ಸಾವಿರಾರು ರೂ. ಹಣ ಕೊಟ್ಟು ಯಾವ್ಯಾವುದೋ ಬ್ರ್ಯಾಂಡ್ನ ಆಲ್ಕೋಹಾಲ್ ಕುಡಿಯುವವರಿಗೇನೂ ನಮ್ಮಲ್ಲಿ ಕಡಿಮೆಯಿಲ್ಲ. ಕೆಲವೊಮ್ಮೆ ವಿದೇಶಗಳಿಂದ ಲಕ್ಷಾಂತರ ರೂ. ಮೌಲ್ಯದ ವೈನ್, ಬಿಯರ್, ವಿಸ್ಕಿಯನ್ನು ತರಿಸಿ ಕುಡಿಯುವವರೂ ಇದ್ದಾರೆ. ಆದರೆ, ಇಲ್ಲೊಂದು ವಿಸ್ಕಿ ಬಾಟಲಿಗೆ ಬರೋಬ್ಬರಿ 1 ಕೋಟಿ ರೂ. ನೀಡಲಾಗಿದೆಯಂತೆ. 1 ಕೋಟಿ ರೂ.ಗೆ ವಿಸ್ಕಿ ಬಾಟಲಿಯನ್ನು ಹರಾಜಿನಲ್ಲಿ ಪಡೆಯಲಾಗಿದ್ದು, ಈ ಸುದ್ದಿ ಕೇಳಿಯೇ ಮದ್ಯಪ್ರಿಯರಿಗೆ ಅಮಲು ಏರಿದೆಯಂತೆ. ಇನ್ನೇನಾದರೂ ಈ ವಿಶ್ವದ ದುಬಾರಿ ವಿಸ್ಕಿಯನ್ನು ಕುಡಿದರೆ ಅವರ ಗತಿ ಏನಾಗಬಹುದು!
ಅಷ್ಟಕ್ಕೂ 1 ಕೋಟಿ ರೂ. ಕೊಡುವಂಥದ್ದು ಈ ವಿಸ್ಕಿ ಬಾಟಲಿಯಲ್ಲೇನಿದೆ? ಎಂದು ನಿಮಗೆ ಪ್ರಶ್ನೆ ಕಾಡುತ್ತಿರಬಹುದು. ಇದು ಅಂತಿಂಥ ವಿಸ್ಕಿಯಲ್ಲಿ ಸ್ವಾಮಿ! ಈ ವಿಸ್ಕಿ ಬಾಟಲಿ ಇಡೀ ವಿಶ್ವದ ಅತಿ ಪುರಾತನ ವಿಸ್ಕಿಯಾಗಿದೆ. ಹಳೆಯದಾದಷ್ಟೂ ಅದಕ್ಕೆ ಬೆಲೆ ಜಾಸ್ತಿಯಾದ್ದರಿಂದ ಈ ವಿಸ್ಕಿ ಬಾಟಲಿಯನ್ನು 1 ಕೋಟಿ ರೂ. ಹರಾಜು ಹಾಕಲಾಗಿದೆ.
ಈ ವಿಸ್ಕಿಗೆ ಸುಮಾರು 250 ವರ್ಷದ ಇತಿಹಾಸವಿದೆ. ಈ ಬಾಟಲಿಯನ್ನು ಈಗ 1,02,63,019 ರೂ.ಗೆ ಹರಾಜಿನಲ್ಲಿ ಖರೀದಿಸಲಾಗಿದೆ. 1860ರಲ್ಲಿ ಈ ವಿಸ್ಕಿಯನ್ನು ಬಾಟಲಿಗೆ ಹಾಕಲಾಗಿದ್ದು, ಆದರೆ, ಇದರೊಳಗಿನ ವಿಸ್ಕಿಯನ್ನು ಅದಕ್ಕಿಂತಲೂ ಶತಮಾನಗಳಷ್ಟು ಹಳೆಯದು ಎನ್ನಲಾಗಿದೆ. ಈ ವಿಸ್ಕಿ ಒಂದು ಕಾಲದಲ್ಲಿ ಜಾನ್ ಫೀರ್ಪಾಯಿಂಟ್ ಮೊರ್ಗನ್ ಎಂಬ ಫೈನಾನ್ಷಿಯರ್ ಪಾಲಾಗಿತ್ತು. ಅವರ ಮರಣದ ನಂತರ ಅವರ ಎಸ್ಟೇಟ್ನಿಂದ ಈ ವಿಸ್ಕಿ ಬಾಟಲಿಯನ್ನು ತೆಗೆದುಕೊಂಡು ಬರಲಾಗಿತ್ತು.
ಒಟ್ಟಾರೆ, ಜಗತ್ತಿನ ಅತಿ ಹಳೆಯ ವಿಸ್ಕಿ ಈಗ ಮತ್ತೆ ಸುದ್ದಿಯಾಗಿದ್ದು, ಈ ಬಾಟಲಿಯನ್ನು ಹರಾಜು ಹಿಡಿದವನ ಬಗ್ಗೆ ಸಂಪೂರ್ಣ ಮಾಹಿತಿ ಲಭ್ಯವಾಗಿಲ್ಲ.
ಇದನ್ನೂ ಓದಿ:Viral Video: ಈ ಮಕ್ಕಳ ಫೈಟಿಂಗ್ ಮುಂದೆ WWE ಶೋ ಕೂಡ ವೇಸ್ಟ್; ಸುಳ್ಳೆನಿಸಿದರೆ ಈ ವಿಡಿಯೋ ನೋಡಿ…
ಇದನ್ನೂ ಓದಿ: Shocking News: ಮನುಷ್ಯರ ಮೂತ್ರದಿಂದ ತಯಾರಾದ ಬಿಯರ್ಗೆ ಭಾರೀ ಬೇಡಿಕೆ; ಏನಿದು ವಿಚಿತ್ರ ಸುದ್ದಿ?
(This Whiskey Bottle Sold at Auction For Over Rs 1 Crore Do You Know the specialty)