುಮತಿಯಿಲ್ಲದೆ ಪೋಷಕರ ಮನೆಗೆ ಹೋಗಿದ್ದಕ್ಕೆ ಪತ್ನಿಯ ಮೇಲೆ ಕೋಪಗೊಂಡ ಯುವಕ ಯಾವುದೇ ಭಯವಿಲ್ಲದೆ ಪತ್ನಿಯನ್ನು ಮೊರಾದಾಬಾದ್ ಸಂಭಾಲ್ ರಸ್ತೆಯಲ್ಲಿರುವ ಕೊತ್ವಾಲಿ ಮೈನಾಥರ್ ಗೇಟ್‌ಗೆ ಕರೆದೊಯ್ದು ನಂತರ ಮೊಬೈಲ್‌ನಲ್ಲಿ ವಿಡಿಯೋ ರೆಕಾರ್ಡ್ ಮಾಡಿದ್ದಾನೆ.
ಹೆಂಡತಿ ಹೆಸರನ್ನು ಹೇಳಿ ತ್ರಿವಳಿ ತಲಾಖ್ ನೀಡಿದ್ದಾನೆ. ಆದರೆ ಇದುವರೆಗೂ ಪೊಲೀಸ್ ಠಾಣೆಯಲ್ಲಿ ಯಾವುದೇ ದೂರು ದಾಖಲಾಗಿಲ್ಲ.
ಈ ಕಾರಣಕ್ಕಾಗಿ ಇನ್ನೂ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ. ವೈರಲ್ ಆಗಿರುವ ವಿಡಿಯೋವನ್ನು ನೋಡಿ ಅವರಿಬ್ಬರಿಗಾಗಿ ಶೋಧ ನಡೆಸಲಾಗುತ್ತಿದೆ. ಅವರಿಬ್ಬರೂ ಮದುವೆಯಾಗಿ ಕೇವಲ ನಾಲ್ಕು ತಿಂಗಳಾಗಿತ್ತು.
ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