Viral News : ಎಂಬಿಎ, ಎಂಜಿನಿಯರಿಂಗ್, ಬಿಬಿಎ ಓದಿದ ಅನೇಕರು ಟೀ ಸ್ಟಾಲ್ ತೆರೆದ ಸುದ್ದಿಗಳನ್ನು ಇದೇ ತಾಣದಲ್ಲಿ ಓದಿದ್ದೀರಿ. ಈಗ ಇವರ ಸಾಲಿಗೆ ಮತ್ತೊಬ್ಬರು ಸೇರ್ಪಡೆಯಾಗಿದ್ದಾರೆ. ಇಂಗ್ಲಿಷ್ನಲ್ಲಿ ಎಂ.ಎ ಮಾಡಿ ಬ್ರಿಟಿಷ್ ಕೌನ್ಸಿಲ್ನಲ್ಲಿ ಉದ್ಯೋಗಿಯಾಗಿದ್ದ ಇವರು ತಮ್ಮ ಕನಸಿನ ಟೀ ಸ್ಟಾಲ್ ತೆರೆಯಲೆಂದೇ ಈ ಕೆಲಸಕ್ಕೆ ರಾಜೀನಾಮೆ ನೀಡಿದ್ದಾರೆ. ಇದೀಗ ಚಹಾ ಅಂಗಡಿ ನಡೆಸುವಲ್ಲಿ ಬಿಝಿಯಾಗಿದ್ಧಾರೆ. ಲಿಂಕ್ಡ್ಇನ್ನಲ್ಲಿ ಈ ಪೋಸ್ಟ್ ವೈರಲ್ ಆಗುತ್ತಿದೆ.
ಶರ್ಮಿಷ್ಠಾ ಘೋಷ್, ದೆಹಲಿಯ ಕಾಂಟ್ಸ್ ಗೋಪಿನಾಥ್ ಬಜಾರ್ನಲ್ಲಿ (Delhi Cantt’s Gopinath Bazar) ಟೀ ಸ್ಟಾಲ್ ನಡೆಸುತ್ತಿದ್ಧಾರೆ. ನಿವೃತ್ತ ಬ್ರಿಗೇಡಿಯರ್, ಇಂಡಿಯನ್ ಆರ್ಮಿ ಸಂಜಯ್ ಖನ್ನಾ ಇವರ ಕುರಿತು ಲಿಂಕ್ಡ್ಇನ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ಸಂಜೆ ಚಹಾ ಕುಡಿಯಲೆಂದು ಈ ರಸ್ತೆಗೆ ಬಂದಾಗ ಇಂಗ್ಲಿಷ್ನಲ್ಲಿ ಮಾತನಾಡುತ್ತಾ ಚುರುಕಾಗಿ ಅಂಗಡಿ ನಡೆಸುತ್ತಿದ್ದ ಈ ಯುವತಿ ಕಣ್ಣಿಗೆ ಬಿದ್ದಳು. ಮಾತನಾಡಿಸುತ್ತಾ ಆಕೆಯ ಬಗ್ಗೆ ವಿಚಾರಿಸಿದೆ. ತನ್ನ ಹೆಸರು ಶರ್ಮಿಷ್ಠಾ ಘೋಷ್ ಎಂದಳು. ತನ್ನ ಸ್ನೇಹಿತೆ ಭಾವನಾ ರಾವ್ ಜೊತೆ ಸೇರಿ ಈ ಚಹಾ ಅಂಗಡಿ ನಡೆಸುತ್ತಿರುವುದಾಗಿ ಹೇಳಿದಳು. ಭಾವನಾ ಲುಫ್ತಾನ್ಸಾದ ಉದ್ಯೋಗಿಯಾಗಿದ್ದು ಈಕೆಯದು ಈ ಸಣ್ಣ ಹೂಡಿಕೆಯಲ್ಲಿ ಪಾಲಿದೆ. ಸಂಜೆಹೊತ್ತಿಗೆ ಇಬ್ಬರೂ ಸೇರಿ ಈ ಅಂಗಡಿಯನ್ನು ನಡೆಸುತ್ತಾರೆ ಎಂದಿದ್ದಾರೆ ಸಂಜಯ್ ಖನ್ನಾ.
ಇದನ್ನೂ ಓದಿ : ಬಾಬಾ ನೀಮ್ ಕರೋಲಿ; ವಿರಾಟ್, ಅನುಷ್ಕಾ, ಜುಕರ್ಬರ್ಕ್, ಸ್ಟೀವ್ ಜಾಬ್ಸ್ಗೆ ಸ್ಫೂರ್ತಿ ನೀಡಿದ ಅತೀಂದ್ರಿಯ ಸಂತನ ಹಿನ್ನೆಲೆ ಏನು?
