‘ಚಂದ್ರನ ಬಳಿ ಸಿಲುಕಿಕೊಂಡಿದ್ದೇನೆ’; ಇದು ನಮ್ಮ ಅಧಿಕಾರ ವ್ಯಾಪ್ತಿಯಲ್ಲಿಲ್ಲ ಎಂದ ಮುಂಬೈ ಪೊಲೀಸರು

Mumbai Police : ಚಂದ್ರನ ಬಳಿ ಹೋದಮೇಲೆಯೂ ನಮ್ಮ ಮೇಲೆ ನಂಬಿಕೆ ಇರಿಸಿಕೊಂಡಿದ್ದೀರಲ್ಲ, ಸಂತೋಷ! ಎಂದು ಪೊಲೀಸರು ಉತ್ತರಿಸಿದ್ದಾರೆ. ನೆಟ್ಟಿಗರು ಮುಂಬೈ ಪೊಲೀಸರ ಉತ್ತಮ ಅಭಿರುಚಿಯ ಹಾಸ್ಯಪ್ರಜ್ಞೆಯನ್ನು ಕೊಂಡಾಡುತ್ತಿದ್ಧಾರೆ.

‘ಚಂದ್ರನ ಬಳಿ ಸಿಲುಕಿಕೊಂಡಿದ್ದೇನೆ’; ಇದು ನಮ್ಮ ಅಧಿಕಾರ ವ್ಯಾಪ್ತಿಯಲ್ಲಿಲ್ಲ ಎಂದ ಮುಂಬೈ ಪೊಲೀಸರು
ಮುಂಬೈ ಪೊಲೀಸರ್ ಟ್ವೀಟ್​ಗೆ ಸಾರ್ವಜನಿಕರೊಬ್ಬರ ಫೋಟೋ ಟ್ವೀಟ್​
Edited By:

Updated on: Jan 31, 2023 | 1:15 PM

Viral News : ನೀವು ಯಾವುದೇ ರೀತಿಯ ತೊಂದರೆ ಎದುರಿಸಿದಲ್ಲಿ ನಾವಿದ್ದೇವೆ! Dial 100 ಎಂದು ಮುಂಬೈ ಪೊಲೀಸರು ಇತ್ತೀಚೆಗೆ ಟ್ವೀಟ್ ಮಾಡಿದ್ದರು. ಸಾಕಷ್ಟು ಪ್ರತಿಕ್ರಿಯೆಗಳ ಮಹಾಪೂರ ಈ ಪೋಸ್ಟ್​ಗೆ ದೊರೆತಿತ್ತು. ಅದರಲ್ಲಿ ಒಂದು ಫೋಟೋ ಟ್ವೀಟ್​ಗೆ ಪೊಲೀಸರು ಉತ್ತರಿಸಿದ್ದಾರೆ. ಈ ಫೋಟೋದಲ್ಲಿ ಚಂದ್ರನ ಮೇಲಿರುವ ಗಗನಯಾನಿಯ ಚಿತ್ರವಿದ್ದು, ‘ನಾನಿಲ್ಲಿ ಸಿಲುಕಿಕೊಂಡಿದ್ದೇನೆ’ ಎಂದು ಟ್ವೀಟ್ ಮಾಡಿದ್ದಾರೆ. ಅದಕ್ಕೆ ಪೊಲೀಸರು, ‘ಇದು ನಮ್ಮ ವ್ಯಾಪ್ತಿಯಲ್ಲಿ ಬರಲಾರದು’ ಎಂದಿದ್ದಾರೆ.

