Online Fraud : ವ್ಯಕ್ತಿಯೊಬ್ಬರು ದೊಡ್ಡ ಹೊಸ ಟಿವಿಯಲ್ಲಿ ವಿಶ್ವ ಫುಟ್ಬಾಲ್ ವೀಕ್ಷಿಸಬೇಕೆಂಬ ಕನಸನ್ನು ಹೊತ್ತು ಫ್ಲಿಪ್ಕಾರ್ಟ್ನಲ್ಲಿ (Flipkart) ರೂ. 1 ಲಕ್ಷ ಪಾವತಿಸಿ ಸೋನಿ ಟಿವಿ (Sony TV) ಆರ್ಡರ್ ಮಾಡಿದ್ದಾರೆ. ಆದರೆ ಸೋನಿ ಬಾಕ್ಸ್ನಲ್ಲಿ ಅವರಿಗೆ ಥಾಮ್ಸನ್ ಟಿವಿ ತಲುಪಿದೆ. ಈ ವಂಚನೆಯಿಂದ ಮನನೊಂದ ವ್ಯಕ್ತಿ ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ಪೋಸ್ಟ್ ಹಾಕಿದ್ದಾರೆ. ವೈರಲ್ ಆಗಿರುವ ಈ ಪೋಸ್ಟ್ನಡಿ ಅನೇಕರು ತಮ್ಮ ಅಭಿಪ್ರಾಯಗಳನ್ನು ಮತ್ತು ಅನುಭವಗಳನ್ನು ಹಂಚಿಕೊಂಡಿದ್ದಾರೆ. ಹಾಗೆಯೇ ಕೆಲ ಸಲಹೆ ಸೂಚನೆಗಳನ್ನೂ ಕೊಟ್ಟಿದ್ದಾರೆ. ಗ್ರಾಹಕಸೇವೆಗೆ ಸಂಪರ್ಕಿಸಿದಾಗ ಸರಿಯಾಗಿ ಸ್ಪಂದಿಸದ ಫ್ಲಿಪ್‌ಕಾರ್ಟ್ ಸಾಮಾಜಿಕ ಜಾಲತಾಣದಲ್ಲಿ ಕೂಡ ಪ್ರತಿಕ್ರಿಯಿಸಿದೆ.
ಇದನ್ನೂ ಓದಿ : Viral Video: ಸಪ್ತ ಸಾಗರದಾಚೆ ಎಲ್ಲೋ; ಅಮ್ಮ ಮಗನ ಮಲ್ಟಿಲಿಂಗ್ವಲ್ ಮ್ಯಾಷಪ್
ಆರ್ಯನ್ ಎಂಬ X ಖಾತೆದಾರರು ತಮಗಾದ ಈ ವಂಚನೆ ಕುರಿತು ಸಾಕ್ಷಿ ಸಮೇತ ಪೋಸ್ಟ್ ಮಾಡಿದ್ದಾರೆ. ನಕಲಿ ಪಾರ್ಸೆಲ್ ತಲುಪುತ್ತಿದ್ದಂತೆ ತಕ್ಷಣವೇ ಫ್ಲಿಪ್‌ಕಾರ್ಟ್‌ನ ಗ್ರಾಹಕ ಸೇವೆಯೊಂದಿಗೆ ಸಂಪರ್ಕ ಸಾಧಿಸಿ ಅವರು ತಮಗಾದ ಸಮಸ್ಯೆಯನ್ನು ತಿಳಿಸಿದ್ದಾರೆ. ಆದರೆ ಎರಡು ವಾರಗಳ ನಂತರವೂ ಸಮಸ್ಯೆ ಬಗೆಹರಿಯದಿದ್ದಾಗ ಸಾಮಾಜಿಕ ಜಾಲತಾಣದಲ್ಲಿ ಅವರು ಪೋಸ್ಟ್ ಮಾಡಿದ್ದಾರೆ.
