Viral Post: ನೋಡಲು ಟೇಪ್ನಂತೆ ಕಾಣುವ ಇದು 3ಲಕ್ಷ ರೂ. ಬೆಲೆಬಾಳುವ ಬ್ರೇಸ್ ಲೆಟ್
ಐಷಾರಾಮಿ ಫ್ಯಾಶನ್ ಬ್ರ್ಯಾಂಡ್ Balenciaga ಇತ್ತೀಚೆಗೆ ತನ್ನ ಹೊಸ ವಿನ್ಯಾಸದ ಬ್ರೇಸ್ ಲೆಟ್ ಒಂದನ್ನು ಮಾರುಕಟ್ಟೆಗೆ ಪರಿಚಯಿಸಿದೆ.ಈ ಬ್ರೇಸ್ ಲೆಟ್ ತನ್ನದೇ ಆದ ಬಾಲೆನ್ಸಿಯಾಗ ಲೋಗೋವನ್ನು ಸಹ ಹೊಂದಿದೆ. ಈ ಬ್ರೇಸ್ ಲೆಟ್ ಬೆಲೆ $4,400 ಅಂದರೆ ಸುಮಾರು 3,66,834 ರೂಪಾಯಿಗಳು.

ಐಷಾರಾಮಿ ಫ್ಯಾಶನ್ ಬ್ರ್ಯಾಂಡ್ Balenciaga ಇತ್ತೀಚೆಗೆ ತನ್ನ ಹೊಸ ವಿನ್ಯಾಸದ ಬ್ರೇಸ್ ಲೆಟ್ ಒಂದನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಸಾಮಾನ್ಯವಾಗಿ ಈ ಬ್ರೇಸ್ ಲೆಟ್ ನೋಡಿದಾಗ ನಿಮಗಿದ್ದು ಸೆಲ್ಲೋ ಟೇಪ್ ರೀತಿಯಲ್ಲಿ ಕಾಣಿಸಬಹುದು. ಆದರೆ ಇದು ಲಕ್ಷ ಲಕ್ಷ ಬೆಲೆ ಬಾಳುವ ಆಭರಣ. ಈ ಬ್ರೇಸ್ ಲೆಟ್ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ.
ಐಷಾರಾಮಿ ಫ್ಯಾಶನ್ ಬ್ರ್ಯಾಂಡ್ ಬಾಲೆನ್ಸಿಯಾಗ ಈ ಬ್ರೇಸ್ ಲೆಟ್ ತನ್ನದೇ ಆದ ಬಾಲೆನ್ಸಿಯಾಗ ಲೋಗೋವನ್ನು ಸಹ ಹೊಂದಿದೆ. ಈ ಬ್ರೇಸ್ ಲೆಟ್ ಬೆಲೆ $4,400 ಅಂದರೆ ಸುಮಾರು 3,66,834 ರೂಪಾಯಿಗಳು. ಇತ್ತೀಚೆಗಷ್ಟೇ 2024ರ ಪ್ಯಾರಿಸ್ ಫ್ಯಾಶನ್ ವೀಕ್‌ನಲ್ಲಿ ಈ ಬ್ರೇಸ್ ಲೆಟ್ ಅನ್ನು ಅನಾವರಣಗೊಳಿಸಲಾಗಿದೆ.
The luxury fashion house Balenciaga has once again sparked debate with its latest accessory, a bracelet designed to resemble a roll of clear tape, complete with the brand’s logo and a hefty price tag of approximately $4,000!
This is just insane pic.twitter.com/DwUFI7lMl4
— epicthings (@justepicthings) March 23, 2024
ಇದನ್ನೂ ಓದಿ: ಈ ಐಸ್ಕ್ರೀಮ್ ನೋಡಿದ್ರೆ, ಮಕ್ಕಳು ಯಾವಾತ್ತೂ ಐಸ್ಕ್ರೀಮ್ ಬೇಕು ಎಂದು ಹಠ ಮಾಡಲ್ಲ!
ಈ ಬ್ರೇಸ್ ಲೆಟ್ನ @justepicthings ಎಂಬ ಟ್ವಿಟರ್ ಖಾತೆಯಲ್ಲಿ ಮಾರ್ಚ್ 24ರಂದು ಹಂಚಿಕೊಳ್ಳಲಾಗಿದೆ. ಜೊತೆಗೆ ಸಾಕಷ್ಟು ನೆಟ್ಟಿಗರು ವಿಧ ವಿಧವಾಗಿ ಕಾಮೆಂಟ್ ಮಾಡಿದ್ದಾರೆ. ‘ಈ ಟೇಪ್ ಅನ್ನು ಮೂರು ಲಕ್ಷ ಕೊಟ್ಟು ಯಾರು ಖರೀದಿಸುತ್ತಾರೆ?’ ಎಂದು ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿದರೆ ಮತ್ತೊಬ್ಬರು ‘ನನಗೆ 3 ಲಕ್ಷ ಕೊಡಿ ನಾನು ತಂದು ಕೊಡುತ್ತೇನೆ’ ಎಂದು ಕಾಮೆಂಟ್ ಮಾಡಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