ಸಾರ್ವಜನಿಕರಲ್ಲಿ ಸಾಕಷ್ಟು ವಿಷಯಗಳ ಬಗ್ಗೆ ಅರಿವು ಮೂಡಿಸಲು ಮುಂಬೈ ಪೊಲೀಸರು ಆಗಾಗ ಇಂಥ ಮೀಮ್​ಗಳನ್ನು ಟ್ವೀಟ್ ಮಾಡುತ್ತಿರುತ್ತಾರೆ. ‘ನೀವು ಯಾವುದೇ ರೀತಿಯ ತೊಂದರೆಗೆ ಒಳಗಾದರೆ ಕಾಯಬೇಡಿ, Dial100’ ಎಂದು ಸೋಮವಾರದಂದು ವಿಡಿಯೋ ಟ್ವೀಟ್ ಮಾಡಿದ್ದರು. ಅದಕ್ಕೆ ಪ್ರತಿಯಾಗಿ ನೆಟ್ಟಿಗರೊಬ್ಬರು ಹೀಗೆ ಚಂದ್ರನ ಮೇಲಿರುವ ಗಗನಯಾತ್ರಿಯ ಫೋಟೋ ಟ್ವೀಟ್ ಮಾಡಿ ‘ನಾನಿಲ್ಲಿ ಸಿಲುಕಿಕೊಂಡಿದ್ದೇನೆ’ ಎಂದು ಟ್ಯಾಗ್ ಮಾಡಿದರು. ತಕ್ಷಣವೇ ಪೊಲೀಸರು ಇದು ನಮ್ಮ ಅಧಿಕಾರ ವ್ಯಾಪ್ತಿಗೆ ಒಳಪಟ್ಟಿಲ್ಲ ಎಂದು ತಮಾಷೆಯಾಗಿಯೇ ಉತ್ತರಿಸಿದರು.

ಇದನ್ನೂ ಓದಿ : ವೃದ್ಧರೊಬ್ಬರು ಕೋತಿಗೆ ರೊಟ್ಟಿ ಕೊಡಲು ಪ್ರಯತ್ನಿಸುತ್ತಿರುವ ಆಪ್ತವಾದ ವಿಡಿಯೋ ವೈರಲ್

ಆದರೆ, ನೀವು ಚಂದ್ರನ ಬಳಿ ಹೋದಮೇಲೆಯೂ ನಮ್ಮ ಮೇಲೆ ನಂಬಿಕೆ ಇರಿಸಿಕೊಂಡಿದ್ದೀರಲ್ಲ ಇದು ಸಂತೋಷದ ವಿಷಯ ಎಂದು ಪೊಲೀಸರು ಮತ್ತೊಂದು ಪ್ರತಿಕ್ರಿಯೆ ನೀಡಿದರು. ಇದೆಲ್ಲವನ್ನೂ ಗಮನಿಸುತ್ತಿದ್ದ ನೆಟ್ಟಿಗರು ಪೊಲೀಸರ ಉತ್ತಮ ಅಭಿರುಚಿಯ ಪ್ರತಿಕ್ರಿಯೆಯನ್ನು ಶ್ಲಾಘಿಸಿದ್ದಾರೆ.

ಇದನ್ನೂ ಓದಿ : ಪುಟ್ಟಾ, ನಾವೇ ಹೀಗೆ ನಿಧಾನಕ್ಕೆ ರಸ್ತೆ ದಾಟಬೇಕು; ಆನೆಯಮ್ಮನ ಪ್ರಾತ್ಯಕ್ಷಿಕೆ ವಿಡಿಯೋ ವೈರಲ್

ಈ ಹಿಂದೆ ಶಾರುಖ್ ಖಾನ್​ ಅಭಿಮಾನಿಯೊಬ್ಬರು ಒನ್​ ಟೈಮ್ ಪಾಸ್​ವರ್ಡ್​ (OTP) ಕೇಳಿದಾಗ, ಮುಂಬೈ ಪೊಲೀಸರು, 100 ಎಂದು ಉತ್ತರಿಸಿದ್ದರು! ಆಗಲೂ ನೆಟ್ಟಿಗರು, ಮುಂಬೈ ಪೊಲೀಸರ ಈ ನವಿರಾದ ಹಾಸ್ಯಪ್ರಜ್ಞೆ ನಿಜಕ್ಕೂ ಅವರ ಬಗ್ಗೆ ಇನ್ನಷ್ಟು ಗೌರವ ಮತ್ತು ಸ್ನೇಹಭಾವ ತಂದಿದೆ ಎಂದಿದ್ದರು.

ಇದನ್ನು ಓದಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​ ಓದಲು ಕ್ಲಿಕ್ ಮಾಡಿ

Published On - 1:12 pm, Tue, 31 January 23