I had purchased a Sony tv from @Flipkart on 7th oct, delivered on 10th oct and sony installation guy came on 11th oct, he unboxed the tv himself and we were shocked to see a Thomson tv Inside Sony box that too with no accessories like stand,remote etc 1/n pic.twitter.com/iICutwj1n0
— Aryan (@thetrueindian) October 25, 2023
‘ನಾನು ಅಕ್ಟೋಬರ್ 7 ರಂದು @Flipkart ನಿಂದ Sony ಟಿವಿ ಖರೀದಿಸಿದೆ, ಅಕ್ಟೋಬರ್ 10ರಂದು ಸೋನಿಯಿಂದ ವ್ಯಕ್ತಿಯೊಬ್ಬರು ಕರೆ ಮಾಡಿ ಅಕ್ಟೋಬರ್ 11 ರಂದು ಇನ್ಸ್ಟಾಲ್ಲೇಷನ್ ಮಾಡಲು ಬರಲಿದ್ದೇನೆ ಎಂದು ತಿಳಿಸಿದರು. ಆ ಪ್ರಕಾರ ಅವರೇ ಅನ್‌ಬಾಕ್ಸ್ ಮಾಡಿದರು. ಆದರೆ ಸೋನಿ ಬಾಕ್ಸ್ನಲ್ಲಿ ಒಳಗಿದ್ದ ಟಿವಿ ಥಾಮ್ಸನ್ ಕಂಪೆನಿಯದ್ದಾಗಿತ್ತು. ಇಷ್ಟೇ ಅಲ್ಲ ಸ್ಟ್ಯಾಂಡ್, ರಿಮೋಟ್ ಮತ್ತಿತರೇ ಸಾಮಾನುಗಳಿಲ್ಲದ ಬಾಕ್ಸ್ ಅದಾಗಿತ್ತು. ಇದನ್ನು ನೋಡಿ ಇಬ್ಬರೂ ಆಘಾತಕ್ಕೆ ಒಳಗಾದೆವು.’ ಎಂದು ಆರ್ಯನ್ ಪೋಸ್ಟ್ ಮಾಡಿದ್ದಾರೆ.
ಇದನ್ನೂ ಓದಿ : Viral Video: ಚಿಕಿತ್ಸೆಯಿಲ್ಲದ ಅಪರೂಪದ ಕಾಯಿಲೆಗಳಿಗೆ ಜಗ್ಗದೇ ಬದುಕುತ್ತಿರುವ ನಿಶಾ
‘ಈ ಕುರಿತು ಫ್ಲಿಪ್‌ಕಾರ್ಟ್ ಕಸ್ಟಮರ್ ಕೇರ್‌ಗೆ ತಕ್ಷಣವೇ ತಿಳಿಸಿದೆ. ಅವರು ಟಿವಿಯ ಫೋಟೋಗಳನ್ನು ಅಪ್ಲೋಡ್ ಮಾಡಲು ತಿಳಿಸಿದರು. ಆ ಪ್ರಕಾರ ಮಾಡಿದೆ. ಆದರೆ ಎರಡು ಮೂರು ಬಾರಿ ಅಪ್ಲೋಡ್ ಮಾಡಲು ತಿಳಿಸಿದರು. ಆಗಲೂ ಮಾಡಿದೆ. ಆದರೆ ಈತನಕವು ಅವರಿಂದ ಯಾವುದೇ ಪ್ರತಿಕ್ರಿಯೆ ಇಲ್ಲ’ ಎಂದು ಆರ್ಯನ್ ಹೇಳಿದ್ದಾರೆ. ನೆಟ್ಟಿಗರ ಪಾಲ್ಗೊಳ್ಳುವಿಕೆಯಿಂದ ಈ ಥ್ರೆಡ್ ಬಲುಬೇಗನೇ ವೈರಲ್ ಆಗಿದೆ. ನೀವು ‘ಓಪನ್ ಬಾಕ್ಸ್ ಡೆಲಿವರಿ’ ಯನ್ನು ಯಾಕೆ ಆಯ್ಕೆ ಮಾಡಲಿಲ್ಲ ಎಂದು ಅನೇಕರು ಅಚ್ಚರಿಯಿಂದ ಕೇಳಿದ್ದಾರೆ. ಈ ಟಿವಿಯನ್ನು Omnitechretail ಎಂಬ ಮಾರಾಟಗಾರರಿಂದ ಖರೀದಿಸಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಫ್ಲಿಪ್‌ಕಾರ್ಟ್ ಕ್ಷಮೆ ಯಾಚಿಸಿ, ವಿವರಗಳನ್ನು ಮೆಸೇಜ್ ಮಾಡಲು ವಿನಂತಿಸಿಕೊಂಡಿದೆ.
ಇದನ್ನು ಓದಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 1:06 pm, Sat, 28 October 23