Freedom Fighters: 77ನೇ ಸ್ವಾತಂತ್ರ್ಯೋತ್ಸವವನ್ನು ಎಐ ಕಲಾವಿದರು ತಮ್ಮದೇ ಆದ ರೀತಿಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಆಚರಿಸಿ ನೆಟ್ಟಿಗರ ಗಮನ ಸೆಳೆಯುತ್ತಿದ್ದಾರೆ ಎಂದರೆ ಬಾರ್ಬಿಯ ಗುಲಾಬಿ ಜ್ವರದಿಂದ ಇವರು ಹೊರಬಂದಿರುವಂತೆ ಕಾಣುತ್ತಿದೆ. ಭಾರತೀಯ ಸ್ವಾತಂತ್ರ್ಯ ಹೋರಾಟಗಾರರು ಸೆಲ್ಫೀ ತೆಗೆದುಕೊಳ್ಳುವುದನ್ನು ಈ ಕಲಾವಿದರು ಕಲ್ಪಿಸಿಕೊಂಡಿದ್ದಾರೆ. ಎಐ (AI) ಇವರ ಕಲ್ಪನೆಯನ್ನು ಸಮರ್ಥವಾಗಿ ಅಭಿವ್ಯಕ್ತಗೊಳಿಸಲು ಸಹಾಯ ಮಾಡಿದೆ. ಮಹಾತ್ಮಾ ಗಾಂಧೀ (Mahatma Gandhiji) ಭಗತ್ ಸಿಂಗ್, ಸುಭಾಷ್ ಚಂದ್ರ ಬೋಸ್, ಝಾನ್ಸೀರಾಣಿ ಲಕ್ಷ್ಮೀಬಾಯಿ, ಮಂಗಲ್ ಪಾಂಡೆ, ಬಾಲಗಂಗಾಧರ ತಿಲಕ್ ಮುಂತಾದವರನ್ನು ಈ ಎಐ ಸರಣಿಯಲ್ಲಿ ನೋಡಬಹುದಾಗಿದೆ.
ಇದನ್ನೂ ಓದಿ : Viral: ದೆಹಲಿಯ ಗ್ರೇಟರ್ ಕೈಲಾಶ್ನಲ್ಲಿ ಬೆಡ್ ಜೊತೆ ಟಾಯ್ಲೆಟ್ ಬಾಡಿಗೆಗೆ ಲಭ್ಯ!
AI ಕಲಾವಿದ ದಿವ್ಯಾಂಶ ಸೋನಿ ಈ ಚಿತ್ರಗಳನ್ನು ಸೃಷ್ಟಿಸಿದ್ದಾರೆ. ಹೈಪರ್-ರಿಯಲಿಸ್ಟಿಕ್ ಕಲಾಕೃತಿಗಳನ್ನು ಇನ್ಸ್ಟಾಗ್ರಾಂನ ಕೆಲವರು ಶ್ಲಾಘಿಸಿದ್ದಾರೆ. ಇನ್ನೂ ಕೆಲವರು ತಕರಾರು ತೆಗೆದಿದ್ದಾರೆ. ಆಸ್ಕರ್ ಐಸಾಕ್ನ ಮಂಗಲ್ ಪಾಂಡೆ ಎಂದು ಒಬ್ಬರು ಹೇಳಿದ್ದಾರೆ. ಸ್ವಾತಂತ್ರ್ಯ ಹೋರಾಟಗಾರರು Z ಜನರೇಷನ್ನವರಾಗಿದ್ದರೆ ಅವರು ಸಾಮಾಜಿಕ ಮಾಧ್ಯಮಗಳಲ್ಲಿ ತಮ್ಮ ಸೆಲ್ಫಿಗಳನ್ನು ಈಗಾಗಲೇ ಪೋಸ್ಟ್ ಮಾಡಬೇಕಿತ್ತಲ್ಲವೆ? ಎಂದು ಕೇಳಿದ್ದಾರೆ ಇನ್ನೊಬ್ಬರು.
ಮುಸ್ಲಿಮರು ಸಿಖ್ಖರು ಮತ್ತು ಕ್ರಿಶ್ಚಿಯನ್ನರು ಸ್ವಾತಂತ್ರ್ಯ ಚಳವಳಿಯ ಪ್ರಮುಖ ಭಾಗವಾಗಿದ್ದರು ಎಂಬುದನ್ನು ಭಾರತೀಯರು ಏಕೆ ಮರೆಯುತ್ತಾರೆ? ಮುಹಮ್ಮದ್ ಅಲಿ ಜಿನ್ನಾ, ಲಿಯಾಕತ್ ಅಲಿ ಖಾನ್, ಫಾತಿಮಾ ಜಿನ್ನಾ, ಅಲ್ಲಮಾ ಇಕ್ಬಾಲ್ ಇವರೆಲ್ಲ ನೆನಪಾಗುವುದಿಲ್ಲವ? ನೀವು ಮುಸ್ಲಿಂ ವಿರೋಧಿತನವನ್ನೇ ಉಸಿರಾಡುತ್ತಿದ್ದೀರಿ ಎಂದಿದ್ದಾರೆ ಒಬ್ಬರು. ಭಗತ್ ಸಿಂಗ್, ತಿಲಕ್ ಯಾಕೋ ಬೇರೆ ಥರ ಕಾಣುತ್ತಿದ್ದಾರೆ ಎನ್ನಿಸುತ್ತಿದ್ದಾರೆ ಕೆಲವರು.
ಇದನ್ನೂ ಓದಿ : Viral Video: ಕಾವಾಲಾ ಕಾವು; ರಜಿನಿ ಅಭಿಮಾನಿ ಜಪಾನ್ ರಾಯಭಾರಿ ಯೂಟ್ಯೂಬರ್ನೊಂದಿಗೆ ಡ್ಯಾನ್ಸ್
ಸದ್ಯ ಗಾಂಧೀಜಿ ಕೈಯಲ್ಲಿ ಸೆಲ್ಫಿ ಸ್ಟಿಕ್ ಕೊಟ್ಟಿಲ್ಲ! ಎಂದಿದ್ದಾರೆ ಕೆಲವರು. ಇಂಥ ನಿಮ್ಮ ಕಲ್ಪನೆಗಳನ್ನು ಪೋಸ್ಟ್ ಮಾಡುವುದನ್ನು ನಿಲ್ಲಿಸಿ. ಮುಂದಿನ ಪೀಳಿಗೆಗೆ ಇದೆಲ್ಲವೂ ತಪ್ಪು ಸಂದೇಶವನ್ನು ಕೊಡುತ್ತದೆ, ನಿಮ್ಮ ನಿಮ್ಮ ಕಾರ್ಯಕ್ಷೇತ್ರಗಳಲ್ಲಿ ಘನತೆಯಿಂದ ತೊಡಗಿಕೊಳ್ಳಿ ಎಂದಿದ್ದಾರೆ ಇನ್ನೊಬ್ಬರು. ಅನವಶ್ಯಕವಾಗಿ ಇದೆಲ್ಲವನ್ನೂ ಚಿತ್ರಿಸಿದ್ದೀರಿ, ಇದು ಸರಿಯಲ್ಲ ಎಂದಿದ್ದಾರೆ ಅನೇಕರು.
ಇದನ್ನು ನೋಡಿದ, ಓದಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