ಕನಸನ್ನು ನನಸಾಗಿಸಿಕೊಳ್ಳುವವರು ಎಂದೂ ಉನ್ನತ ಹುದ್ದೆ, ಉನ್ನತ ಮಟ್ಟದ ಉದ್ಯೋಗದ ಬಗ್ಗೆ ಯೋಚಿಸಬಾರದು ಎನ್ನುವುದನ್ನು ನಾನು ಬಲವಾಗಿ ನಂಬುತ್ತೇನೆ. ಗುರಿಯನ್ನು ತಲುಪಲು ಸಣ್ಣ ಮಾರ್ಗಗಳನ್ನೇ ಅನುಸರಿಸಬೇಕು ಎಂದೂ ಖನ್ನಾ ಹೇಳಿದ್ದಾರೆ. ಯಾವ ಕೆಲಸವೂ ಚಿಕ್ಕದು ದೊಡ್ಡದೂ ಅಂತಿಲ್ಲ. ಎಲ್ಲವೂ ನಮ್ಮ ಭಾವನೆಗೆ ಸಂಬಂಧಿಸಿದ್ದು ಮತ್ತು ಕನಸಿಗೂ. ಆದರೆ ಗುರಿ ಮುಟ್ಟುವಲ್ಲಿ ಉತ್ಸಾಹ ಹೊಂದುವುದು ಮುಖ್ಯ. ಶರ್ಮಿಷ್ಠಾ ಘೋಷ್ ಮತ್ತು ಭಾವನಾ ಅವರ ಈ ಪ್ರಯತ್ನವು ನಿಜಕ್ಕೂ ಶ್ಲಾಘನೀಯ ಎಂದು ನೆಟ್ಟಿಗರು ಹೇಳಿದ್ದಾರೆ.
ಇದನ್ನೂ ಓದಿ : ರಸ್ತೆಯಲ್ಲಿ ಬಸ್ ನಿಲ್ಲಿಸಿ ಚಿಕನ್ ತರಲು ಅಂಗಡಿಗೆ ಹೋದ ಲಂಡನ್ ಡ್ರೈವರ್ ವಿಡಿಯೋ ವೈರಲ್; ನೆಟ್ಟಿಗರ ಮಿಶ್ರ ಪ್ರತಿಕ್ರಿಯೆ
ಕಠಿಣ ಪರಿಶ್ರಮ ಮತ್ತು ದೃಢಸಂಕಲ್ಪದಿಂದ ಎಲ್ಲವೂ ಸಾಧ್ಯ. ಸ್ವಂತ ಕನಸನ್ನು ಅನುಸರಿಸುವುದರೊಂದಿಗೆ ಸ್ವಂತ ಉದ್ಯೋಗದಿಂದ ಇತರರಿಗೂ ಅವಕಾಶ ಕಲ್ಪಿಸಿಕೊಡುವುದು ಹೆಚ್ಚು ಪ್ರಶಂಸನೀಯ ಎಂದಿದ್ಧಾರೆ ಅನೇಕರು. ಆದರೆ ಕೆಲವರು ಶರ್ಮಿಷ್ಠಾಳ ನಡೆಯನ್ನು ವಿರೋಧಿಸಿದ್ದಾರೆ. ಶರ್ಮಿಷ್ಠಾಳ ತೀರ್ಮಾನ ನನಗೆ ಇಷ್ಟವಾಗುತ್ತಿಲ್ಲ. ಇಂಗ್ಲಿಷ್ನಲ್ಲಿ ಎಂ. ಎ. ಓದಿ ಚಹಾ ಅಂಗಡಿ ಯಾಕೆ ನಡೆಸುವುದು? ಕಚೇರಿ ಕೆಲಸ ಬೇಡವೆಂದರೆ ಬೋಧನೆಯಲ್ಲಿ ತೊಡಗಿಕೊಳ್ಳಬಹುದಿತ್ತು. ಚಹಾದ ಅಂಗಡಿಯನ್ನೇ ಮಾಡುವುದಾದಲ್ಲಿ ಎಂ.ಎ. ಮುಗಿಯುವ ತನಕ ಯಾಕೆ ಕಾಯಬೇಕಿತ್ತು? ಎಂದಿದ್ಧಾರೆ ಒಬ್ಬರು. ಅಸಂಘಟಿತ ವ್ಯವಹಾರವು ದೇಶದ ಆರ್ಥಿಕತೆಗೆ ಒಳ್ಳೆಯದಲ್ಲ. ಇಂಥವರಿಗೆ ಅನ್ಯಥಾ ಪ್ರಚಾರ ನೀಡುತ್ತಿದ್ದೀರಿ ಎಂದಿದ್ದಾರೆ ಇನ್ನೊಬ್ಬರು.
ಇದನ್ನೂ ಓದಿ : ಏರ್ ಇಂಡಿಯಾ ವಿಮಾನದಲ್ಲಿ ಮದುವೆ ನಿವೇದನೆ ಮಾಡಿಕೊಂಡ ವ್ಯಕ್ತಿಯ ವಿಡಿಯೋ ವೈರಲ್
ಇಂಗ್ಲಿಷ್ ಮಾತನಾಡದ ಚಹಾ ಅಂಗಡಿಯವರೂ ಇಂಥ ಕನಸುಗಳನ್ನು ಹೊಂದಿದ್ಧಾರೆ. ಕಷ್ಟಪಟ್ಟು ಕೆಲಸವನ್ನೂ ಮಾಡುತ್ತಾರೆ. ಈಕೆಗೆ ಇಂಗ್ಲಿಷ್ ಗೊತ್ತಿದೆ ಮತ್ತು ಮಾತನಾಡುತ್ತಾರೆ ಅಷ್ಟೇ ವ್ಯತ್ಯಾಸ. ಇಲ್ಲಿ ಬೇಕಾಗಿರುವುದು ಕನಸು ಮತ್ತು ಅದನ್ನು ಸಾಧ್ಯವಾಗಿಸಿಕೊಳ್ಳಲು ಶ್ರಮ, ಶ್ರದ್ಧೆ. ಇವಳಿಗೆ ಶುಭವಾಗಲಿ ಎಂದಿದ್ದಾರೆ ಮಗದೊಬ್ಬರು.
ಇದನ್ನು ಓದಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 6:26 pm, Mon, 16 January 23